ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಿಂಬಾಬ್ವೆ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ

Zimbabwe vs South Africa: ದಕ್ಷಿಣ ಆಫ್ರಿಕಾ ಪರ ಕ್ವೇನಾ ಮಾಫಕ 21 ರನ್‌ಗೆ 2 ವಿಕೆಟ್‌ ಕಿತ್ತರು. ಉಳಿದಂತೆ ಕಾರ್ಬಿನ್‌ ಬಾಷ್‌ 2 ವಿಕೆಟ್‌ ಪಡೆದರೂ 40 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದ ಕಾರಣ ಪ್ರಧಾನ ಬೌಲರ್‌ ಕಗಿಸೊ ರಬಾಡಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಯಿತು.

ಸೂಪರ್‌-8ನಲ್ಲಿ ಹ್ಯಾಟ್ರಿಕ್‌ ಗೆಲುವು ಕಂಡ ದಕ್ಷಿಣ ಆಫ್ರಿಕಾ

Anrich Nortje -

Abhilash BC
Abhilash BC Mar 1, 2026 6:30 PM

ನವದೆಹಲಿ, ಮಾ.1: ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಅಜೇಯ ಗೆಲುವಿನ ಓಟ ಮುಂದುವರಿಸಿದೆ. ಭಾನುವಾರ ನಡೆದ ತನ್ನ ಕೊನೆಯ ಸೂಪರ್‌-8 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ರನ್‌ ಅಂತರದ ಗೆಲವು ಸಾಧಿಸಿ ಸೆಮಿಫೈನಲ್‌ಗೆ ಸಜ್ಜಾಗಿ ನಿಂತಿದೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಜಿಂಬಾಬ್ವೆ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಅಂತಿಮವಾಗಿ ನಾಯಕ ಸಿಕಂದರ್‌ ರಾಜಾ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 153 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 154 ರನ್‌ ಬಾರಿಸಿ ಗೆಲುವು ಸಾಧಿಸಿತು.

ಚೇಸಿಂಗ್‌ ವೇಳೆ ದಕ್ಷಿಣ ಆಫ್ರಿಕಾ ಕೂಡ ಜಿಂಬಾಬ್ವೆಯಂತೆ ಆರಂಭಿಕ ಆಘಾತ ಎದುರಿಸಿತು. ನಾಯಕ ಐಡೆನ್‌ ಮಾರ್ರಮ್‌(4) ಮತ್ತು ಕ್ವಿಂಟನ್‌ ಡಿ ಕಾಕ್‌(0) ವಿಕೆಟ್‌ ಕಳೆದುಕೊಂಡಿತು. ರಯಾನ್ ರಿಕೆಲ್ಟನ್(31) ರನ್‌ ಗಳಿಸಿದರು. ಡೆವಾಲ್ಡ್‌ ಬ್ರೇವಿಸ್‌ 42 ರನ್‌ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಡೇವಿಡ್‌ ಮಿಲ್ಲರ್(‌22) ಮತ್ತು ಜಾರ್ಜ್ ಲಿಂಡೆ ಅಜೇಯ 30 ರನ್‌ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ಪರ ಸಿಕಂದರ್‌ ರಾಜಾ ಅರ್ಧಶತಕ ಬಾರಿಸಿ ಮಿಂಚಿದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಅವರು 4 ಸಿಕ್ಸರ್‌ ಮತ್ತು 8 ಬೌಂಡರಿ ಬಾರಿಸಿ 73 ರನ್‌ ಗಳಿಸಿದರು. ಕೆಲ ಕ್ರಮಾಂಕದಲ್ಲಿ ಕ್ಲೈವ್ ಮದಾಂಡೆ ಅಜೇಯ 26 ರನ್‌ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ನಿರ್ಣಾಯಕ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸುವ ಸನಿಹ ಬುಮ್ರಾ

ದಕ್ಷಿಣ ಆಫ್ರಿಕಾ ಪರ ಕ್ವೇನಾ ಮಾಫಕ 21 ರನ್‌ಗೆ 2 ವಿಕೆಟ್‌ ಕಿತ್ತರು. ಉಳಿದಂತೆ ಕಾರ್ಬಿನ್‌ ಬಾಷ್‌ 2 ವಿಕೆಟ್‌ ಪಡೆದರೂ 40 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದ ಕಾರಣ ಪ್ರಧಾನ ಬೌಲರ್‌ ಕಗಿಸೊ ರಬಾಡಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಯಿತು.