ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಸಿಸಿ ನೀತಿ ಸಂಹಿತೆ ಉಲ್ಲಂಘನೆ; ಪಾಕ್‌ನ ಸಲ್ಮಾನ್ ಆಘಾಗೆ ಒಂದು ಡಿಮೆರಿಟ್ ಶಿಕ್ಷೆ

Salman Agha: 62 ಎಸೆತಗಳಲ್ಲಿ 64 ರನ್‌ ಗಳಿಸಿದ್ದ ಸಲ್ಮಾನ್ ಅಘಾ, ಮೈದಾನದಲ್ಲೇ ಮೆಹಿದಿ ಹಸನ್ ಮಿರಾಜ್‌ನೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಂದ್ಯದ ನಂತರವೂ ಮಿರಜ್ ನಡೆಯು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಆಘಾ ಆರೋಪಿಸಿದರು.

ನೀತಿ ಸಂಹಿತೆ ಉಲ್ಲಂಘನೆ; ಸಲ್ಮಾನ್ ಆಘಾಗೆ ದಂಡ ವಿಧಿಸಿದ ಐಸಿಸಿ

Salman Agha -

Abhilash BC
Abhilash BC Mar 15, 2026 1:54 PM

ದುಬೈ, ಮಾ.15: ಶುಕ್ರವಾರ ಮಿರ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ(ICC Code of Conduct) ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಆಟಗಾರ ಸಲ್ಮಾನ್ ಅಘಾ(Salman Agha) ಅವರಿಗೆ ಐಸಿಸಿ ವಾಗ್ದಂಡನೆ ವಿಧಿಸಿದೆ. ಐಸಿಸಿ ಹೇಳಿಕೆಯೊಂದರಲ್ಲಿ, ಆಘಾ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದು ಕಂಡುಬಂದಿದೆ ಎಂದು ತಿಳಿಸಿದೆ.

"ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗ"ಕ್ಕೆ ಸಂಬಂಧಿಸಿದೆ. ಸಲ್ಮಾನ್‌ ಅವರ ತಪ್ಪಿಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೇಲಿನ ಮೊದಲ ಅಪರಾಧವಾಗಿದೆ. ಈ 24 ತಿಂಗಳ ಅವಧಿಯಲ್ಲಿ ನಾಲ್ಕು ಡಿಮೆರಿಟ್ ಪಾಯಿಂಟ್‌ಗಳು ಅಮಾನತಿಗೆ ಕಾರಣವಾಗುತ್ತವೆ. ಆಘಾ ಅಪರಾಧವನ್ನು ಒಪ್ಪಿಕೊಂಡರು ಮತ್ತು ಶಿಕ್ಷೆಯನ್ನು ಸ್ವೀಕರಿಸಿದರು. ಹೀಗಾಗಿ ಔಪಚಾರಿಕ ವಿಚಾರಣೆ ಅಗತ್ಯವಿಲ್ಲ.

ಪಾಕಿಸ್ತಾನದ ಬ್ಯಾಟಿಂಗ್ ಇನ್ನಿಂಗ್ಸ್‌ನ 39ನೇ ಓವರ್‌ನಲ್ಲಿ ಮೆಹಿದಿ ಹಸನ್ ಮಿರಾಜ್ ವಿವಾದಾತ್ಮಕವಾಗಿ ರನೌಟ್ ಮಾಡಿದ ನಂತರ, ಆಘಾ ತಮ್ಮ ಬ್ಯಾಟಿಂಗ್ ಗ್ಲೌಸ್ ಮತ್ತು ಹೆಲ್ಮೆಟ್ ಅನ್ನು ಅನುಚಿತ ರೀತಿಯಲ್ಲಿ ನೆಲಕ್ಕೆ ಎಸೆದಿದ್ದರು.

ನ್ಯೂ ಫೆರಾರಿ ಕಾರಿನಲ್ಲಿ ಗೆಳತಿ ಜತೆ ಪಾಂಡ್ಯ ಸವಾರಿ; ವಿಡಿಯೊ ವೈರಲ್

ಮಿರಾಜ್ ಎಸೆದ ಓವರ್‌ನ 4ನೇ ಎಸೆತೌನ್ನು ಸ್ಟ್ರೈಕ್‌ನಲ್ಲಿದ್ದ ರಿಜ್ವಾನ್ ಡಿಫೆಂಡ್ ಮಾಡಿದರು. ಬಾಲ್ ಬೌಲರ್‌ ಕಡೆ ಬರುತ್ತಿರುವುದನ್ನು ನೋಡಿದ ಮಿರಾಜ್‌ ಬಾಲ್ ತಡೆಯುವ ಪ್ರಯತ್ನದಲ್ಲಿ ಆ ಕಡೆ ತೆರಳಿದಾಗ ನಾನ್‌ಸ್ಟ್ರೈಕರ್‌ನಲ್ಲಿದ್ದ ಸಲ್ಮಾನ್ ಅಘಾ ಅವರಿಗೆ ಡಿಕ್ಕಿ ಹೊಡೆದರು. ಕಾಲಿಗೆ ತಲುಗಿದ ಬಾಲ್ ಅನ್ನು ಕ್ರೀಸ್‌ನ ಹೊರಗಿದ್ದ ಅಘಾ, ಬೌಲರ್‌ಗೆ ಕೊಡಲು ತೆರಳುವ ಮುಂಚೆಯೇ ಮಿರಾಜ್ ಅವರನ್ನು ರನೌಟ್‌ ಮಾಡಿದರು. ಮೂರನೇ ಅಂಪೈರ್‌ ಬಾಲ್‌ ಡೆಡ್‌ ಆಗಿಲ್ಲದ ಕಾರಣ ಮೂರನೇ ಅಂಪೈರ್‌ ಔಟ್‌ ಎಂದು ಘೋಷಿಸಿದರು. ಇದರಿಂದ ಸಿಟ್ಟುಗೊಂಡ ಆಘಾ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಆಕ್ರೋಶ ಹೊರಹಾಕಿದರು.

62 ಎಸೆತಗಳಲ್ಲಿ 64 ರನ್‌ ಗಳಿಸಿದ್ದ ಸಲ್ಮಾನ್ ಅಘಾ, ಮೈದಾನದಲ್ಲೇ ಮಿರಾಜ್‌ನೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಂದ್ಯದ ನಂತರವೂ ಮಿರಜ್ ನಡೆಯು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಆಘಾ ಆರೋಪಿಸಿದರು.