ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ಸಂಭಾವ್ಯ ಆಡುವ ಬಳಗ; ವೆಂಕಟೇಶ್ ಅಯ್ಯರ್, ಜಾಕೋಬ್ ಬೆಥೆಲ್ ಇಂಪ್ಯಾಕ್ಟ್‌ ಪ್ಲೇಯರ್‌

RCB predicted playing XI for IPL 2026: ಆರ್‌ಸಿಬಿ ತಂಡ ಕಳೆದ ಹರಾಜಿನಲ್ಲಿ ತಮ್ಮ ಮೂಲ ತಂಡವನ್ನು ಉಳಿಸಿಕೊಂಡಿದ್ದು, ವೆಂಕಟೇಶ್ ಅಯ್ಯರ್, ಜಾಕೋಬ್ ಡಫಿ ಮತ್ತು ಜೋರ್ಡಾನ್ ಕಾಕ್ಸ್ ಅವರಂತಹ ಹಿಟ್ಟರ್‌ಗಳನ್ನು ತಂಡಕ್ಕೆ ಸೇರಿಸಿದ್ದಾರೆ. ಮಾತ್ರವಲ್ಲದೆ ಯುವ ಆಟಗಾರರಾದ ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್ ಮತ್ತು ಮಂಗೇಶ್ ಯಾದವ್ ಅವರನ್ನು ಖರೀದಿಸಿದ್ದರು.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ; ವೆಂಕಟೇಶ್, ಬೆಥೆಲ್ ಇಂಪ್ಯಾಕ್ಟ್‌ ಪ್ಲೇಯರ್‌

Royal Challengers Bengaluru -

Abhilash BC
Abhilash BC Mar 22, 2026 3:20 PM

ಬೆಂಗಳೂರು, ಮಾ.22: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 28 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಐಪಿಎಲ್ 2026 ರ ಅಭಿಯಾನವನ್ನು ಪ್ರಾರಂಭಿಸಲಿದೆ. ಕಳೆದ ವರ್ಷ ಜೂನ್ 4 ರಂದು ಆರ್‌ಸಿಬಿಯ ಟ್ರೋಫಿ ಪೆರೇಡ್‌ನಲ್ಲಿ ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ ಘಟನೆ ಬಳಿಕ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಪಂದ್ಯ ಇದಾಗಿದೆ.

ಆರ್‌ಸಿಬಿ ತಂಡ ಕಳೆದ ಹರಾಜಿನಲ್ಲಿ ತಮ್ಮ ಮೂಲ ತಂಡವನ್ನು ಉಳಿಸಿಕೊಂಡಿದ್ದು, ವೆಂಕಟೇಶ್ ಅಯ್ಯರ್, ಜಾಕೋಬ್ ಡಫಿ ಮತ್ತು ಜೋರ್ಡಾನ್ ಕಾಕ್ಸ್ ಅವರಂತಹ ಹಿಟ್ಟರ್‌ಗಳನ್ನು ತಂಡಕ್ಕೆ ಸೇರಿಸಿದ್ದಾರೆ. ಮಾತ್ರವಲ್ಲದೆ ಯುವ ಆಟಗಾರರಾದ ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್ ಮತ್ತು ಮಂಗೇಶ್ ಯಾದವ್ ಅವರನ್ನು ಖರೀದಿಸಿದ್ದರು. ಈ ಪೈಕಿ, ಯಶ್ ದಯಾಳ್ ಬದಲಿಗೆ ಮಂಗೇಶ್‌ ಆಡುವ XI ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಯಶ್‌ ದಯಾಳ್ ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕರಣಗಳಿಂದಾಗಿ ಅವರು ಇನ್ನೂ ಆರ್‌ಸಿಬಿ ಶಿಬಿರಕ್ಕೆ ಸೇರಿಲ್ಲ. ಈ ಋತುವಿನಲ್ಲಿ ಅವರು ಯಾವಾಗ ಆರ್‌ಸಿಬಿ ಶಿಬಿರಕ್ಕೆ ಸೇರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಅವರ ಅನುಪಸ್ಥಿತಿಯು ತಂಡಕ್ಕೆ ಅಷ್ಟೊಂದು ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿಲ್ಲ. ಅವರು ಸ್ಥಿರವಾದ ಘಟಕವನ್ನು ಹೊಂದಿದ್ದಾರೆ ಮತ್ತು ಹರಾಜಿನಲ್ಲಿ ಉತ್ತಮವಾಗಿ ತಂಡ ರೂಪಿಸಿದ್ದಾರೆ. ಇದು ರಜತ್ ಪಾಟಿದಾರ್ ನೇತೃತ್ವದ ತಂಡವನ್ನು ಮತ್ತೊಮ್ಮೆ ಪ್ರಶಸ್ತಿ ಸ್ಪರ್ಧಿಗಳಲ್ಲಿ ಒಂದನ್ನಾಗಿ ಮಾಡುತ್ತದೆ.

