ಅದ್ದೂರಿ ಮದುವೆಗೆ ಬ್ರೇಕ್ ಹಾಕಿ ಅನಾಥ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ದಂಪತಿ; ನೆಟ್ಟಿಗರು ಭಾವುಕ
Viral Video: ಲಕ್ಷಾಂತರ ರುಪಾಯಿ ವ್ಯಯಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವುದು ಸದ್ಯದ ಟ್ರೆಂಡ್. ಆದರೆ ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದು ಎಲ್ಲರಿಗೂ ಮಾದರಿಯಂತಿದೆ. ನವ ಜೋಡಿ ಅದ್ಧೂರಿ ಮದುವೆ ಆಚರಣೆಯ ಬದಲಿಗೆ 11 ಬಡ ಮತ್ತು ಅನಾಥ ಮಕ್ಕಳನ್ನು ದತ್ತು ಪಡೆಯುವ ಮೂಲಕ ಮೆಚ್ಚುಗೆ ಗಳಿಸಿದೆ.
ಅನಾಥ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ದಂಪತಿ -
ಲಖನೌ, ಡಿ. 26: ಮದುವೆ ಎನ್ನುವುದು ಪ್ರತೀ ಹುಡುಗ-ಹುಡುಗಿಯ ಬಹುದೊಡ್ಡ ಕನಸು. ಭಾವನಾತ್ಮಕ ಬಂಧವಾದ ಈ ಮದುವೆಯನ್ನು ತುಂಬಾ ಅದ್ಧೂರಿಯಾಗಿ ಆಯೋಜಿಸಬೇಕು ಎಂದುಕೊಳ್ಳುತ್ತಾರೆ. ಅದರಲ್ಲೂ ಲಕ್ಷಾಂತರ ರುಪಾಯಿ ವ್ಯಯಿಸಿ, ಸಾಲ ಮಾಡಿ, ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುವವರ ಸಂಖ್ಯೆಗೆ ಕಡಿಮೆ ಏನಿಲ್ಲ. ಆದರೆ ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರ (Kanpur) ದೇಹತ್‌ನಲ್ಲಿ ನಡೆದ ಈ ಮದುವೆಯೊಂದು ಎಲ್ಲರಿಗೂ ಮಾದರಿಯಂತಿದೆ. ಜೋಡಿ ಅದ್ಧೂರಿ ಆಚರಣೆಯ ಬದಲಿಗೆ ಹನ್ನೊಂದು ಬಡ ಮತ್ತು ಅನಾಥ ಮಕ್ಕಳನ್ನು ದತ್ತು ಪಡೆಯುವ ಮೂಲಕ ಮೆಚ್ಚುಗೆ ಗಳಿಸಿದೆ.
ಕಾನ್ಪುರ ದೇಹತ್‌ನಲ್ಲಿ ಈ ವಿವಾಹ ನಡೆದಿದೆ. ಇವರು ತಮ್ಮ ಮದುವೆಯ ಅಲಂಕಾರ, ಬಟ್ಟೆ ಅಥವಾ ಆಚರಣೆಗಾಗಿ ಹಣ ವ್ಯಯಿಸದೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮದುವೆಯ ವಿಧಿವಿಧಾನಗಳು ಮುಗಿಯುತ್ತಿದ್ದಂತೆಯೇ, ದಂಪತಿ 11 ಮಕ್ಕಳನ್ನು ವೇದಿಕೆ ಮೇಲೆ ಬರಹೇಳಿದ್ದು ನೆರೆದಿದ್ದ ಅತಿಥಿಗಳ ಸಮ್ಮುಖದಲ್ಲೇ ಅವರ ಸಂಪೂರ್ಣ ಜವಾಬ್ದಾರಿಯನ್ನು ತಾವೇ ನೋಡುವುದಾಗಿ ಘೋಷಣೆ ಮಾಡಿದ್ದಾರೆ.
ʼʼಇಲ್ಲಿರುವ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನದ ಎಲ್ಲ ಆಗು ಹೋಗುಗಳ ಸಂಪೂರ್ಣ ವೆಚ್ಚವನ್ನು ಭರಿಸುತ್ತೇವೆʼʼ ಎಂದು ನವಜೋಡಿ ಭರವಸೆ ನೀಡಿತು. ಸಾಮಾನ್ಯವಾಗಿ ಮದುವೆ ಅಂದಾಗ ಡಿಜೆ, ಕುಣಿತ ಮೋಜು-ಮಸ್ತಿಗಾಗಿ ಲಕ್ಷಾಂತರ ರುಪಾಯಿ ವ್ಯಯಿಸುವುದನ್ನು ನೋಡುತ್ತೇವೆ. ಆದರೆ ಈ ದಂಪತಿ ಹಣವನ್ನು ಅರ್ಹ ಮಕ್ಕಳ ಭವಿಷ್ಯ ರೂಪಿಸಲು ಬಳಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮದುವೆ ಎನ್ನುವುದು ಕೇವಲ ಬಂಧವಲ್ಲ. ಅದು ಸಮಾಜಕ್ಕೆ ಒಳ್ಳೆಯದನ್ನು ಮಾಡುವ ವೇದಿಕೆಯೂ ಆಗಬೇಕು ಎಂಬ ಈ ದಂಪತಿ ಆಶಯ ಇದೀಗ ನೆರವೇರಿದೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ
ಸದ್ಯ ಈ ಮದುವೆಯ ಫೋಟೊ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತ ವಾಗಿದೆ. ಇಂತಹ ದಂಪತಿ ಯುವ ಪೀಳಿಗೆಗೆ ನಿಜವಾದ ಮಾದರಿ ಎಂದು ನೆಟ್ಟಿರೊಬ್ಬರು ಕಮೆಂಟ್ ಮಾಡಿದ್ದಾರೆ. ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡದೆ, ಮಕ್ಕಳ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ನಿಜವಾಗಿಯೂ ಗ್ರೇಟ್. ಮದುವೆ ಮಹತ್ವವನ್ನು ಇದು ಮತ್ತಷ್ಟು ಹೆಚ್ಚಿಸಿದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.