ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಪಾನ್‌ನಲ್ಲಿ ನಕಲಿ ಪಾಕಿಸ್ತಾನ ಫುಟ್‌ಬಾಲ್‌ ತಂಡ, ಪಾಕ್‌ಗೆ ಮತ್ತೊಂದು ಮುಖಭಂಗ!

ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ಹ್ಯಾಂಡ್‌ಶೇಕ್‌ ವಿವಾದದಿಂದ ಭಾರಿ ಹಿನ್ನಡೆಯನ್ನು ಅನುಭವಿಸಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದೆ. ನಕಲಿ ಪಾಕಿಸ್ತಾನ ಫುಟ್‌ಬಾಲ್‌ ತಂಡವನ್ನು ಜಪಾನ್‌ಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಜಪಾನ್‌ನಲ್ಲಿ ನಕಲಿ ಪಾಕಿಸ್ತಾನ ಫುಟ್‌ಬಾಲ್‌ ತಂಡ!

ಪಾಕಿಸ್ತಾನ ನಕಲಿ ಫುಟ್‌ಬಾಲ್‌ ತಂಡ. -

Profile Ramesh Kote Sep 16, 2025 11:06 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್‌ ( Asia Cup 2025) ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ ಹ್ಯಾಂಡ್‌ಶೇಕ್‌ ವಿವಾದಿಂದ ಭಾರಿ ಹಿನ್ನಡೆಯನ್ನು ಅನುಭವಿಸಿದ್ದ ಪಾಕಿಸ್ತಾನಕ್ಕೆ (Pakistan) ಇದೀಗ ಜಪಾನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗವಾಗಿದೆ. ಅದೇನೆಂದರೆ ಜಪಾನ್‌ಗೆ ಪಾಕಿಸ್ತಾನ ನಕಲಿ ಫುಟ್‌ಬಾಲ್‌ ತಂಡವನ್ನು ಕಳುಹಿಸಲಾಗಿತ್ತು. ಇದನ್ನು ಪತ್ತೆ ಮಾಡಿದ ಜಪಾನ್‌ (Japan), ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ. ಅಲ್ಲದೆ ಜಪಾನ್‌ ದೇಶದಿಂದ ಪಾಕಿಸ್ತಾನ ನಕಲಿ ಫುಟ್‌ಬಾಲ್‌ ತಂಡವನ್ನು ಗಡೀಪಾರು ಮಾಡಲಾಗಿದೆ.

ಮೂಲಗಳ ಪ್ರಕಾರ, ನಕಲಿ ಫುಟ್ಬಾಲ್ ತಂಡವನ್ನು ಜಪಾನ್‌ನಿಂದ ಗಡೀಪಾರು ಮಾಡಲಾಗಿದೆ. ಮಾನವ ಕಳ್ಳಸಾಗಣೆ ಪ್ರಯತ್ನದಲ್ಲಿ ಈ ತಂಡದ ಸದಸ್ಯರು ಸಿಯಾಲ್‌ಕೋಟ್‌ನ ನಕಲಿ ತಂಡದ ಫುಟ್‌ಬಾಲ್ ಆಟಗಾರರಂತೆ ನಟಿಸುತ್ತಾ ನಕಲಿ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಕ್ರೀಡಾಪಟುಗಳಂತೆ ನಟಿಸುತ್ತಾ ಪ್ರಯಾಣಿಸಲು ಯತ್ನಿಸಿದ್ದಕ್ಕಾಗಿ ಪಾಕಿಸ್ತಾನಿ ಪ್ರಜೆಗಳು ಜಪಾನ್‌ನಲ್ಲಿ ನಾಚಿಕೆಪಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.

