ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ISL 2026: ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

ಬೆಂಗಳೂರು ಎಫ್‌ಸಿ ತಂಡ, ಎಫ್‌ಸಿ ಗೋವಾ ವಿರುದ್ಧ 2-0 ಅಂತರದಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಗೆಲುವು ಪಡೆಯಿತು. ಆ ಮೂಲಕ ಸತತ ಮೂರನೇ ಹೊರಗಿನ ಪಂದ್ಯದಲ್ಲಿ ಬಿಎಫ್‌ಸಿ ಗೆಲುವು ದಾಖಲಿಸಿತು. ಸುನೀಲ್‌ ಛೆಟ್ರಿ ಹಾಗೂ ಭುಟಿಯಾ ತಲಾ ಒಂದೊಂದು ಗೋಲು ಗಳಿಸಿದ್ದರು.

ISL 2026: ಗೋವಾ ವಿರುದ್ಧ ಬೆಂಗಳೂರು ಎಫ್‌ಸಿಗೆ ಜಯ!

ಬಿಎಫ್‌ಸಿ ತಂಡಕ್ಕೆ 2-0 ಅಂತರದಲ್ಲಿ ಜಯ. -

Profile
Ramesh Kote Apr 4, 2026 11:11 PM

ಬೆಂಗಳೂರು: ಬೆಂಗಳೂರು ಎಫ್‌ಸಿ (BFC) ತಂಡ, ಎಫ್‌ಸಿ ಗೋವಾ (FC Goa) ವಿರುದ್ಧ ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಸತತ ಮೂರನೇ ಹೊರಗಿನ ಪಂದ್ಯದಲ್ಲಿ ಜಯ ದಾಖಲಿಸಿದೆ. ಸುನಿಲ್ ಛೆಟ್ರಿ ಮತ್ತು ನಮ್ಗ್ಯಾಲ್ ಭುಟಿಯಾ ಗೋಲುಗಳಿಸಿದ್ದಾರೆ. ಪಂದ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ ಬೆಂಗಳೂರು ಎಫ್‌ಸಿ ಖಾತೆ ತೆರೆಯಿತು. 3ನೇ ನಿಮಿಷದಲ್ಲಿ ಆಶಿಕ್ ನೀಡಿದ 'ಥ್ರೂ ಬಾಲ್' ವಿಫಲವಾದರೂ, ಚೆಂಡು ಬಾಕ್ಸ್‌ನ ಮೇಲ್ಭಾಗದಲ್ಲಿದ್ದ ಸುನಿಲ್ ಛೇತ್ರಿ ಅವರ ಪಾಲಾಯಿತು.

24ನೇ ನಿಮಿಷದಲ್ಲಿ ಆಶಿಕ್ ಗೋಲು ಗಳಿಸುವ ಸನಿಹ ಬಂದಿದ್ದರು. ಬ್ರಿಯಾನ್ ಎದುರಾಳಿ ಪಾಸ್ ಅನ್ನು ತಡೆದು ಆಶಿಕ್ ಅವರಿಗೆ ನೀಡಿದರು, ಎಡಭಾಗದಿಂದ ನುಗ್ಗಿದ ಆಶಿಕ್ ಚೆಂಡನ್ನು ಗೋಲು ಪೆಟ್ಟಿಗೆಯ ಹೊರಭಾಗಕ್ಕೆ ಬಾರಿಸಿದರು. 36ನೇ ನಿಮಿಷದಲ್ಲಿ ಎಫ್‌ಸಿ ಗೋವಾ ಕಾರ್ನರ್ ಮೂಲಕ ಚೆಂಡನ್ನು ಗೋಲ್ ಪೋಸ್ಟ್‌ಗೆ ಹೊಡೆದಾಗ ಬಿಎಫ್‌ಸಿ ಡಿಫೆಂಡಿಂಗ್‌ ತಂಡ ಒಗ್ಗಟ್ಟಿನಿಂದ ಹೋರಾಡಿ ಎರಡು ಪ್ರಮುಖ ಬ್ಲಾಕ್‌ಗಳ ಮೂಲಕ ಗೋಲು ತಪ್ಪಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಳೂರು 1-0 ಮುನ್ನಡೆ ಕಾಯ್ದುಕೊಂಡಿತು.

RCB vs CSK: ʻಎರಡನೇ ಐಪಿಎಲ್‌ ಟ್ರೋಫಿ ಗೆಲ್ಲುವುದು ನಮ್ಮ ಗುರಿʼ-ಜಿತೇಶ್‌ ಶರ್ಮಾ!

ದ್ವಿತೀಯಾರ್ಧದಲ್ಲಿ ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. 52ನೇ ನಿಮಿಷದಲ್ಲಿ ರಾಯನ್ ವಿಲಿಯಮ್ಸ್ ನೀಡಿದ ಪಾಸ್ ಅನ್ನು ಸುರೇಶ್ ಗೋಲು ಪೆಟ್ಟಿಗೆಯತ್ತ ಬಾರಿಸಿದರೂ ಗೋವಾ ಡಿಫೆಂಡರ್ ಅದನ್ನು ತಡೆದರು. ಕೊನೆಯ ಹಂತದಲ್ಲಿ ಗೋವಾ ನೀಡಿದ ಕ್ರಾಸ್ ಮೂಲಕ ಬಂದ ಹೆಡರ್ ಅನ್ನು ಬೆಂಗಳೂರಿನ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅದ್ಭುತವಾಗಿ ಡೈವ್ ಮಾಡುವ ಮೂಲಕ ತಡೆದರು.



ಪಂದ್ಯ ಮುಗಿಯುವ ಕೆಲವೇ ಕ್ಷಣಗಳ ಮೊದಲು, ಬದಲಿ ಆಟಗಾರರಾದ ಮೊನಿರುಲ್ ನೀಡಿದ ಪಾಸ್ ಅನ್ನು ಫನಾಯ್ ಸ್ವೀಕರಿಸಿ ಭೂಟಿಯಾ ಅವರಿಗೆ ನೀಡಿದರು. ಬಲ ತುದಿಯಲ್ಲಿದ್ದ ನಮ್ಗ್ಯಾಲ್ ಭೂಟಿಯಾ ಅದ್ಭುತ ಫಿನಿಶ್ ಮಾಡುವ ಮೂಲಕ ಬೆಂಗಳೂರು ಎಫ್‌ಸಿಗೆ 2-0 ಅಂತರದ ಭರ್ಜರಿ ಜಯ ತಂದುಕೊಟ್ಟರು.