ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಆಜಾದ್ ಕಾಶ್ಮೀರ' ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಪಾಕ್‌ ಮಾಜಿ ನಾಯಕಿ

ಪಾಕಿಸ್ತಾನದ ನತಲಿಯಾ ಪರ್ವೇಜ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಬಂದಾಗ ವೀಕ್ಷಕ ವಿವರಣೆ ಮಾಡುತ್ತಿದ್ದ ಸನಾ, ಆಕೆ ಆಜಾದ್ ಕಾಶ್ಮೀರ ಮೂಲದವರು ಎಂದು ಹೇಳಿಕೆ ನೀಡಿದ್ದರು. ಭಾರತ ಮೂಲದ ಸಾಮಾಜಿಕ ಖಾತೆಗಳಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಐಸಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

'ಆಜಾದ್ ಕಾಶ್ಮೀರ' ಹೇಳಿಕೆಗೆ ಸ್ಪಷ್ಟನೆ ನೀಡಿದ ಪಾಕ್‌ ಮಾಜಿ ನಾಯಕಿ

-

Abhilash BC Abhilash BC Oct 3, 2025 8:34 AM

ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ(Women's ODI World Cup 2025) ಲೈವ್ ಕಾಮೆಂಟರಿ ವೇಳೆ 'ಆಜಾದ್ ಕಾಶ್ಮೀರ'(Azad Kashmir) ಉಲ್ಲೇಖ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್(Sana Mir), ಇದಿಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನದ ನತಲಿಯಾ ಪರ್ವೇಜ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಬಂದಾಗ ವೀಕ್ಷಕ ವಿವರಣೆ ಮಾಡುತ್ತಿದ್ದ ಸನಾ, ಆಕೆ ಆಜಾದ್ ಕಾಶ್ಮೀರ ಮೂಲದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ತಮ್ಮ ಹೇಳಿಕೆಯ ಕುರಿತು ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸನಾ ಮಿರ್, ವಿಷಯಗಳು ಗಾಳಿಗೆ ತೂರಲ್ಪಡುತ್ತಿರುವುದು ಮತ್ತು ಕ್ರೀಡೆಯಲ್ಲಿರುವ ಜನರು ಅನಗತ್ಯ ಒತ್ತಡಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ. ಇದಕ್ಕೆ ಸಾರ್ವಜನಿಕ ಮಟ್ಟದಲ್ಲಿ ವಿವರಣೆಯ ಅಗತ್ಯವಿರುವುದು ದುಃಖಕರ.

ʼಪಾಕಿಸ್ತಾನದ ಆಟಗಾರ್ತಿಯೊಬ್ಬರ ತವರೂರು ಬಗ್ಗೆ ನನ್ನ ಕಾಮೆಂಟ್, ಪಾಕಿಸ್ತಾನದ ಒಂದು ನಿರ್ದಿಷ್ಟ ಪ್ರದೇಶದಿಂದ ಅವರು ಎದುರಿಸಿದ ಸವಾಲುಗಳನ್ನು ಮತ್ತು ಅವರ ಅದ್ಭುತ ಪ್ರಯಾಣವನ್ನು ಎತ್ತಿ ತೋರಿಸಲು ಮಾತ್ರ ಉದ್ದೇಶಿಸಲಾಗಿತ್ತು. ಆಟಗಾರರು ಎಲ್ಲಿಂದ ಬರುತ್ತಾರೆ ಎಂಬುದರ ಕುರಿತು ನಾವು ವ್ಯಾಖ್ಯಾನಕಾರರಾಗಿ ಮಾಡುವ ಕಥೆ ಹೇಳುವಿಕೆಯ ಭಾಗ ಇದು. ದಯವಿಟ್ಟು ಅದನ್ನು ರಾಜಕೀಯಗೊಳಿಸಬೇಡಿ. ವರ್ಲ್ಡ್ ಫೀಡ್‌ನಲ್ಲಿ ವ್ಯಾಖ್ಯಾನಕಾರರಾಗಿ, ನಾವು ಕ್ರೀಡೆ, ತಂಡಗಳು ಮತ್ತು ಆಟಗಾರರ ಮೇಲೆ ಕೇಂದ್ರೀಕರಿಸಬೇಕು, ಧೈರ್ಯ ಮತ್ತು ಪರಿಶ್ರಮದ ಸ್ಪೂರ್ತಿದಾಯಕ ಕಥೆಗಳನ್ನು ಎತ್ತಿ ತೋರಿಸಬೇಕು. ನನ್ನ ಹೃದಯದಲ್ಲಿ ಯಾವುದೇ ದುರುದ್ದೇಶವಿಲ್ಲ ಅಥವಾ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲ' ಎಂದು ಹೇಳಿದ್ದಾರೆ.



'ನನ್ನ ಹೆಚ್ಚಿನ ಆಟಗಾರರ ಬಗ್ಗೆ ನಾನು ಎಲ್ಲಿಂದ ಸಂಶೋಧನೆ ಮಾಡುತ್ತೇನೆ ಎಂಬುದರ ಸ್ಕ್ರೀನ್‌ಶಾಟ್ ಅನ್ನು ಸಹ ಲಗತ್ತಿಸುತ್ತಿದ್ದೇನೆ, ಅದು ಪಾಕಿಸ್ತಾನದ್ದಾಗಿರಬಹುದು ಅಥವಾ ಇನ್ನಾವುದೇ ದೇಶದ್ದಾಗಿರಬಹುದು. ಅವರು ಈಗ ಅದನ್ನು ಬದಲಾಯಿಸಿದ್ದಾರೆಂದು ನನಗೆ ಅರ್ಥವಾಗಿದೆ' ಎಂದು ಹೇಳಿದರು.

ಸನಾ ಮಿರ್ ಅವರನ್ನು ಐಸಿಸಿ ಕಾಮೆಂಟರಿ ಪ್ಯಾನೆಲ್‌ನಿಂದ ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ Asia Cup 2025: ʻಭಾರತ ತಂಡದ ಎದುರು ಹ್ಯಾರಿಸ್‌ ರೌಫ್‌ ರನ್‌ ಮಷೀನ್‌ʼ-ವಸೀಮ್‌ ಅಕ್ರಮ್‌ ಟೀಕೆ!