ಹೇಗಿರಲಿದೆ ಆರ್‌ಸಿಬಿ ಬ್ಯಾಟಿಂಗ್‌ ಲೈನ್‌ ಅಪ್‌?

ವಿರಾಟ್‌ ಕೊಹ್ಲಿ ಮತ್ತು ಫಿಲ್‌ ಸಾಲ್ಟ್‌ ಆರ್‌ಸಿಬಿ ಇನಿಂಗ್ಸ್‌ ಆರಂಭಿಸಬಹುದು. ದೇಶೀಯ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ಕ್ರಮವಾಗಿ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದ್ದರೆ, ಟಿಮ್ ಡೇವಿಡ್ ಫಿನಿಶಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಸ್ಪಿನ್‌ ಆಲ್‌ರೌಂಡರ್‌ ಕೃನಾಲ್ ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ‌

ಸಂಭಾವ್ಯ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI ಆಯ್ಕೆ ಮಾಡಿದ ಆಕಾಶ್ ಚೋಪ್ರಾ

ಮೊದಲ ಕೆಲವು ಪಂದ್ಯಗಳಿಗೆ ಗೈರುಹಾಜರಾಗಲಿರುವ ಜೋಶ್ ಹ್ಯಾಜಲ್‌ವುಡ್ ಬದಲಿಗೆ ಜಾಕೋಬ್ ಡಫಿ 8ನೇ ಸ್ಥಾನದಲ್ಲಿ ಆಡಲಿದ್ದಾರೆ. ನಂತರ ಭುವನೇಶ್ವರ್ ಕುಮಾರ್ 9 ಮತ್ತು ರಸಿಕ್ ಸಲಾಂ ದಾರ್ 10ನೇ ಸ್ಥಾನದಲ್ಲಿ ಆಡಲಿದ್ದಾರೆ. ಸುಯಾಶ್ ಶರ್ಮಾ ಏಕೈಕ ಸ್ಪಿನ್ನರ್ ಆಗುವ ಸಾಧ್ಯತೆ ಇದೆ. ಜಾಕೋಬ್ ಬೆಥೆಲ್ ಅಥವಾ ವೆಂಕಟೇಶ್ ಇಂಪ್ಯಾಕ್ಟ್ ಆಟಗಾರರಾಗಿ ಕಾಣಿಸಿಕೊಳ್ಳಬಹುದು.

ಆರ್‌ಸಿಬಿ ಸಂಭಾವ್ಯ ಆಡುವ ತಂಡ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (wk), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಸಿಖ್ ಸಲಾಮ್ ದಾರ್, ಜಾಕೋಬ್ ಡಫ್ಫಿ, ಸುಯಾಶ್ ಶರ್ಮಾ.

ಇಂಪ್ಯಾಕ್ಟ್‌ ಆಟಗಾರರು: ವೆಂಕಟೇಶ್ ಅಯ್ಯರ್/ಜೇಕಬ್ ಬೆಥೆಲ್, ಮಂಗೇಶ್ ಯಾದವ್