Asia Cup 2025: ಮ್ಯಾಚ್ ರೆಫರಿ ಬದಲಾವಣೆ; ಪಿಸಿಬಿ ಬೇಡಿಕೆ ತಿರಸ್ಕರಿಸಿದ ಐಸಿಸಿ

ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಪ್ರಕಾರ, 22 ಜನರ ಗುಂಪು ಫುಟ್ಬಾಲ್ ತಂಡದಂತೆ ನಟಿಸಿ ಸಿಯಾಲ್‌ಕೋಟ್ ವಿಮಾನ ನಿಲ್ದಾಣದಿಂದ ಜಪಾನ್‌ಗೆ ಹಾರಿತು. ಆದಾಗ್ಯೂ, ಜಪಾನಿನ ಅಧಿಕಾರಿಗಳು ಅವರ ದಾಖಲೆಗಳು ನಕಲಿ ಎಂದು ಕಂಡುಹಿಡಿದರು ಮತ್ತು ನಂತರ ಅವರನ್ನು ಗಡೀಪಾರು ಮಾಡಿದರು ಎಂದು ಅದು ಹೇಳಿದೆ.

ಎಫ್‌ಐಎ ಪ್ರಮುಖ ಶಂಕಿತನನ್ನು ಮಲಿಕ್ ವಕಾಸ್ ಎಂದು ಗುರುತಿಸಿದ್ದು, ಆತನನ್ನು ಬಂಧಿಸಲಾಗಿದ್ದು, ಗುಜ್ರಾನ್‌ವಾಲಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ವಕಾಸ್ 'ಗೋಲ್ಡನ್ ಫುಟ್‌ಬಾಲ್ ಟ್ರಯಲ್' ಎಂಬ ಹೆಸರಿನ ಫುಟ್‌ಬಾಲ್ ಕ್ಲಬ್ ಅನ್ನು ನೋಂದಾಯಿಸಿಕೊಂಡಿದ್ದನು ಮತ್ತು ಆ ಗುಂಪಿಗೆ ಆಟಗಾರರಂತೆ ವರ್ತಿಸಲು ತರಬೇತಿ ನೀಡಿದ್ದನು ಮತ್ತು ಅವರ ಪ್ರಯಾಣಕ್ಕೆ ಅನುಕೂಲವಾಗುವಂತೆ ಪ್ರತಿಯೊಬ್ಬ ಸದಸ್ಯರಿಗೂ 4 ಮಿಲಿಯನ್ ರೂ. ಶುಲ್ಕ ವಿಧಿಸಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

IND vs PAK: ಟಾಸ್‌ ವೇಳೆ ಹಸ್ತಲಾಘವ ನಿರಾಕರಿಸಿದ ಸೂರ್ಯ-ಸಲ್ಮಾನ್‌

ಏಷ್ಯಾ ಕಪ್‌ ಟೂರ್ನಿಯಲ್ಲಿ ಹೀನಾಯ ಸೋಲಿನ ನಂತರ ಹ್ಯಾಂಡ್‌ ಶೇಕ್‌ ವಿವಾದದಿಂದ ಭಾರತದೊಂದಿಗೆ ಪಾಕಿಸ್ತಾನ ಈಗಾಗಲೇ ಸುದ್ದಿಯಲ್ಲಿದೆ. ದುಬೈನಲ್ಲಿ ನಡೆದಿದ್ದ ಪಂದ್ಯಕ್ಕೂ ಮುನ್ನ ಅಥವಾ ನಂತರ ಆಟಗಾರರ ನಡುವೆ ಯಾವುದೇ ಹಸ್ತಲಾಘವ ನಡೆಯದಿರಲಿಲ್ಲ. ಈ ಘಟನೆಯಿಂದ ಎರಡೂ ದೇಶಗಳ ನಡುವಿನ ಹದಗೆಟ್ಟ ರಾಜಕೀಯ ಸಂಬಂಧಗಳು ಕ್ರಿಕೆಟ್ ಮೈದಾನಕ್ಕೂ ಹರಡಿಕೊಂಡಿತು.

ಸೆಪ್ಟೆಂಬರ್ 14 (ಭಾನುವಾರ) ರಂದು ಪಂದ್ಯಕ್ಕೆ ಮುನ್ನ ಟಾಸ್ ವೇಳೆ ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಸಲ್ಮಾನ್ ಅಲಿ ಅಘಾ ಇಬ್ಬರೂ ನಾಯಕರಿಗೆ ಕೈಕುಲುಕದಂತೆ ಮ್ಯಾಚ್ ರೆಫರಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ ವಿನಂತಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರೋಪಿಸಿತ್ತು.