ISL 2026: ಬಿಎಫ್‌ಸಿ vs ಮೊಹಮ್ಮದನ್ ಎಸ್‌ಸಿ; ಗೆಲುವಿನ ಹಾದಿಯತ್ತ ಬೆಂಗಳೂರು!
ಮಾರ್ಚ್ 7 ರಂದು ಬೆಂಗಳೂರು ಎಫ್‌ಸಿ ತಂಡ, 2026ರ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದನ್ ಎಸ್‌ಸಿ ತಂಡವನ್ನು ಎದುರಿಸಲಿದೆ. ಇದು ಬಿಎಫ್‌ಸಿ ತಂಡದ ಮೊದಲ ಹೊರಗಿನ ಪಂದ್ಯವಾಗಿದೆ. ಈ ಪಂದ್ಯ ಸಂಜೆ 5 ಗಂಟೆಗೆ ಕೋಲ್ಕತಾದ ಕಿಶೋರ್ ಭಾರತಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಮೊಹಮ್ಮದನ್ ಎಸ್‌ಸಿಗೆ ಬೆಂಗಳೂರು ಎಫ್‌ಸಿ ಸವಾಲು. -
ಬೆಂಗಳೂರು: ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ ಮೊದಲ ಹೊರಗಿನ ಪಂದ್ಯಕ್ಕಾಗಿ ಬೆಂಗಳೂರು ಎಫ್‌ಸಿ ತಂಡ (BFC) ಕೋಲ್ಕತಾಗೆ ಪ್ರಯಾಣಿಸಿದೆ. ಮಾರ್ಚ್ 7 ರಂದು ಸಂಜೆ 5 ಗಂಟೆಗೆ ಕಿಶೋರ್ ಭಾರತಿ ಕ್ರೀಡಾಂಗಣದಲ್ಲಿ (KBK) ಮೊಹಮ್ಮದನ್ ಎಸ್‌ಸಿ ತಂಡವನ್ನು ಬೆಂಗಳೂರು ಎಫ್‌ಸಿ ಎದುರಿಸಲಿದೆ. ಕಳೆದ ವಾರ ಕ್ರಮವಾಗಿ ಪಂಜಾಬ್ ಎಫ್‌ಸಿ ಮತ್ತು ಮೋಹನ್ ಬಗಾನ್ ಸೂಪರ್ ಜೈಂಟ್ (MBSG) ವಿರುದ್ಧ ಸೋಲನುಭವಿಸಿದ ಉಭಯ ತಂಡಗಳು, ಶನಿವಾರದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಲು ಉತ್ಸುಕವಾಗಿವೆ.
ರೆನೆಡಿ ಸಿಂಗ್ ಅವರ ತಂಡವು ಕಳೆದ ಪಂದ್ಯದಲ್ಲಿ ಪಂಜಾಬ್ ಎಫ್‌ಸಿ ವಿರುದ್ಧ ಈ ಸೀಸನ್‌ನ ಮೊದಲ ಸೋಲನ್ನು ಅನುಭವಿಸಿತ್ತು. ಇತ್ತ, ಇಂಡಿಯನ್ ಸೂಪರ್ ಲೀಗ್‌ನಲ್ಲಿ (ISL) ಈವರೆಗೆ ಗೆಲುವಿನ ಖಾತೆ ತೆರೆಯದ 'ಬ್ಲಾಕ್ ಪ್ಯಾಂಥರ್ಸ್' ಖ್ಯಾತಿಯ ಮೊಹಮ್ಮದನ್ ಎಸ್‌ಸಿ, ಕಳೆದ ಪಂದ್ಯದಲ್ಲಿ ಮೋಹನ್ ಬಗಾನ್ ವಿರುದ್ಧ 5-1 ಅಂತರದ ಭಾರಿ ಸೋಲನ್ನು ಕಂಡಿತ್ತು.
ಕೋಚ್ ರೆನೆಡಿ ಸಿಂಗ್ ಮಾತನಾಡಿ, "ಮೊಹಮ್ಮದನ್ ಎಸ್‌ಸಿ ತಂಡವು ಮೋಹನ್ ಬಗಾನ್ ಮತ್ತು ಎಫ್‌ಸಿ ಗೋವಾ ವಿರುದ್ಧ ಅತ್ಯುತ್ತಮವಾಗಿ ಆಡಿದ್ದು, ನಮ್ಮ ವಿರುದ್ಧವೂ ಅವರು ಕಠಿಣ ಪೈಪೋಟಿ ನೀಡಲಿದ್ದಾರೆ" ಎಂದರು.
Womens Singles Tennis: ಅಂಕಿತಾ ರೈನಾ, ವೈಷ್ಣವಿ ಅಡ್ಕರ್ ಕ್ವಾ.ಫೈನಲಿಗೆ
ಪಂದ್ಯದ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಡ್‌ಫೀಲ್ಡರ್ ವಿನಿತ್ ವೆಂಕಟೇಶ್,“ಕೋಚ್ ನನನ್ನು ಎಲ್ಲಲ್ಲಿ ಆಡಿಸಬೇಕೆಂದರೂ ನಾನು ಸಿದ್ಧನಿದ್ದೇನೆ. ತಂಡಕ್ಕಾಗಿ ನನ್ನ ಪಾತ್ರವನ್ನು ಯಾವಾಗಲೂ ನಿರ್ವಹಿಸಲು ಸಜ್ಜಾಗಿದ್ದೇನೆ,” ಎಂದು ಯುವ ಆಟಗಾರ ಹೇಳಿದರು.
"ಬೆಂಗಳೂರು ಎಫ್‌ಸಿ ತಂಡದಲ್ಲಿ ವಿನಿತ್ ಮುಖ್ಯವಾಗಿ ಮಿಡ್‌ಫೀಲ್ಡ್‌ನಲ್ಲಿ ಬೆಂಚ್‌ನಿಂದ ಅವಕಾಶ ಪಡೆದರೂ, ಕೋಚ್ ಕರೆ ನೀಡಿದಾಗಲೆಲ್ಲಾ ಮೈದಾನಕ್ಕಿಳಿಯಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ಈ ವಾರದ ವಾತಾವರಣವನ್ನು ವಿವರಿಸುತ್ತಾ ಅವರು, “ಎಲ್ಲರೂ ಉತ್ಸಾಹದಿಂದಿದ್ದು, ನಾಳೆಯ ಪಂದ್ಯದಲ್ಲಿ ನಮ್ಮಿಂದಾದಷ್ಟು ಶ್ರಮ ಹಾಕಲು ಸಿದ್ಧರಾಗಿದ್ದೇವೆ,” ಎಂದು ಹೇಳಿದರು.
ನಾಟೌಟ್‌ಗೆ ಸಂಭ್ರಮಿಸಿದ ಪತ್ನಿಯನ್ನು ತಡೆದ ಧೋನಿ; ವಿಡಿಯೊ ವೈರಲ್
ಬೆಂಗಳೂರು ಎಫ್‌ಸಿಗೆ ಮತ್ತೊಂದು ಸಕಾರಾತ್ಮಕ ಸುದ್ದಿ ಎಂದರೆ ರಾಹುಲ್ ಭೇಕೆ ಮತ್ತೆ ತಂಡಕ್ಕೆ ಮರಳಿ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ನಾಳೆಯ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಡಿಫೆಡಿಂಗ್ ವಿಭಾಗದಲ್ಲಿ ಅವರ ಉಪಸ್ಥಿತಿ ಬೆಂಗಳೂರಿಗೆ ಪ್ರಮುಖವಾಗಲಿದೆ.