ಸೆ 29 ರಂದು 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಆರಂಭ!
ಸೆಪ್ಟೆಂಬರ್ 29 ರಂದು 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಟೂರ್ನಿಯು ರಾಜಧಾನಿ ದೆಹಲಿಯ ಡಿಎಲ್‌ಟಿಎ ಕ್ರೀಡಾಂಗಣದಲ್ಲಿ ಆರಂಭವಾಗುತ್ತಿದೆ. ಪುರುಷರು, ಮಹಿಳೆಯರು ಹಾಗೂ ಅಂಡರ್–18, ಅಂಡರ್–16, ಅಂಡರ್–14 (ಬಾಲಕ ಮತ್ತು ಬಾಲಕಿಯರ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
 
                                30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್. -
 Ramesh Kote
                            
                                Sep 21, 2025 6:16 PM
                                
                                Ramesh Kote
                            
                                Sep 21, 2025 6:16 PM
                            ನವದೆಹಲಿ: ಭಾರತೀಯ ಟೆನಿಸ್ ಪ್ರತಿಭೆಯನ್ನು ಪೋಷಿಸುವ ಬದ್ಧತೆಯನ್ನು ಮರುಸ್ಥಾಪಿಸಿರುವ ಡಿಸಿಎಂ ಶ್ರೀರಾಮ್ ಲಿಮಿಟೆಡ್, 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಅನ್ನು ಸೆಪ್ಟೆಂಬರ್ 29 ರಿಂದ ರಾಜಧಾನಿ ದೆಹಲಿಯ ಡಿಎಲ್‌ಟಿಎ ಕ್ರೀಡಾಂಗಣದಲ್ಲಿ ಪ್ರಾರಂಭಿಸುತ್ತಿದೆ. ಡಿಸಿಎಂ ಶ್ರೀರಾಮ್ ಲಿಮಿಟೆಡ್ ಬೆಂಬಲಿತವಾಗಿ ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (AITA) ಮತ್ತು ದೆಹಲಿ ಲಾನ್ ಟೆನಿಸ್ ಅಸೋಸಿಯೇಶನ್ (DLTA) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್, ಭಾರತದ ಅತಿ ದೊಡ್ಡ ದೇಶಿ ಟೆನಿಸ್ ಚಾಂಪಿಯನ್‌ಶಿಪ್ ಆಗಿದ್ದು, ದೇಶದ ಮೂಲೆ-ಮೂಲೆಗಳಿಂದ ಶ್ರೇಷ್ಠ ಆಟಗಾರರನ್ನು ಆಕರ್ಷಿಸುತ್ತದೆ.
ಪುರುಷರು, ಮಹಿಳೆಯರು ಹಾಗೂ ಅಂಡರ್–18, ಅಂಡರ್–16, ಅಂಡರ್–14 (ಬಾಲಕ ಮತ್ತು ಬಾಲಕಿಯರ) ವಿಭಾಗಗಳನ್ನು ಒಳಗೊಂಡ ಏಕೈಕ ಸಮಗ್ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿರುವ ಫೆನೆಸ್ಟಾ ಓಪನ್, ವರ್ಷಗಳಿಂದ ರೋಹನ್ ಬೋಪಣ್ಣ, ಸೊಮದೇವ್ ದೇವ್ವರ್ಮನ್, ಯುಕಿ ಭಾಂಬ್ರಿ, ಸಾನಿಯಾ ಮಿರ್ಜಾ, ರುತುಜಾ ಭೋಸಲೆ ಮೊದಲಾದ ಭಾರತೀಯರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ.
Dasara sports meet 2025: ಕುಸ್ತಿಪಟು ವಿನೇಶಾ ಫೋಗಟ್ ಅತಿಥಿ
ಡಿಸಿಎಂ ಶ್ರೀರಾಮ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಹಿರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಜಯ್ ಎಸ್ ಶ್ರೀರಾಮ್ ಹಾಗೂ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಕ್ರಂ ಶ್ರೀರಾಮ್ ಮಾತನಾಡಿ "ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್‌ನ 30ನೇ ಆವೃತ್ತಿಯನ್ನು ಆಚರಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಭಾರತೀಯ ಟೆನಿಸ್‌ಗೆ ಇದು ಶಾಶ್ವತ ವೇದಿಕೆ. ನಾವು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಅವಕಾಶವನ್ನು ಒದಗಿಸಿ, ರಾಷ್ಟ್ರೀಯ ಪ್ರದರ್ಶನದಿಂದ ಜಾಗತಿಕ ಆಕಾಂಕ್ಷೆಯವರೆಗೆ ಅವರ ಪಯಣವನ್ನು ಬೆಂಬಲಿಸಿದ್ದೇವೆ," ಎಂದು ಹೇಳಿದ್ದಾರೆ.
ಕಾರ್ಯಕ್ರಮದ ವಿವರ
ಪುರುಷರು, ಮಹಿಳೆಯರು ಹಾಗೂ ಅಂಡರ್–18 ವಿಭಾಗಗಳ ಅರ್ಹತಾ ಪಂದ್ಯಗಳು- 27 ಸೆಪ್ಟೆಂಬರ್ 2025
ಪುರುಷರು, ಮಹಿಳೆಯರು ಹಾಗೂ ಅಂಡರ್–18 (ಸಿಂಗಲ್ಸ್ ಮತ್ತು ಡಬಲ್ಸ್) ಮುಖ್ಯ ಡ್ರಾ: 29 ಸೆಪ್ಟೆಂಬರ್ – 4 ಅಕ್ಟೋಬರ್ 2025
ಅಂಡರ್–16 ಮತ್ತು ಅಂಡರ್–14 (ಹುಡುಗರು ಮತ್ತು ಹುಡುಗಿಯರು): 5 – 11 ಅಕ್ಟೋಬರ್ 2025
