ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿ20 ವಿಶ್ವಕಪ್‌ನಲ್ಲಿ ಭಾರತೀಯ ದಾಖಲೆ ನಿರ್ಮಿಸಿದ ಶ್ರೀ ಚರಣಿ

India Women vs Bangladesh Women: ಚರಣಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಮಹಿಳಾ ಟಿ20ಐ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಿದ್ದರು. ಚರಣಿಯವರ ಈ ಸಾಧನೆಯು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತೀಯ ದಾಖಲೆ ನಿರ್ಮಿಸಿದ ಶ್ರೀ ಚರಣಿ

Shree Charani -

Abhilash BC
Abhilash BC Jun 26, 2026 12:34 PM

ಮ್ಯಾಂಚೇಸ್ಟರ್‌, ಜೂ, 26: ಬಾಂಗ್ಲಾದೇಶ ವಿರುದ್ಧದ ಮಹಿಳಾ ಟಿ20 ವಿಶ್ವಕಪ್‌(women's t20 world cup) ಪಂದ್ಯದಲ್ಲಿ ಭಾರತದ ಶ್ರೀ ಚರಣಿ(Shree Charani) ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. 21 ವರ್ಷದ ಆಟಗಾರ್ತಿ ಎರಡು ವಿಕೆಟ್‌ಗಳನ್ನು ಪಡೆದು, ಹಾಲಿ ಆವೃತ್ತಿಯಲ್ಲಿ 12 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದರೊಂದಿಗೆ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಆಟಗಾರ್ತಿ ಪೂನಂ ಯಾದವ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2019-20ರ ಆವೃತ್ತಿಯಲ್ಲಿ ಪೂನಂ 10 ವಿಕೆಟ್‌ಗಳನ್ನು ಪಡೆದಿದ್ದರು.

ಚರಣಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಮಹಿಳಾ ಟಿ20ಐ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಿದ್ದರು. ಚರಣಿಯವರ ಈ ಸಾಧನೆಯು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 12 ವಿಕೆಟ್‌ಗಳನ್ನು ಪಡೆದ ಅವರ ಸಾಧನೆಯು ಈಗಾಗಲೇ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಜಂಟಿಯಾಗಿ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಾಗಿದೆ.

ವಿಶ್ವಕಪ್ ನಾಕೌಟ್‌ಗೆ ಅರ್ಹತೆ ಪಡೆದ ಈಕ್ವೆಡಾರ್‌; ರಾಷ್ಟ್ರೀಯ ರಜಾದಿನ ಘೋಷಣೆ

ಭಾರತ ತಂಡವು ಇನ್ನೂ ಪಂದ್ಯಗಳನ್ನು ಆಡಲಿರುವಂತೆಯೇ, ಚರಣಿ ಈಗ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಅವರ ಸಾರ್ವಕಾಲಿಕ ಟೂರ್ನಮೆಂಟ್ ದಾಖಲೆಯಾದ 15 ವಿಕೆಟ್‌ಗಳನ್ನು ದಾಟುವ ಹತ್ತಿರದಲ್ಲಿದ್ದಾರೆ. ಅವರ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಯುವ ಎಡಗೈ ಬೌಲರ್ ತನ್ನ ಭಾರತೀಯ ದಾಖಲೆಯನ್ನು ವಿಸ್ತರಿಸಲು ಮಾತ್ರವಲ್ಲದೆ ಮಹಿಳಾ ಟಿ20 ವಿಶ್ವಕಪ್ ಅಭಿಯಾನದಲ್ಲಿ ದಾಖಲಾದ ಅತ್ಯಧಿಕ ವಿಕೆಟ್‌ಗಳ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

ಭಾರತದ ಸೆಮಿ ಆಸೆ ಜೀವಂತ

ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಬಾಂಗ್ಲಾದೇಶ 8 ವಿಕೆಟ್‌ಗೆ 136 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಸ್ಪಿನ್ನರ್‌ಗಳಾದ ರಾಧಾ ಯಾದವ್ (28ಕ್ಕೆ3) ಮತ್ತು ಶ್ರೀಚರಣಿ (21ಕ್ಕೆ2) ಉತ್ತಮ ಬೌಲಿಂಗ್‌ ಸಂಘಟಿಸಿದರು. ಆದರೆ ಭಾರತ ಫೀಲ್ಡಿಂಗ್‌ ಈ ಪಂದ್ಯದಲ್ಲಿಯೂ ಅತ್ಯಂತ ಕಳಪೆ ಮಟ್ಟದಿಂದ ಕೂಡಿತ್ತು. ಪವರ್‌ಪ್ಲೇ ಅವಧಿಯಲ್ಲಿ ನಾಲ್ಕು ಕ್ಯಾಚ್‌ಗಳನ್ನು ಬಿಟ್ಟರು. ಒಟ್ಟಾರೆ ಪಂದ್ಯದಲ್ಲಿ 6 ಕ್ಯಾಚ್‌ಗಳನ್ನು ಬಿಟ್ಟರು. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್‌ಗಳನ್ನು ಬಿಟ್ಟ ಪರಿಣಾಮ ಸೋಲಿಗೆ ತುತ್ತಾಗಿತ್ತು. ಆದರೂ ಈ ತಪ್ಪಿನಿಂ ತಂಡ ಹೊರಬರಲಿಲ್ಲ.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಶಫಾಲಿ ವರ್ಮ ಅರ್ಧಶತಕ ಬಾರಿಸುವ ಮೂಲಕ ನೆರವಾದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಶಫಾಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 53 ರನ್‌ ಗಳಿಸಿದರು. ಸ್ಮೃತಿ ಮಂದಾನ (8) ಬೇಗ ನಿರ್ಗಮಿಸಿದರು. ಯಾಸ್ತಿಕಾ ಭಾಟಿಯಾ (23) ಉಪಯುಕ್ತ ಕೊಡುಗೆ ನೀಡಿದರು. ಅಂತಿಮವಾಗಿ ಭಾರತ 16.5 ಓವರ್‌ಗಳಲ್ಲಿ 5 ವಿಕೆಟ್‌ಗೆ 139 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.