ಆರ್‌ಸಿಬಿ ಖರೀದಿಗೆ ಅಂತಿಮ ಸುತ್ತಿನಲ್ಲಿ 2 ಕಂಪನಿಗಳ ನಡುವೆ ಪೈಪೋಟಿ!
RCB On Sale: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
RCB On Sale -
ಬೆಂಗಳೂರು, ಮಾ.18: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಖರೀದಿಯ ಅಂತಿಮ ಹಂತದ ರೇಸ್ನಲ್ಲಿ(RCB On Sale) 2 ಕಂಪನಿಗಳು ಮಾತ್ರ ಉಳಿದುಕೊಂಡಿವೆ. ಈ ಮುನ್ನ ಒಟ್ಟು 7 ಕಂಪನಿಗಳು ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿಸಿದ್ದವು. ಆದರೆ ಈಗ ಅದರಲ್ಲಿ 5 ಕಂಪನಿಗಳು ಹಿಂದೆ ಸರಿದಿವೆ. ಈಗಾಗಲೇ ಆರ್‌ಸಿಬಿ ತಂಡಕ್ಕೆ ಬಿಡ್ ಸಲ್ಲಿಸುವ ಅಂತಿಮ ಗಡುವು ಕೂಡ ಮುಕ್ತಾಯಗೊಂಡಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಸ್ವೀಡನ್ನ ಖಾಸಗಿ ಷೇರು ಸಂಸ್ಥೆ "ಇಕ್ಯೂಟಿ' ಆರ್‌ಸಿಬಿ ತಂಡದ ಖರೀದಿ ರೇಸ್ನಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಇಕ್ಯೂಟಿ 2ರಿಂದ 2.1 ಶತಕೋಟಿ ಡಾಲರ್ (ಸುಮಾರು 18,463ರಿಂದ 19,386 ಕೋಟಿ ರೂ.) ಬಿಡ್ ಸಲ್ಲಿಸಿದೆ ಎನ್ನಲಾಗಿದೆ. ಇನ್ನು ಮಣಿಪಾಲ್ ಹಾಸ್ಪಿಟಲ್ಸ್ನ ಡಾ. ರಂಜನ್ ಪೈ ಅವರು ಅಮೆರಿಕದ ಖಾಸಗಿ ಷೇರು ಸಂಸ್ಥೆ ಕೆಕೆಆರ್ ಮತ್ತು ಸಿಂಗಾಪುರದ ಪ್ರಮುಖ ಹೂಡಿಕೆ ಸಂಸ್ಥೆ ಟೆಮಾಸೆಕ್ ಜತೆಗೂಡಿ ಆರ್‌ಸಿಬಿ ಖರೀದಿ ರೇಸ್ನಲ್ಲಿ ಉಳಿದಿದ್ದಾರೆ.
ಯುನೈಟೆಡ್ ಮ್ಯಾಂಚೆಸ್ಟರ್ ಮಾಲೀಕ ಅವ್ರಾಮ್ ಗ್ಲೇಜರ್ ಅವರ ಲ್ಯಾನ್ಸರ್ ಕ್ಯಾಪಿಟಲ್ ಕಂಪನಿ ಈ ಮುನ್ನ ಗರಿಷ್ಠ 1.8 ಶತಕೋಟಿ ಡಾಲರ್ (16,616 ಕೋಟಿ ರೂ.) ಬಿಡ್ ಸಲ್ಲಿಸಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಖರೀದಿ ರೇಸ್ನಿಂದ ಹಿಂದೆ ಸರಿದಿದೆ ಎನ್ನಲಾಗಿದೆ.
ಆರ್‌ಸಿಬಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಗುಡ್‌ನ್ಯೂಸ್; ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಗ್ರೀನ್ ಸಿಗ್ನಲ್
ಆರ್‌ಸಿಬಿ ಖರೀದಿಗೆ ಮೊದಲು ಬಿಡ್ ಸಲ್ಲಿಸಿದ್ದು ಸೀರಮ್ ಇನ್ಸ್ಟಿಟ್ಯೂಟ್ ಒಡೆಯ ಅದರ್ ಪೂನಾವಾಲಾ. ಆದರೆ ಅವರು ಹಿಂದೆ ಸರಿದಿದ್ದಾರೆ. ಟೈಮ್ಸ್ ಗ್ರೂಪ್ ಕೂಡ ಅಂತಿಮ ಹಂತದ ರೇಸ್ನಿಂದ ಹಿಂದೆ ಸರದಿದ್ದಾರೆ.
ಮುಂದಿನ ಬಾರಿ ಹೊಸ ಮಾಲಿಕತ್ವ
ಆರ್‌ಸಿಬಿ ಮಾರ್ಚ್ 31ರೊಳಗೆ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದರೂ ತಂಡ ಹೊಸ ಮಾಲೀಕರ ಕೈಗೆ ಸೇರಲು ಅಕ್ಟೋಬರ್ವರೆಗೆ ಕಾಯಬೇಕಾಗಬಹುದು ಎನ್ನಲಾಗಿದೆ. ಹೌದು ಯಾವುದೇ ಐಪಿಎಲ್ ತಂಡದ ಮಾರಾಟ ಪ್ರಕ್ರಿಯೆಯನ್ನು ಬಿಸಿಸಿಐ ಒಪ್ಪಿಗೆ ಇಲ್ಲದೆ ಅಂತಿಮಗೊಳಿಸುವಂತಿಲ್ಲ.ಇದು ಬಿಸಿಸಿಐ ನಿಯಮಾವಳಿ ಆಗಿದೆ. ಹೀಗಾಗಿ ಮುಂದಿನ ವರ್ಷದ 20ನೇ ಆವೃತ್ತಿಯಲ್ಲಿ ಹೊಸ ಮಾಲಿಕತ್ವದಡಿ ಆರ್‌ಸಿಬಿ ಆಡಲಿದೆ. ಈ ಬಾರಿ ಡಿಯಾಜಿಯೋ ಒಡೆತನದಲ್ಲೇ ತಂಡ ಮುಂದುವರಿಯಲಿದೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.