ಅರ್ಹತಾ ಪಂದ್ಯದಲ್ಲಿ ಇಟಲಿ ಮಣಿಸಿದ ಭಾರತ ಮಹಿಳಾ ಹಾಕಿ ತಂಡಕ್ಕೆ ವಿಶ್ವಕಪ್ ಅರ್ಹತೆ
FIH Hockey World Cup Qualifiers: ಎರಡನೇ ಕ್ವಾರ್ಟರ್‌ನಲ್ಲಿ ಭಾರತ 18ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಆದರೆ ನವನೀತ್ ಕೌರ್ ಅವರ ಹೊಡೆತವನ್ನು ತಡೆಯುವಲ್ಲಿ ಇಟಲಿ ಗೋಲ್‌ಕೀಪರ್ ಲೂಸಿಯಾ ಐನೆಸ್ ಕಾರುಸೊ ಯಶಸ್ವಿಯಾದರು.
Indian women's hockey team -
ಹೈದರಾಬಾದ್, ಮಾ.14: ಎಫ್‌ಐಎಚ್ ಹಾಕಿ ವಿಶ್ವಕಪ್ ಅರ್ಹತಾ ಪಂದ್ಯಗಳ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮೂಲಕ ಭಾರತದ ಮಹಿಳಾ ರಾಷ್ಟ್ರೀಯ ಫೀಲ್ಡ್ ಹಾಕಿ ತಂಡವು 2026 ರ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಹೈದರಾಬಾದ್‌ನಲ್ಲಿ ಶುಕ್ರವಾರ ಜಿಎಂಸಿ ಬಾಲಯೋಗಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ತಂಡವು ಇಟಲಿಯನ್ನು 1–0 ಗೋಲುಗಳಿಂದ ಸೋಲಿಸಿತು.
40ನೇ ನಿಮಿಷದಲ್ಲಿ ಮನೀಷಾ ಚೌಹಾಣ್ ನಿರ್ಣಾಯಕ ಗೋಲು ಗಳಿಸಿ ಭಾರತವನ್ನು ಪ್ರಶಸ್ತಿ ಹೋರಾಟಕ್ಕೆ ಕರೆದೊಯ್ಯಿದರು. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ.
ಮೊದಲ ಕ್ವಾರ್ಟರ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಎರಡೂ ತಂಡಗಳು ಮಿಡ್‌ಫೀಲ್ಡ್‌ನಲ್ಲಿ ನಿಯಂತ್ರಣಕ್ಕಾಗಿ ಹೋರಾಡುತ್ತಿದ್ದವು. ಈ ಹೊತ್ತಿನಲ್ಲಿ ಇಟಲಿಯ ಆಟಗಾರ್ತಿಯರು ಆಕ್ರಮಣಶೈಲಿಯ ಆಟವಾಡಿದರು. ಇದರಿಂದಾಗಿ ಅವರಿಗೆ ಗೋಲು ಗಳಿಸುವ ಕೆಲವು ಅವಕಾಶಗಳೂ ಸೃಷ್ಟಿಯಾಗಿದ್ದವು. ಆದರೆ ಭಾರತ ಡಿಫೆಂಡಿಂಗ್ ವಿಭಾಗ ಇದನ್ನು ವಿಫಲಗೊಳಿಸಿತು.
ಎರಡನೇ ಕ್ವಾರ್ಟರ್‌ನಲ್ಲಿ ಭಾರತ 18ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಆದರೆ ನವನೀತ್ ಕೌರ್ ಅವರ ಹೊಡೆತವನ್ನು ತಡೆಯುವಲ್ಲಿ ಇಟಲಿ ಗೋಲ್‌ಕೀಪರ್ ಲೂಸಿಯಾ ಐನೆಸ್ ಕಾರುಸೊ ಯಶಸ್ವಿಯಾದರು.
IPL 2026: ಕೋಲ್ಕತಾ ನೈಟ್ ರೈಡರ್ಸ್‌ಗೆ ಮತ್ತೊಂದು ಆಘಾತ! ಹರ್ಷಿತ್ ರಾಣಾ ಔಟ್?
27ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ ಅದರಲ್ಲಿಯೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದಾಗಿ ಎರಡು ನಿಮಿಷಗಳ ನಂತರ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ಅಲ್ಲಿಯೂ ಗುರಿ ತಪ್ಪಿತು.
ದ್ವಿತೀಯಾರ್ಧದ ಆರಂಭದಲ್ಲಿ ಇಟಲಿ ಭಾರಿ ಪೈಪೋಟಿಯೊಡ್ಡಿತು. ಆದರೆ ಭಾರತದ ಗೋಲ್‌ಕೀಪರ್ ಬಿಚುದೇವಿ ಕರಿಬಮ್ ತಡೆಗೋಡೆಯಂತೆ ನಿಂತು. ಗೋಲುಗಳ ರಕ್ಷಣೆ ಮಾಡಿದರು. 40ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಭಾರತಕ್ಕೆ ವರದಾನವಾಯಿತು.
ಮನೀಷಾ ಅವರು ಮಾಡಿದ ಡ್ರ್ಯಾಗ್‌ಫ್ಲಿಕ್ ಫಲ ನೀಡಿತು. ಅಂತಿಮ ಕ್ವಾರ್ಟರ್‌ನಲ್ಲಿಯೂ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಆದರೆ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಇಂದು ನಡೆಯುವ ಫೈನಲ್‌ನಲ್ಲಿಯೂ ಗೆದ್ದು ಅಗ್ರಸ್ಥಾನ ಪಡೆಯುವತ್ತ ಭಾರತ ಚಿತ್ತ ನೆಟ್ಟಿದೆ.