ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ವಿರುದ್ಧದ ಅಂತಿಮ ಟಿ20; ನ್ಯೂಜಿಲೆಂಡ್‌ಗೆ 7 ವಿಕೆಟ್‌ ಜಯ

New Zealand vs India 5th T20I: ಕಳೆದ ಪಂದ್ಯದಿಂದ ಹೊರಗುಳಿದಿದ್ದ ಭುವನೇಶ್ವರ್‌ ಕುಮಾರ್‌ ಈ ಪಂದ್ಯದಲ್ಲಿ ಕಣಕ್ಕಿಳಿದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು 4 ಓವರ್‌ಗಳಲ್ಲಿ 41 ರನ್‌ ಬಿಟ್ಟುಕೊಟ್ಟು ವಿಕೆಟ್‌ ಲೆಸ್‌ ಎನಿಸಿದರು. ಅಕ್ಷರ್‌ ಪಟೇಲ್‌ ಬದಲಿಗೆ ಆಡಿದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕೂಡ ದುಬಾರಿಯಾದರು.

ಭಾರತ ವಿರುದ್ಧದ ಅಂತಿಮ ಟಿ20; ನ್ಯೂಜಿಲೆಂಡ್‌ಗೆ 7 ವಿಕೆಟ್‌ ಜಯ

Tim Seifert -

Abhilash BC
Abhilash BC Nov 1, 2026 4:27 PM

ಹ್ಯಾಮಿಲ್ಟನ್‌, ನ.1: ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು. 3-2 ಅಂತರದಿಂದ ಸರಣಿ ಭಾರತದ ಪಾಲಾಯಿತು.

ಭಾನುವಾರ ಇಲ್ಲ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಇಶಾನ್‌ ಕಿಶನ್‌(61) ಮತ್ತು ನಾಯಕ ಶ್ರೇಯಸ್‌ ಅಯ್ಯರ್‌(50) ಅವರ ಅರ್ಧಶಕದ ನೆರವು ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 191 ರನ್‌ ಬಾರಿಸಿತು. ಜವಾಬಿತ್ತ ನ್ಯೂಜಿಲೆಂಡ್‌ ತಂಡ ಟಿಮ್ ಸೀಫರ್ಟ್ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 195 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಗುರಿ ಬೆನ್ನಟ್ಟಿದ ಕಿವೀಸ್‌ ತಂಡಕ್ಕೆ ಟಿಮ್ ಸೀಫರ್ಟ್ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಉತ್ತಮ ಆರಂಭ ಒದಗಿಸಿದರು. ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದ ಅವರು ಕೇವಲ 50 ಎಸೆತಗಳಿಂದ 11 ಬೌಂಡರಿ ಮತ್ತು 5 ಸಿಕ್ಸರ್‌ ಸಿಡಿಸಿ 93ರನ್‌ ಗಳಿಸಿ 7 ರನ್‌ ಅಂತರದಿಂದ ಶತಕ ವಂಚಿತರಾದರು. ನಿತೀಶ್‌ ಕುಮಾರ್‌ ರೆಡ್ಡಿ ಈ ವಿಕೆಟ್‌ ಕಿತ್ತರು. ಅವರ ವಿಕೆಟ್‌ ಬಿದ್ದರೂ ಅದಾಗಲೇ ಪಂದ್ಯ ಭಾರತದ ಕೈ ಜಾರಿ ಹೋಗಿತ್ತು. ಗ್ಲೆನ್‌ ಫಿಲಿಪ್ಸ್‌ ಈ ಪಂದ್ಯದಲ್ಲಿಯೂ ಬಿರುಸಿನ ಆಟವಾಡಿ ಅಜೇಯ ಅರ್ಧಶತಕ ಸಿಡಿಸಿದರು. 6 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 65 ರನ್‌ ಗಳಿಸಿದರು. ಡೇರಿಯಲ್‌ ಮಿಚೆಲ್‌ 4 ಸಿಕ್ಸರ್‌ ಸಿಡಿಸಿ 29ರನ್‌ಗಳ ಕೊಡುಗೆ ನೀಡಿದರು.

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್‌; ಇಶಾನ್ ಕಿಶನ್ ದಾಖಲೆ

ಕಳೆದ ಪಂದ್ಯದಿಂದ ಹೊರಗುಳಿದಿದ್ದ ಭುವನೇಶ್ವರ್‌ ಕುಮಾರ್‌ ಈ ಪಂದ್ಯದಲ್ಲಿ ಕಣಕ್ಕಿಳಿದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು 4 ಓವರ್‌ಗಳಲ್ಲಿ 41 ರನ್‌ ಬಿಟ್ಟುಕೊಟ್ಟು ವಿಕೆಟ್‌ ಲೆಸ್‌ ಎನಿಸಿದರು. ಅಕ್ಷರ್‌ ಪಟೇಲ್‌ ಬದಲಿಗೆ ಆಡಿದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕೂಡ ದುಬಾರಿಯಾದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಭಾರತ ಪರ ಇಶಾನ್‌ ಕಿಶನ್‌ ಮತ್ತು ಶ್ರೇಯಸ್‌ ಅಯ್ಯರ್‌ ಅರ್ಧಶತಕ ಬಾರಿಸಿದರು. ಗಾಯದಿಂದ ಚೇತರಿಕೆ ಕಂಡು ಕಳೆದ ಪಂದ್ಯದಲ್ಲಿ ಆಡಲಿಳಿದಿದ್ದ ಇಶಾನ್‌ ಕಿಶನ್‌ ಆ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಮತ್ತೆ ಅವರು ಹಳೆಯ ಲಯಕ್ಕೆ ಮರಳಿದರು. ತಲಾ 5 ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿ 61 ರನ್‌ ಕಲೆಹಾಕಿದರು. ಅಯ್ಯರ್‌ ಭರ್ತಿ 50ರನ್‌ ಗಳಿಸಿದರು. ಉಳಿದಂತೆ ನಮನ್‌ದೀರ್‌(33), ನಿತೀಶ್‌ ರೆಡ್ಡಿ(22) ರನ್‌ ಗಳಿಸಿದರು. ನ್ಯೂಜಿಲೆಂಡ್ ಪರ ಆಡಮ್ ಮಿಲ್ನೆ 4 ವಿಕೆಟ್, ನಾಥನ್ ಸ್ಮಿತ್ ಹಾಗೂ ಬ್ಲೇರ್ ಟಿಕ್ನರ್ ತಲಾ 2 ವಿಕೆಟ್‌ ಕಿತ್ತರು.

400 ಸಿಕ್ಸರ್‌ ದಾಖಲೆ

ಒಂದು ಕ್ಯಾಲೆಂಡರ್ ವರ್ಷದಲ್ಲಿ 400 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ತಂಡವಾಗಿ ಭಾರತ ಹೊರಹೊಮ್ಮಿದೆ. ಪಂದ್ಯದಲ್ಲಿ, ಭಾರತೀಯ ಬ್ಯಾಟರ್‌ಗಳು 11 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡದ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 400ಕ್ಕೆ ತಲುಪಿಸಿದರು. ಇದಕ್ಕೂ ಮುನ್ನ ಅತ್ಯುತ್ತಮ ದಾಖಲೆಯು 2025ರಲ್ಲಿ ಆಸ್ಟ್ರಿಯಾದ ಹೆಸರಿನಲ್ಲಿತ್ತು (326 ಸಿಕ್ಸರ್‌ಗಳು).