ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rinku Singh Wedding: ರಿಂಕು ಸಿಂಗ್‌-ಪ್ರಿಯಾ ಸರೋಜ್ ಮದುವೆ ಮುಂದೂಡಿಕೆ!

"ನವೆಂಬರ್ 19, 2025 ರಂದು ರಿಂಕು ಮತ್ತು ಪ್ರಿಯಾ ಅವರ ವಿವಾಹಕ್ಕಾಗಿ ಕುಟುಂಬವು ವಾರಣಾಸಿಯ ತಾಜ್ ಹೋಟೆಲ್ ಅನ್ನು ಬುಕ್ ಮಾಡಿತ್ತು. ಆದಾಗ್ಯೂ, ಭಾರತೀಯ ಕ್ರಿಕೆಟ್ ತಂಡಕ್ಕಾಗಿ ರಿಂಕು ಅವರ ಬದ್ಧತೆಗಳು ಮದುವೆಯನ್ನು ಮುಂದೂಡಲು ಒತ್ತಾಯಿಸಿದವು" ಎಂದು ವರದಿ ತಿಳಿಸಿದೆ.

ರಿಂಕು ಸಿಂಗ್‌-ಪ್ರಿಯಾ ಸರೋಜ್ ಮದುವೆ ಮುಂದೂಡಿಕೆ!

Profile Abhilash BC Jun 24, 2025 2:49 PM

ಲಕ್ನೋ: ನವೆಂಬರ್ 19 ರಂದು ನಡೆಯಬೇಕಿದ್ದ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್(Rinku Singh) ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್(Priya Saroj) ಅವರ ವಿವಾಹವನ್ನು(Rinku Singh Wedding) ಮುಂದೂಡಲಾಗಿದೆ ಎಂದು ವರದಿಯಾಗಿದೆ. ಜೂನ್‌ 8 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅಮರ್ ಉಜಾಲ ಪತ್ರಿಕೆಯ ವರದಿಯ ಪ್ರಕಾರ, ನವೆಂಬರ್‌ನಲ್ಲಿ ರಿಂಕು ಅವರ ಕ್ರಿಕೆಟ್ ಕಾರ್ಯಕ್ರಮಗಳ ಕಾರಣದಿಂದ ವಿವಾಹವನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಮದುವೆಯು ಫೆಬ್ರವರಿ 2026 ರಲ್ಲಿ ನಡೆಯಲಿದ್ದು, ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದೆ.

"ನವೆಂಬರ್ 19, 2025 ರಂದು ರಿಂಕು ಮತ್ತು ಪ್ರಿಯಾ ಅವರ ವಿವಾಹಕ್ಕಾಗಿ ಕುಟುಂಬವು ವಾರಣಾಸಿಯ ತಾಜ್ ಹೋಟೆಲ್ ಅನ್ನು ಬುಕ್ ಮಾಡಿತ್ತು. ಆದಾಗ್ಯೂ, ಭಾರತೀಯ ಕ್ರಿಕೆಟ್ ತಂಡಕ್ಕಾಗಿ ರಿಂಕು ಅವರ ಬದ್ಧತೆಗಳು ಮದುವೆಯನ್ನು ಮುಂದೂಡಲು ಒತ್ತಾಯಿಸಿದವು" ಎಂದು ವರದಿ ತಿಳಿಸಿದೆ.

ರಿಂಕು-ಪ್ರಿಯಾ ನಿಶ್ಚಿತಾರ್ಥದಲ್ಲಿ ಮಾಜಿ ಕ್ರಿಕೆಟಿಗರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ, ಉತ್ತರ ಪ್ರದೇಶ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸದೆ ಡಿಂಪಲ್ ಯಾದವ್ ಮತ್ತು ಪ್ರಿಯಾ ಸರೋಜ್ ಅವರ ಗೆಳತಿ ಸಂಸದೆ ಇಕ್ರಾ ಹಸನ್ ಸೇರಿದಂತೆ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಪ್ರಿಯಾ ಕಳೆದ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದ ಸಮಾಜವಾದಿ ಪಕ್ಷದಿಂದ (ಎಸ್​ಪಿ) ಸ್ಪರ್ಧಿಸಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದರು. 23 ನವೆಂಬರ್ 1998ರಲ್ಲಿ ಜನಿಸಿದ ಪ್ರಿಯಾ, ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಿಂಕು ಸಿಂಗ್‌ ಭಾರತ ಪರ ಎರಡು ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ ಕೇವಲ 55 ರನ್ ಗಳಿಸಿದ್ದರು. ಟಿ20ಯಲ್ಲಿ 46.1ರ ಸರಾಸರಿಯಲ್ಲಿ 546 ರನ್ ಗಳಿಸಿದ್ದರು. ಶಾರ್ಟ್ ಫಾರ್ಮೆಟ್ ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ IPL 2025: ಪಂದ್ಯದ ಬಳಿಕ ರಿಂಕು ಸಿಂಗ್‌ ಕೆನ್ನೆಗೆ ಬಾರಿಸಿದ ಕುಲ್ದೀಪ್‌ ಯಾದವ್!‌ ವಿಡಿಯೊ