ಅಹಮದಾಬಾದಿನಲ್ಲಿ ಹೋಟೆಲ್, ಡ್ರೆಸ್ಸಿಂಗ್ ರೂಮ್ ಬದಲಿಸಿದ ಭಾರತ ತಂಡ
ಹಿರಿಯ ಪತ್ರಕರ್ತ ವಿಮಲ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದು. 2023 ರಲ್ಲಿ, ಭಾರತವು ಐಟಿಸಿ ನರ್ಮದಾದಲ್ಲಿ ಆಡಿತ್ತು, ಮತ್ತು ಅದು ಹೇಗೆ ಪರಿಣಾಮ ಬೀರಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ ಇದೇ ಕಾರಣಕ್ಕೆ ಈ ಬಾರಿ ಭಾರತ ಮೋದಿ ಕ್ರೀಡಾಂಗಣದಲ್ಲಿ ಆಡುವ ಮುನ್ನ ಅದೃಷ್ಟದೇವತೆಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ತಂಡವು ಮಾಡಿದೆ ಎಂದರು.
Team India -
ಅಹಮದಾಬಾದ್, ಮಾ.7: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ ಟಿ20 ವಿಶ್ವಕಪ್(T20 World Cup final) ಫೈನಲ್ ಪಂದ್ಯ ಭಾನುವಾರ(ಮಾ.8) ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲು ಕಂಡಿತ್ತು. ಇದೇ ಕಾರಣಕ್ಕೆ ಫೈನಲ್ ಪಂದ್ಯವಾಡಲು ಅಹಮದಾಬಾದಿಗೆ ಬಂದಿರುವ ತಂಡವು ಪ್ರತಿ ಬಾರಿ ತಂಗುವ ಹೋಟೆಲ್ ಬದಲಿಸಿದೆ.
ಸೆಮಿಫೈನಲ್‌ಗೆ ಎರಡು ದಿನಗಳ ಮುನ್ನ ಚಂದ್ರಗ್ರಹಣ ಇದ್ದ ಕಾರಣ ಭಾರತ ಕ್ರಿಕೆಟ್ ತಂಡವು ನಿಗದಿಯ ವೇಳೆಗಿಂತ ಸುಮಾರು 45 ನಿಮಿಷ ತಡವಾಗಿ ಅಭ್ಯಾಸಕ್ಕೆ ತೆರಳಿತ್ತು. ಫೈನಲ್‌ಗೂ ಮುನ್ನ ಕೂಡ ಭಾರತ ಕೆಲವು ನಂಬಿಕೆಗೆ ಒತ್ತು ನೀಡಿದೆ. ಹೌದು ಆ ಹೋಟೆಲ್‌ನಲ್ಲಿ ತಂಗಿದ್ದಾಗ ಆಡಿದ್ದ ಮಹತ್ವದ ಪಂದ್ಯಗಳಲ್ಲಿ ಭಾರತ ಸೋತಿತ್ತು. ಹೋಟೆಲ್ ಮಾತ್ರವಲ್ಲದೆ ಡ್ರೆಸ್ಸಿಂಗ್ ರೂಮ್ ಕೂಡ ಬದಲಾಯಿಸಿದೆ.
ತಂಡದಲ್ಲಿರುವ ಪ್ರಮುಖ ನೆರವು ಸಿಬ್ಬಂದಿಯೊಬ್ಬರು ಅಪಾರ ದೈವಭಕ್ತರಾಗಿದ್ದಾರೆ. ತಂಡಕ್ಕೆ ಇಂತಹ ಸಲಹೆಗಳನ್ನು ನೀಡುತ್ತಾರೆಂದು ಹೇಳಲಾಗಿದೆ. ತಂಡಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವಲ್ಲಿ ಬಿಸಿಸಿಐ ಕೂಡ ಪೂರ್ಣ ಸಹಕಾರ ನೀಡಿದೆ.
ಹಿರಿಯ ಪತ್ರಕರ್ತ ವಿಮಲ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದು. 2023 ರಲ್ಲಿ, ಭಾರತವು ಐಟಿಸಿ ನರ್ಮದಾದಲ್ಲಿ ಆಡಿತ್ತು, ಮತ್ತು ಅದು ಹೇಗೆ ಪರಿಣಾಮ ಬೀರಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ ಇದೇ ಕಾರಣಕ್ಕೆ ಈ ಬಾರಿ ಭಾರತ ಮೋದಿ ಕ್ರೀಡಾಂಗಣದಲ್ಲಿ ಆಡುವ ಮುನ್ನ ಅದೃಷ್ಟದೇವತೆಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ತಂಡವು ಮಾಡಿದೆ ಎಂದರು.
IND vs ENG: ಸೋಲಿನ ಬಳಿಕ ಜಸ್‌ಪ್ರೀತ್ ಬುಮ್ರಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಹ್ಯಾರಿ ಬ್ರೂಕ್!
"ಇದು ಯಾರಿಗೂ ತಿಳಿದಿಲ್ಲ. ನಾನು ಇದನ್ನು ಮೊದಲ ಬಾರಿಗೆ ಬಹಿರಂಗಪಡಿಸುತ್ತಿದ್ದೇನೆ. ಅಹಮದಾಬಾದ್ ಭಾರತಕ್ಕೆ ದುರದೃಷ್ಟಕರ ಮೈದಾನ ಎಂದು ಬಹಳಷ್ಟು ಜನರು ಭಯಪಡುತ್ತಾರೆ. ಮುಂಬೈನಲ್ಲಿ ಚಂದ್ರಗ್ರಹಣದಿಂದಾಗಿ ಭಾರತ ತಂಡವು ತಮ್ಮ ಅಭ್ಯಾಸವನ್ನು ವಿಳಂಬಗೊಳಿಸಿತು. ತಂಡದ ಆಟಗಾರರು ಆಧ್ಯಾತ್ಮಿಕರಾಗಿದ್ದಾರೆ. ಅಹಮದಾಬಾದ್‌ನಲ್ಲಿ, 2023 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಅದೇ ಹೋಟೆಲ್‌ನಲ್ಲಿ ಭಾರತೀಯ ತಂಡವು ಉಳಿಯುವುದಿಲ್ಲ. ಭಾರತವು ತಮ್ಮ ಡ್ರೆಸ್ಸಿಂಗ್ ಕೋಣೆಯನ್ನು ಸಹ ಬದಲಾಯಿಸಲಿದೆ. ಅವರು ಭೇಟಿ ನೀಡುವ ತಂಡದ ಡ್ರೆಸ್ಸಿಂಗ್ ಕೋಣೆಯನ್ನು ಬಳಸಲಿದ್ದಾರೆ. ಇನ್ನೂ ಒಂದು ಬದಲಾವಣೆ ಇದೆ, ಆದರೆ ನಾನು ಅದನ್ನು ಈಗ ಹೇಳಲು ಸಾಧ್ಯವಿಲ್ಲ. ಭಾರತವು ಟಿ 20 ವಿಶ್ವಕಪ್ ಗೆದ್ದರೆ ನಾನು ಬಹಿರಂಗಪಡಿಸಬಹುದು ”ಎಂದು ವಿಮಲ್ ಹೇಳಿದರು.