ಮುಂಬೈನಲ್ಲಿ ಭಾರತದ ರೇಸಿಂಗ್ ಫೆಸ್ಟಿವಲ್ ಫಿನಾಲೆ; ಸೌರವ್ ಗಂಗೂಲಿ, ಕಿಚ್ಚ ಸುದೀಪ್ ಭಾಗಿ!
2025ರ ಡಿಸೆಂಬರ್‌ನಲ್ಲಿ ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗ್ರ್ಯಾಂಡ್ ಫೈನಲ್ ಮೂಲಕ ಮುಂಬೈ ತನ್ನ ಮೊದಲ FIA-ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್‌ಗೆ ಆತಿಥ್ಯ ನೀಡಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈನ ರಸ್ತೆಗಳು ದೀಪ ದೀಪಗಳಿಂದ ಮಿಂಚುವ ರೇಸಿಂಗ್ ಯುದ್ಧಭೂಮಿಯಾಗಿ ಪರಿವರ್ತನೆಯಾಗಲಿವೆ.
 
                                ಮುಂಬೈನಲ್ಲಿ ಭಾರತದ ರೇಸಿಂಗ್ ಫೆಸ್ಟಿವಲ್ ಫಿನಾಲೆ -
 Ramesh Kote
                            
                                Sep 20, 2025 4:25 PM
                                
                                Ramesh Kote
                            
                                Sep 20, 2025 4:25 PM
                            ಬೆಂಗಳೂರು: ಭಾರತೀಯ ಮಹಾರಾಷ್ಟ್ರ ಕ್ರೀಡೆಯತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಆರ್‌ಪಿಪಿಎಲ್ ಮತ್ತು ಎನ್‌ಎಂಎಂಸಿ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು. 2025ರ ಡಿಸೆಂಬರ್‌ನಲ್ಲಿ ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗ್ರ್ಯಾಂಡ್ ಫೈನಲ್ ಮೂಲಕ ಮುಂಬೈ ತನ್ನ ಮೊದಲ FIA-ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್‌ಗೆ ಆತಿಥ್ಯ ನೀಡಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈನ ರಸ್ತೆಗಳು ದೀಪ ದೀಪಗಳಿಂದ ಮಿಂಚುವ ರೇಸಿಂಗ್ ಯುದ್ಧಭೂಮಿಯಾಗಿ ಪರಿವರ್ತನೆಯಾಗಲಿವೆ. ನವಿ ಮುಂಬೈ ಈಗ ಜಾಗತಿಕ ಮೋಟಾರ್‌ಸ್ಪೋರ್ಟ್ ನಕ್ಷೆಯಲ್ಲಿ ಸ್ಥಾನ ಪಡೆದಿದ್ದು, 3.753 ಕಿಮೀ ಉದ್ದ, 14 ತಿರುವುಗಳನ್ನು ಹೊಂದಿರುವ FIA ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್ ಮೂಲಕ ನಗರವು ಪ್ರತಿಷ್ಠಿತ ಸ್ಟ್ರೀಟ್ ರೇಸ್ ನಗರಗಳ ಪಟ್ಟಿಗೆ ಸೇರಲಿದೆ.
ಅತ್ಯುತ್ತಮ ಅಂತಾರಾಷ್ಟ್ರೀಯ ಹಾಗೂ ಭಾರತೀಯ ರೇಸರ್‌ಗಳು ಇಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಲಿದ್ದಾರೆ. ಈ ರೇಸ್ ಐಕಾನಿಕ್ ಪಾಮ್ ಬೀಚ್ ರಸ್ತೆಯಿಂದ ಆರಂಭವಾಗಿ, ವಿಶಾಲ ರಸ್ತೆಗಳ ಮೂಲಕ, ನೆರುಲ್ ಸರೋವರದ ನೋಟವನ್ನು ಒಳಗೊಂಡಿದೆ. ಸುಮಾರು 3.753 ಕಿಮೀ ಉದ್ದ ಮತ್ತು 14 ಸವಾಲಿನ ತಿರುವುಗಳನ್ನು ಹೊಂದಿರುವ ಈ FIA-ಗ್ರೇಡ್ ರೇಸ್ ಚಾಲಕರ ನಿಖರತೆ, ತಂತ್ರ ಹಾಗೂ ಕೌಶಲ್ಯವನ್ನು ಪರೀಕ್ಷಿಸುವುದರ ಜೊತೆಗೆ ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಲಿದೆ.
Asia Cup: ಒಮಾನ್ ವಿರುದ್ದ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸಂಜು ಸ್ಯಾಮ್ಸನ್!
ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, "ನಾವು ಭಾರತೀಯ ರೇಸಿಂಗ್ ಫೆಸ್ಟಿವಲ್ ಅನ್ನು ನವೀ ಮುಂಬಯಿಗೆ ತರಲು ಹೆಮ್ಮೆ ಪಡುತ್ತೇವೆ. ಮುಂಬೈ ಸ್ಟ್ರೀಟ್ ರೇಸ್ ಮಹಾರಾಷ್ಟ್ರದ ಮೋಟಾರ್ಸ್‌ಪೋರ್ಟ್ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದ್ದು, ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಈ ರೇಸ್ ಯುವ ರೇಸರ್‌ಗಳಿಗೆ ಮಾತ್ರವಲ್ಲ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದ ಪ್ರತಿಭೆಗಳಿಗೆ ಸಹ ಪ್ರೇರಣೆ ನೀಡುತ್ತದೆ," ಎಂದು ಹೇಳಿದ್ದಾರೆ.
ಆರ್‌ಪಿಪಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ, "ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಎನ್‌ಎಂಎಂಸಿ ಅವರ ಬೆಂಬಲದಿಂದ ಮುಂಬೈ ಒಂದು ಅದ್ಭುತ ಮೋಟಾರ್ಸ್‌ಪೋರ್ಟ್ ಕಾರ್ಯಕ್ರಮಕ್ಕೆ ಆತಿಥ್ಯ ನೀಡಲಿದೆ. ‘ನಿದ್ದೆ ಮಾಡದ ನಗರ’ ಎಂದೇ ಪ್ರಸಿದ್ಧಿ ಪಡೆದಿರುವ ಮುಂಬೈ, ರಾತ್ರಿ ವೇಳೆ ನಡೆಯುವ ಈ ಸ್ಪರ್ಧೆಗೆ ಸೂಕ್ತ ವೇದಿಕೆ. 3.753 ಕಿಮೀ FIA-ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್ ಭಾರತದಲ್ಲಿ ಮೋಟಾರ್ಸ್‌ಪೋರ್ಟ್‌ಗೆ ಹೊಸ ಮಾನದಂಡವನ್ನು ನೀಡಲಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಯಶಸ್ವಿ ಸ್ಟ್ರೀಟ್ ರೇಸ್‌ಗಳನ್ನು ಆಯೋಜಿಸಿರುವ RPPL, ಈಗ ದಕ್ಷಿಣ ಏಷ್ಯಾದ ಹೃದಯದಲ್ಲಿ ವಿಶ್ವಮಟ್ಟದ ಸ್ಪರ್ಧೆಯನ್ನು ತರುತ್ತಿರುವುದು ಹೆಮ್ಮೆ," ಎಂದರು.
Asia Cup Super 4s Schedule: ಸೂಪರ್-4 ಪಂದ್ಯಗಳ ವೇಳಾಪಟ್ಟಿ ಪ್ರಕಟ
ಈ ರೇಸಿಂಗ್ ಉತ್ಸವದಲ್ಲಿ ಸಿನೆಮಾ ಹಾಗೂ ಕ್ರೀಡಾ ತಾರೆಯರು ಮಾಲೀಕರಾಗಿರುವ ತಂಡಗಳು ಪಾಲ್ಗೊಳ್ಳಲಿವೆ
ಜಾನ್ ಅಬ್ರಹಾಂ (ಗೋವಾ ಏಸಸ್ JA ರೇಸಿಂಗ್)
ಅರ್ಜುನ್ ಕಪೂರ್ (ಸ್ಪೀಡ್ ಡೀಮನ್ಸ್ ದೆಹಲಿ)
ಸೌರವ್ ಗಾಂಗೂಲಿ (ಕೊಲ್ಕತಾ ರಾಯಲ್ ಟೈಗರ್ಸ್)
ಕಿಚ್ಚ ಸುದೀಪ್ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು)
ನಾಗ ಚೈತನ್ಯ (ಹೈದರಾಬಾದ್ ಬ್ಲಾಕ್‌ಬರ್ಡ್ಸ್)
ಡಾ. ಶ್ವೇತಾ ಸುಂದೀಪ್ ಆನಂದ್ (ಚೆನ್ನೈ ಟರ್ಬೋ ರೈಡರ್ಸ್)
