ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ ಸುನಿತಾ ವಿಲಿಯಮ್ಸ್​

IPL 2025: ಪಂದ್ಯದ ಬಳಿಕ ರಿಂಕು ಸಿಂಗ್‌ ಕೆನ್ನೆಗೆ ಬಾರಿಸಿದ ಕುಲ್ದೀಪ್‌ ಯಾದವ್!‌ ವಿಡಿಯೊ

ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ತವರು ಅಂಗಣದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 14 ರನ್‌ಗಳ ಸೋಲು ಅನುಭವಿಸಿತು. ಪಂದ್ಯ ಮುಗಿದ ನಂತರ ಡೆಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್, ಕೆಕೆಆರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್‌ಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಂಕು ಸಿಂಗ್‌ ಕೆನ್ನೆಗೆ ಎರಡು ಬಾರಿ ಹೊಡೆದ ಕುಲ್ದೀಪ್‌ ಯಾದವ್‌!

ರಿಂಕು ಸಿಂಗ್‌ ಕೆನ್ನೆಗೆ ಬಾರಿಸಿದ ಕುಲ್ದೀಪ್‌ ಯಾದವ್‌.

Profile Ramesh Kote Apr 30, 2025 8:43 AM

ನವದೆಹಲಿ: ಮಂಗಳವಾರ ಇಲ್ಲಿನ ಅರುನ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ ತಂಡ 14 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರಿಬ್ಬರ ನಡುವೆ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಪಂದ್ಯದ ಬಳಿಕ ಡೆಲ್ಲಿ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ (Kuldeep Yadav), ಕೆಕೆಆರ್‌ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ಗೆ (Rinku Singh) ಎರಡು ಬಾರಿ ತಮಾಷೆಗೆ ಕಪಾಳಮೋಕ್ಷ ಮಾಡಿದರು. ಆದರೆ, ಈ ವೇಳೆ ರಿಂಕು ಸಿಂಗ್‌ ಸ್ವಲ್ಪ ಕೋಪಗೊಂಡ ರೀತಿ ಕಂಡು ಬಂದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮುಗಿದ ನಂತರ ಎಲ್ಲಾ ಆಟಗಾರರು ಮೈದಾನದಲ್ಲಿ ಒಟ್ಟುಗೂಡಿದರು. ಕುಲ್‌ದೀಪ್ ಯಾದವ್ ಮತ್ತು ರಿಂಕು ಸಿಂಗ್ ಕೂಡ ಒಟ್ಟಿಗೆ ಮಾತನಾಡುತ್ತಿದ್ದರು. ಈ ವೇಳೆ ಕುಲ್‌ದೀಪ್ ಯಾದವ್ ತಮಾಷೆಯಾಗಿ ರಿಂಕು ಸಿಂಗ್‌ಗೆ ಕಪಾಳಮೋಕ್ಷ ಮಾಡಿದರು. ಕಪಾಳಮೋಕ್ಷ ಮಾಡಿದ ನಂತರ, ರಿಂಕು ಸಿಂಗ್ ಸ್ವಲ್ಪ ಕೋಪಗೊಂಡಂತೆ ಕಾಣುತ್ತಿದ್ದರು ಮತ್ತು ಅವರು ಏನೋ ಹೇಳುತ್ತಿರುವುದು ಕಂಡುಬಂದಿತು. ಕುಲ್‌ದೀಪ್ ಮತ್ತೊಂದು ಹೊಡೆತಕ್ಕೆ ಪ್ರಯತ್ನಿಸಿದರು ಆದರೆ ರಿಂಕು ತನ್ನ ಮುಖದಲ್ಲಿ ಅಸಮಾಧಾನ ಕಂಡು ಬಂದಿತ್ತು.

IPL 2025: ಕೋಲ್ಕತಾ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಅಸಲಿ ಕಾರಣ ತಿಳಿಸಿದ ಅಕ್ಷರ್‌ ಪಟೇಲ್!‌

ವಿಡಿಯೊ ವೈರಲ್

ಕುಲ್‌ದೀಪ್ ಯಾದವ್ ಮತ್ತು ರಿಂಕು ಸಿಂಗ್ ನಡುವಿನ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ಪರಿಗಣಿಸುತ್ತಿದ್ದರೆ, ಕೆಲವರು ಕುಲ್‌ದೀಪ್ ಯಾದವ್ ಅವರ ಈ ನಡವಳಿಕೆಯನ್ನು ತಪ್ಪು ಎಂದು ಕರೆಯುತ್ತಿದ್ದಾರೆ. ಆದರೆ, ಕುಲ್‌ದೀಪ್, ರಿಂಕುಗೆ ಕಪಾಳಮೋಕ್ಷ ಮಾಡಿದ ನಂತರ ರಿಂಕು ಸ್ವಲ್ಪ ಕೋಪಗೊಂಡಂತೆ ಕಾಣುತ್ತಿದ್ದರು. ಇದರಿಂದಾಗಿ ಖಂಡಿತವಾಗಿಯೂ ಸ್ವಲ್ಪ ಗದ್ದಲ ಉಂಟಾಗಿದೆ.



ರಿಂಕು ಸಿಂಗ್‌ ನೀರಸ ಪ್ರದರ್ಶನ

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ ಅವರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಬರುತ್ತಿಲ್ಲ. ಆದರೆ, ಮಂಗಳವಾರದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು 25 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರು ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಈ ಋತುವಿನಲ್ಲಿ ರಿಂಕು ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಮೆಗಾ ಹರಾಜಿಗೂ ಮುನ್ನ ಅವರನ್ನು ಕೆಕೆಆರ್ ಉಳಿಸಿಕೊಂಡಿತು. 10 ಪಂದ್ಯಗಳಲ್ಲಿ ಅವರು 33.80ರ ಸರಾಸರಿ ಮತ್ತು 145.68ರ ಸ್ಟ್ರೈಕ್ ರೇಟ್‌ನಲ್ಲಿ 169 ರನ್ ಗಳಿಸಿದ್ದಾರೆ.

IPL 2025: ಕೆಕೆಆರ್‌ ವಿರುದ್ದ ಸೋತ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇಆಫ್ಸ್‌ ಲೆಕ್ಕಾಚಾರ!

ಈ ಋತುವಿನಲ್ಲಿ ಅವರು ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಅವರ ಗರಿಷ್ಠ ಸ್ಕೋರ್ ಔಟಾಗದೆ 38 ರನ್‌ಗಳು. ಹಾಲಿ ಚಾಂಪಿಯನ್ ಕೆಕೆಆರ್ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ಕೆಕೆಆರ್‌ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದುಕೊಂಡಿದೆ. ಅಜಿಂಕ್ಯ ರಹಾನೆ ಪಡೆಗೆ ನಾಲ್ಕು ಲೀಗ್ ಪಂದ್ಯಗಳು ಉಳಿದಿದ್ದು, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಅವರು ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು.