ಕ್ರಿಕೆಟ್ ದೇವರು ಸಚಿನ್ ಶತಕದ ಶತಕಕ್ಕೆ 14 ವರ್ಷದ ಸಂಭ್ರಮ
On This Day In 2012: ಒಂದು ಕಾಲದಲ್ಲಿ ಅಸಾಧ್ಯವೇ ಎನಿಸಿದ್ದ ದಾಖಲೆಗಳ ರಾಶಿಯನ್ನೇ ಸಚಿನ್ ಪೇರಿಸಿದರು. ಅವರ ಶತಕಗಳ ಶತಕದ ದಾಖಲೆಯನ್ನು ಮೀರಿ ನಿಲ್ಲುವವರು ಸಾಗಿಸಬೇಕಾದ ದಾರಿ ಇನ್ನೂ ದೂರವಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ದ್ವಿಶತಕದ ದಾಖಲೆ ಮಾಡಿದವರೂ ಸಚಿನ್ ಅವರೇ.
Sachin Tendulkar 100th International Century -
ಮುಂಬೈ,ಮಾ.16: ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ ಅಂದರೆ ಮಾ.16 2012ರಂದು(On This Day In 2012) ಭಾರತದ ದಿಗ್ಗಜ ಆಟಗಾರ, ಸಚಿನ್ ತೆಂಡೂಲ್ಕರ್(Sachin Tendulkar) ಅವರು ವಿಶ್ವ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಬಾಂಗ್ಲಾದೇಶದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ಶತಕ ದಾಖಲಿಸಿದ್ದರು. ಈ ಮೂಲಕ ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ ಸಿಡಿಸಿದ ವಿಶ್ವದ ಮೊದಲ ಹಾಗೂ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2011ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗ್ಪುರ ಮೈದಾನದಲ್ಲಿ ಸಚಿನ್ 111ರನ್‌ಗಳಿಸಿದ್ದರು. ಇದು ಸಚಿನ್ ಅವರು ತಮ್ಮ ವೃತ್ತಿ ಜೀವನದಲ್ಲಿ ದಾಖಲಿಸಿದ 99ನೇ ಶತಕವಾಗಿತ್ತು. ಇದಾದ ಸುಮಾರು 369 ದಿನಗಳ ಬಳಿಕ ಸಚಿನ್ ನೂರು ಶತಕಗಳ ದಾಖಲೆಯನ್ನು ನಿರ್ಮಿಸಿದ್ದರು.
16ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸಚಿನ್ ಕ್ರಿಕೆಟ್ ಲೋಕದ ಚಾಂಪಿಯನ್ ಬ್ಯಾಟರ್ ಆಗಿಯಷ್ಟೇ ಬೆಳೆಯಲಿಲ್ಲ. ಕೋಟಿ ಕೋಟಿ ಅಭಿಮಾನಿಗಳ ಹೃದಯಬಡಿತದಲ್ಲಿ ಇದ್ದಾರೆ. ಕ್ರಿಕೆಟ್‌ಪ್ರಿಯರಿಂದ ‘ದೇವರ’ ಪಟ್ಟವೂ ಲಭಿಸಿತು. 24 ವರ್ಷ ಆಡಿದ ಸಚಿನ್ ಒಂದು ಯುಗವನ್ನೇ ಸೃಷ್ಟಿಸಿದರು.
Centuries of Centuries🐐#OnThisDay in 2012 Sachin Tendulkar Scored his 100th Int. Century Vs Bangladesh.
— Sachin Tendulkar Fan Club 🏏 (@CrickeTendulkar) March 16, 2022
India Lost The Game as BAN Played well & Ind Bowlers Failed To Defend 289.@sachin_rt's 49 ODI 100s
Won: 33
Lost: 14
NR/Tie:1/1#SachinTendulkar pic.twitter.com/v3AfV67CtB
ಆರು ಏಕದಿನ ವಿಶ್ವಕಪ್‌ಗಳಲ್ಲಿ ಆಡಿದ್ದ ಸಚಿನ್, 2011ರಲ್ಲಿ ತಮ್ಮ ಕೊನೆಯ ವಿಶ್ವಕಪ್ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದರು. ಮಹೇಂದ್ರಸಿಂಗ್ ಧೋನಿ ಪಡೆಯು ವಿಶ್ವಕಪ್ ಗೆದ್ದು ಸಚಿನ್‌ಗೆ ಸಮರ್ಪಿಸಿತು. ಸಚಿನ್ ವೃತ್ತಿಜೀವನದಲ್ಲಿ ಒಂದು ವೈಶಿಷ್ಟ್ಯವಿದೆ. ಅದೇನೆಂದರೆ ಅವರು ತಮ್ಮ ಆಟವನ್ನು ನೋಡುತ್ತ ಬೆಳೆದ ಹುಡುಗರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡವರು.
ಒಂದು ಕಾಲದಲ್ಲಿ ಅಸಾಧ್ಯವೇ ಎನಿಸಿದ್ದ ದಾಖಲೆಗಳ ರಾಶಿಯನ್ನೇ ಸಚಿನ್ ಪೇರಿಸಿದರು. ಅವರ ಶತಕಗಳ ಶತಕದ ದಾಖಲೆಯನ್ನು ಮೀರಿ ನಿಲ್ಲುವವರು ಸಾಗಿಸಬೇಕಾದ ದಾರಿ ಇನ್ನೂ ದೂರವಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ದ್ವಿಶತಕದ ದಾಖಲೆ ಮಾಡಿದವರೂ ಸಚಿನ್ ಅವರೇ. 2010ರಲ್ಲಿ ಅವರು ಗ್ವಾಲಿಯರ್‌ನಲ್ಲಿ ಈ ಸಾಧನೆ ಮಾಡಿದ ನಂತರ ಈ ಮಾದರಿಯಲ್ಲಿ ಎಂಟು ದ್ವಿಶತಕಗಳು ದಾಖಲಾಗಿವೆ.
ಮುಂಬೈನ ಶಾರದಾಶ್ರಮ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಸಚಿನ್ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದರು. 2013–14ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರವೂ ಅವರ ಜನಪ್ರಿಯತೆ ಕುಂದಿಲ್ಲ. ಅವರು ಇವತ್ತಿಗೂ ಅಭಿಮಾನಿಗಳ ಕಣ್ಮಣಿಯಾಗಿಯೇ ಇದ್ದಾರೆ.