ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರ್‌ಸಿಬಿಯ ಸತತ ಎರಡನೇ ಟ್ರೋಫಿ ಗೆಲುವಿಗೆ ರಾಜ್ಯಾದ್ಯಂತ ಅಭಿಮಾನಿಗಳಿಂದ ವಿಶೇಷ ಪೂಜೆ

IPL 2026 Final: ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆರ್‌ಸಿಬಿ ಅಭಿಮಾನಿಗಳು ತಂಡದ ಜೆರ್ಸಿಗೆ ವಿಶೇಷ ಪೂಜೆ ಸಲ್ಲಿಸಿ ಫೈನಲ್‌ನಲ್ಲಿ ಉತ್ತಮವಾಗಿ ಆಡಿ ಸತತವಾಗಿ ಎರಡನೇ ಕಪ್‌ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಆರ್‌ಸಿಬಿ ಗೆಲುವಿಗೆ ಪ್ರಾರ್ಥಿಸಿ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿದರು.

ಆರ್‌ಸಿಬಿಯ ಸತತ 2ನೇ ಟ್ರೋಫಿ ಗೆಲುವಿಗೆ ಅಭಿಮಾನಿಗಳಿಂದ ವಿಶೇಷ ಪೂಜೆ

RCB FANS DOING POOJA -

Abhilash BC
Abhilash BC May 31, 2026 6:55 AM

ಬೆಂಗಳೂರು, ಮೇ 31: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) (RCB) ಇದೀಗ ಒಂದೇ ವರ್ಷದ ಅಂತರದಲ್ಲಿ ಎರಡನೇ ಚಾಂಪಿಯನ್​ ಪಟ್ಟಕ್ಕೇರುವ ಹೊಸ್ತಿಲಲ್ಲಿ ಬಂದು ನಿಂತಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು(ಭಾನುವಾರ) ನಡೆಯಲಿರುವ ಐಪಿಎಲ್​ 19ನೇ ಆವೃತ್ತಿಯ ಫೈನಲ್(IPL 2026 Final)​ ಪಂದ್ಯದಲ್ಲಿ ಆರ್​ಸಿಬಿ ತಂಡ ಗುಜರಾತ್​ ಟೈಟಾನ್ಸ್​ ಎದುರು ಸೆಣಸಾಡಲಿದೆ. ಆರ್‌ಸಿಬಿ ಗೆಲುವಿಗೆ ರಾಜ್ಯಾದ್ಯಾಂತ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆರ್‌ಸಿಬಿ ಅಭಿಮಾನಿಗಳು ತಂಡದ ಜೆರ್ಸಿಗೆ ವಿಶೇಷ ಪೂಜೆ ಸಲ್ಲಿಸಿ ಫೈನಲ್‌ನಲ್ಲಿ ಉತ್ತಮವಾಗಿ ಆಡಿ ಸತತವಾಗಿ ಎರಡನೇ ಕಪ್‌ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಆರ್‌ಸಿಬಿ ಗೆಲುವಿಗೆ ಪ್ರಾರ್ಥಿಸಿ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿದರು.



ಬೀದರ್‌ನಲ್ಲಿಯೂ ಅಭಿಮಾನಿಗಳು ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗಾಗಿ ಆಟಗಾರರ ಹೆಸರಿನಲ್ಲಿ ವಿಶೇಷ ಸಂಕಲ್ಪ ಮಾಡಿಸಿ ಭದ್ರೆಶ್ವರ ದೇವರಿಗೆ ಅಭಿಷೇಕ ಹಾಗು ಬಿಲ್ವಾರ್ಚನೆ ಮಂಗಳಾರತಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನೆರವೇರಿಸಿದರು.

ಹಾಲಿ ಆವೃತ್ತಿಯಲ್ಲಿ ಉಭಯ ತಂಡಗಳ ನಾಲ್ಕನೇ ಮುಖಾಮುಖಿ ಇದಾಗಿದೆ. 3 ಬಾರಿ ಮುಖಾಮುಖಿಗಳಲ್ಲಿ 2 ಜಯ, 1 ಸೋಲಿನೊಂದಿಗೆ ಆರ್‌ಸಿಬಿ ಮೇಲುಗೈ ಸಾಧಿಸಿದೆ. ಲೀಗ್​ನಲ್ಲಿ 2 ಬಾರಿ ಎದುರಾದಾಗ ಎರಡೂ ತಂಡಗಳು ತಲಾ ಸೋಲು-ಗೆಲುವು ಕಂಡಿದ್ದವು. ಏ.18ರ ಬೆಂಗಳೂರಿನ ಪಂದ್ಯದಲ್ಲಿ ಆರ್​ಸಿಬಿ 5 ವಿಕೆಟ್​ಗಳಿಂದ ಗೆದ್ದರೆ, ಏ.30ರ ಅಹಮದಾಬಾದ್​ ಮುಖಾಮುಖಿಯಲ್ಲಿ ಗುಜರಾತ್​ 4 ವಿಕೆಟ್​ಗಳಿಂದ ಜಯಿಸಿತ್ತು. ಮೇ 26ಕ್ಕೆ ಧರ್ಮಶಾಲಾದಲ್ಲಿ ನಡೆದ ಮೊದಲ ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ 254 ರನ್​ಗಳ ಬೃಹತ್​ ಮೊತ್ತ ಪೇರಿಸಿ, 92 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಫೈನಲ್‌ ಪಂದ್ಯದಲ್ಲಿ ಇಬ್ಬರು ಕನ್ನಡಿಗ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ ಓರ್ವ ಅದೃಷ್ಟಶಾಲಿ ಕನ್ನಡಿಗನಿಗೆ ಮಾತ್ರ ಈ ಬಾರಿ ಐಪಿಎಲ್​ ಟ್ರೋಫಿಗೆ ಮುತ್ತಿಡುವ ಅವಕಾಶ ಲಭಿಸಲಿದೆ. ಯಾಕೆಂದರೆ ಫೈನಲ್​ನಲ್ಲಿ ಆಡಲಿರುವ ಆರ್​ಸಿಬಿ-ಗುಜರಾತ್​ ತಂಡಗಳು ಕರ್ನಾಟಕದ ತಲಾ ಓರ್ವ ಆಟಗಾರನನ್ನು ಮಾತ್ರ ಹೊಂದಿವೆ. ದೇವದತ್​ ಪಡಿಕ್ಕಲ್​ ಆರ್​ಸಿಬಿ ತಂಡದಲ್ಲಿ ಮತ್ತು ವೇಗಿ ಪ್ರಸಿದ್ಧಕೃಷ್ಣ ಗುಜರಾತ್​ ತಂಡದಲ್ಲಿರುವ ಕನ್ನಡಿಗರಾಗಿದ್ದಾರೆ.