ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶುಭಮನ್ ಗಿಲ್ ದಾಖಲೆ ಮುರಿದ ರಿಷಭ್ ಪಂತ್
Rishabh Pant scripts history: ಸುತಾರ್ ಭಾರತ ಪರ ಆಡಿದ ಮೊದಲ 2 ಟೆಸ್ಟ್ಗಳಲ್ಲಿ 3ನೇ ಗರಿಷ್ಠ 17 ವಿಕೆಟ್ ಕಬಳಿಸಿದ್ದಾರೆ. ಹಿರ್ವಾನಿ (24) ಮತ್ತು ಅಕ್ಷರ್ (18) ಅಧಿಕ ವಿಕೆಟ್ ಗಳಿಸಿರುವ ಭಾರತೀಯರು. ಮಾನವ್ ಸುತಾರ್ ಹಾಲಿ ವರ್ಷ ಅಫ್ಘಾನಿಸ್ತಾನ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು ಮತ್ತು 7 ವಿಕೆಟ್ ಕಬಳಿಸಿ ಮಿಂಚಿದ್ದರು.
Rishabh Pant -
ಗಾಲೆ, ಆ.20: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ರಿಷಭ್ ಪಂತ್ ಅವರು ನಾಯಕ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.
28 ವರ್ಷದ ಪಂತ್ ಎರಡೂ ಇನಿಂಗ್ಸ್ ಸೇರಿ ಒಟ್ಟು 108 ರನ್ ಗಳಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗತ್ರಸ್ಥಾನಕ್ಕೇರಿದರು. ಸದ್ಯ ಪಂತ್ 2,885 ರನ್‌ಗ ಗಳಿಸಿದ್ದಾರೆ, ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಗಿಲ್(2,867) ಅವರನ್ನು ಹಿಂದಿಕ್ಕಿದರು. ಸದ್ಯ ಪಂತ್ ಗಿಲ್‌ಗಿಂತ 18 ರನ್‌ಗಳ ಮುಂದಿದ್ದಾರೆ.
ಪಂದ್ಯದಲ್ಲಿ ಗಿಲ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 16 ಮತ್ತು 8 ರನ್ ಗಳಿಸಿದರು. ಭಾರತದ ನಾಯಕ ಮತ್ತು ಪಂತ್ ಇಬ್ಬರೂ 41 ಡಬ್ಲ್ಯೂಟಿಸಿ ಪಂದ್ಯಗಳನ್ನು ಆಡಿದ್ದಾರೆ, ಆದರೆ ಗಿಲ್ 75 ಇನ್ನಿಂಗ್ಸ್‌ಗಳಿಗೆ ಹೋಲಿಸಿದರೆ ಪಂತ್ 73 ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ರನ್ ಗಳಿಸಿದ್ದಾರೆ.
ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ 100ನೇ ಸಿಕ್ಸರ್ ಪೂರ್ತಿಗೊಳಿಸಿದರು. ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಒಟ್ಟಾರೆಯಾಗಿ ಹಾಗೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದಾಖಲೆ ಬರೆದ ಮಾನವ್ ಸುತಾರ್
ಸ್ಪಿನ್ನರ್ ಮಾನವ್ ಸುತಾರ್ (131ಕ್ಕೆ 10) ವಿದೇಶಿ ನೆಲದ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಿದ ಭಾರತದ ಎಡಗೈ ಸ್ಪಿನ್ನರ್ ಎನಿಸಿದರು. ಅವರು ಎಡಗೈ ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ 1977ರಲ್ಲಿ ಆಸ್ಟ್ರೆಲಿಯಾದಲ್ಲಿ 194 ರನ್ಗಳಿಗೆ 10 ವಿಕೆಟ್ ಕಬಳಿಸಿದ್ದ ದಾಖಲೆ ಮುರಿದರು. ಸುತಾರ್ ಶ್ರೀಲಂಕಾದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ 3ನೇ ಭಾರತೀಯರೆನಿಸಿದರು. ಹರ್ಭಜನ್ ಸಿಂಗ್ (2008ರಲ್ಲಿ 153ಕ್ಕೆ 10), ಆರ್. ಅಶ್ವಿನ್ (2015ರಲ್ಲಿ 160ಕ್ಕೆ 10) ಮೊದಲಿಬ್ಬರು ಸಾಧಕರು.
ಮೊಟ್ಟ ಮೊದಲ ಎಸೆತದಲ್ಲಿಯೇ ವಿಕೆಟ್ ಕಿತ್ತು ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಓಲ್ಲಿ ರಾಬಿನ್ಸನ್!
ಸುತಾರ್ ಭಾರತ ಪರ ಆಡಿದ ಮೊದಲ 2 ಟೆಸ್ಟ್ಗಳಲ್ಲಿ 3ನೇ ಗರಿಷ್ಠ 17 ವಿಕೆಟ್ ಕಬಳಿಸಿದ್ದಾರೆ. ಹಿರ್ವಾನಿ (24) ಮತ್ತು ಅಕ್ಷರ್ (18) ಅಧಿಕ ವಿಕೆಟ್ ಗಳಿಸಿರುವ ಭಾರತೀಯರು. ಮಾನವ್ ಸುತಾರ್ ಹಾಲಿ ವರ್ಷ ಅಫ್ಘಾನಿಸ್ತಾನ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು ಮತ್ತು 7 ವಿಕೆಟ್ ಕಬಳಿಸಿ ಮಿಂಚಿದ್ದರು. ಸದ್ಯ ಅವರ ಪ್ರದರ್ಶನ ನೋಡುವಾಗ ಭಾರತದ ಭವಿಷ್ಯದ ಸ್ಪಿನ್ನರ್ ಆಗಿ ಮುಂದುವರಿಯುವ ಸಾಧ್ಯತೆಯೊಂದು ಗೋಚರಿಸಿದೆ.