ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಟೌಟ್‌ಗೆ ಸಂಭ್ರಮಿಸಿದ ಪತ್ನಿಯನ್ನು ತಡೆದ ಧೋನಿ; ವಿಡಿಯೊ ವೈರಲ್

MS Dhoni's Reaction: ಪತ್ನಿಯ ಈ ಅತಿಯಾದ ಸಂಭ್ರಮವನ್ನು ನೋಡಿದ ಧೋನಿ, ಜೋರಾಗಿ ನಗುತ್ತಾ ʼಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋʼ ಎಂದು ಸನ್ನೆ ಮಾಡಿದರು. ಧೋನಿಯ ಈ ಮುಗುಳ್ನಗೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ನಾಟೌಟ್‌ಗೆ ಸಂಭ್ರಮಿಸಿದ ಪತ್ನಿಯನ್ನು ತಡೆದ ಧೋನಿ; ವಿಡಿಯೊ ವೈರಲ್

MS Dhoni's Reaction To Wife Sakshi's Mistaken Celebration -

Abhilash BC
Abhilash BC Mar 6, 2026 11:37 AM

ಮುಂಬಯಿ, ಮಾ.6: ಅತ್ಯಂತ ರೋಚಕವಾಗಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಟಿ20 ವಿಶ್ವಕಪ್‌ ಸೆಮಿಫೈನಲ್‌(T20 World Cup) ಪಂದ್ಯದಲ್ಲಿ ಭಾರತ 7 ರನ್‌ ಅಂತರದ ಗೆಲುವು ಸಾಧಿಸಿತ್ತು. ಕೊನೆಯ ಎಸೆತದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದ ವೇಳೆ ಎಂ.ಎಸ್. ಧೋನಿ(MS Dhoni's Reaction) ಪತ್ನಿ ಸಾಕ್ಷಿ ಅವರು ಸಂಭ್ರಮಿಸಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾತಲಾಣದಲ್ಲಿ ಭಾರೀ ವೈರಲ್‌ ಆಗಿದೆ.

ಉತ್ತಮವಾಗಿ ಬ್ಯಾಟಿಂಗ್‌ ನೆಡೆಸುತ್ತಿದ್ದ ಇಂಗ್ಲೆಂಡ್‌ ಇನ್ನೇನು ಗೆಲ್ಲುವ ಹಂತಕ್ಕೆ ತಲುಪಿತ್ತು. ಆದರೆ ಇನಿಂಗ್ಸ್​ 18ನೇ ಓವರ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಎಸೆದ ಚೆಂಡನ್ನು ಇಂಗ್ಲೆಂಡ್ ಬ್ಯಾಟರ್ ಸ್ಯಾಮ್ ಕರನ್ ನೇರವಾಗಿ ಬಾರಿಸಿದರು. ಬುಮ್ರಾ ಚೆಂಡನ್ನು ಅದ್ಭುತವಾಗಿ ಒಂದೇ ಕೈನಲ್ಲಿ ಹಿಡಿದರು. ಇದನ್ನು ನೋಡಿ ಗ್ಯಾಲರಿಯಲ್ಲಿದ್ದ ಸಾಕ್ಷಿ ಅವರು ‘ಕ್ಲೀನ್ ಕ್ಯಾಚ್’ ಎಂದು ಭಾವಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಆದರೆ, ಆ ಚೆಂಡು ಬುಮ್ರಾ ಕೈ ಸೇರುವ ಮೊದಲು ನೆಲಕ್ಕೆ ತಗುಲಿತ್ತು.

ಇತ್ತ ಪತ್ನಿಯ ಈ ಅತಿಯಾದ ಸಂಭ್ರಮವನ್ನು ನೋಡಿದ ಧೋನಿ, ಜೋರಾಗಿ ನಗುತ್ತಾ ʼಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋʼ ಎಂದು ಸನ್ನೆ ಮಾಡಿದರು. ಧೋನಿಯ ಈ ಮುಗುಳ್ನಗೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕೆಲ ನೆಟ್ಟಿಗರು ಧೋನಿ ಕ್ರಿಕೆಟ್‌ ದಿಗ್ಗಜನಾಗಿದ್ದರೂ ಅವರ ಪತ್ನಿಗೆ ಇನ್ನೂ ಕ್ರಿಕೆಟ್‌ ಬಗ್ಗೆ ತಿಳಿದಿಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.



ಈ ಹಿಂದೆ ಸಂದರ್ಶನವೊಂದರಲ್ಲಿ ಧೋನಿ ತಮ್ಮ ಪತ್ನಿಯ ಕ್ರಿಕೆಟ್‌ ಜ್ಞಾನದ ಬಗ್ಗೆ ಹೇಳಿದ್ದರು. ಪಂದ್ಯವೊಂದನ್ನು ವೀಕ್ಷಿಸುತ್ತಿದ್ದ ವೇಳೆ ವೈಡ್‌ ಬೌಲ್‌ಗೆ ಕೀಪರ್‌ ಸ್ಟಂಪ್‌ ಮಾಡಿದರು. ಈ ವೇಳೆ ಪತ್ನಿ ನನ್ನೊಂದಿಗೆ ಇದು ಔಟ್‌ ಅಲ್ಲ ಎಂದು ವಾದಿಸಿದರು. ನಾನು ಔಟ್‌ ಎಂದರೂ ಕೂಡ ಆಕೆ ಇಲ್ಲ ವೈಡ್‌ ಬಾಲ್‌ಗೆ ಔಟ್‌ ಸಾಧ್ಯವಿಲ್ಲ ಅಂಪೈರ್‌ ತಮ್ಮ ತೀರ್ಪನ್ನು ಮತ್ತೆ ಹಿಂಪಡೆಯುತ್ತಾರೆ ಎಂದು ವಾದಿಸಿದಲು ಎಂದು ಹೇಳಿ ನಕ್ಕಿದ್ದರು. ಇದೀಗ ಡೆಡ್‌ ಬೌಲ್‌ ಕ್ಯಾಚ್‌ ಕಂಡು ಸಾಕ್ಷಿ ಸಂಭ್ರಮಿಸಿದ್ದಾರೆ.

ಅತಿ ವೇಗದ ಚಾಲನೆ, ಸಂಚಾರ ನಿಯಮ ಉಲ್ಲಂಘನೆಗಾಗಿ ಧೋನಿಗೆ ದಂಡ



ಸದ್ಯ ಧೋನಿ ಮುಂಬರುವ ಐಪಿಎಲ್‌ ಟೂರ್ನಿಗೆ ಸಿದ್ಧತೆ ನೆಡೆಸುತ್ತಿದ್ದಾರೆ. ಈಗಾಗಲೇ ತಂಡದ ಕೆಲ ಸಹ ಆಟಗಾರರೊಂದಿಗೆ ಚೆಪಾಕ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ನೆಟ್ ಸೆಷನ್‌ಗಳಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ ವಿಡಿಯೊಗಳು ವೈರಲ್‌ ಆಗುತ್ತಿದೆ. ಐದು ಬಾರಿಯ ಚಾಂಪಿಯನ್‌ ಚೆನ್ನೈ ತಂಡ 2025 ರ ಕಠಿಣ ಅಭಿಯಾನದ ನಂತರ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ 14 ಪಂದ್ಯಗಳಲ್ಲಿ 10 ಸೋಲುಗಳೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು.