ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಓವರ್‌ ಪೂರ್ತಿಗೊಳಿಸಲು 11 ಎಸೆತ ಎಸೆದು ಅನಗತ್ಯ ದಾಖಲೆ ಬರೆದ ಸಂದೀಪ್‌ ಶರ್ಮ

Sandeep Sharma: ಇದುವರೆಗೆ ಐಪಿಎಲ್‌ನಲ್ಲಿ ಸಂದೀಪ್‌ ಸೇರಿ ಒಟ್ಟು ನಾಲ್ಕು ಮಂದಿ ಓವರ್‌ ಒಂದನ್ನು ಪೂರ್ತಿಗೊಳಿಸಲು 11 ಎಸೆತಗಳನ್ನು ಎಸೆದಿದ್ದಾರೆ. ಈ ಆವೃತ್ತಿಯಲ್ಲಿ ಇದು ಎರಡನೇ ನಿದರ್ಶನ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಶಾರ್ದೂಲ್‌ ಠಾಕೂರ್‌ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 11 ಎಸೆತ ಎಸೆದಿದ್ದರು.

11 ಎಸೆತ ಎಸೆದು ಅನಗತ್ಯ ದಾಖಲೆ ಬರೆದ ಸಂದೀಪ್‌ ಶರ್ಮ

Profile Abhilash BC Apr 17, 2025 8:55 AM

ನವದೆಹಲಿ: ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಬುಧವಾರ(ಎ.16) ನಡೆದ ಡೆಲ್ಲಿ ಕ್ಯಾಪಿಟಲ್ಸ್‌(DC vs RR) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಸಂದೀಪ್‌ ಶರ್ಮಾ(Sandeep Sharma) ಅವರು ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಮೂರು ಓವರ್‌ಗಳನ್ನು ಅತ್ಯುತ್ತಮವಾಗಿ ಎಸೆದಿದ್ದ ಸಂದೀಪ್‌ ತಮ್ಮ ಕೊನೆಯ ಓವರ್‌ನಲ್ಲಿ ಸತತ ವೈಡ್‌ ಮತ್ತು ನೋಬಾಲ್‌ ಸಹಿತ ದುಬಾರಿಯಾದರು. ಈ ಓವರ್‌ ಪೂರ್ತಿಗೊಳಿಸಲು ಅವರು 11 ಎಸೆತಗಳನ್ನು ಎಸೆದರು. ಈ ಮೂಲಕ ಐಪಿಎಲ್‌(IPL 2025) ಪಂದ್ಯವೊಂದರಲ್ಲಿ ಓವರ್‌ ಪೂರ್ತಿಗೊಳಿಸಲು ಅತ್ಯಧಿಕ ಎಸೆತ ಎಸೆದ ನಾಲ್ಕನೇ ಬೌಲರ್‌ ಎಂಬ ಅನಪೇಕ್ಷಿತ ದಾಖಲೆ ಬರೆದರು.

ಇದುವರೆಗೆ ಐಪಿಎಲ್‌ನಲ್ಲಿ ಸಂದೀಪ್‌ ಸೇರಿ ಒಟ್ಟು ನಾಲ್ಕು ಮಂದಿ ಓವರ್‌ ಒಂದನ್ನು ಪೂರ್ತಿಗೊಳಿಸಲು 11 ಎಸೆತಗಳನ್ನು ಎಸೆದಿದ್ದಾರೆ. ಈ ಆವೃತ್ತಿಯಲ್ಲಿ ಇದು ಎರಡನೇ ನಿದರ್ಶನ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಶಾರ್ದೂಲ್‌ ಠಾಕೂರ್‌ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 11 ಎಸೆತ ಎಸೆದಿದ್ದರು.

ಮೂರು ಓವರ್‌ನಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟಿದ್ದ ಸಂದೀಪ್‌ ಅಂತಿಮ ಓವರ್‌ನಲ್ಲಿ ನಾಲ್ಕು ವೈಡ್ ಮತ್ತು ಒಂದು ನೋ-ಬಾಲ್ ಸೇರಿ ಒಟ್ಟು 19 ರನ್ ಬಿಟ್ಟುಕೊಟ್ಟರು. ಓವರ್‌ನ ಕೊನೆಯ ಎಸೆತದಲ್ಲಿ ಸಂದೀಪ್‌ಗೆ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಮಹೇಶ್ ತೀಕ್ಷಣ ಸುಲಭದ ಕ್ಯಾಚ್‌ ಕೈಚೆಲ್ಲಿದರು. ಇದರಿಂದ ವಿಕೆಟ್‌ ಅವಕಾಶ ಕೈತಪ್ಪಿತು. ಸೂಪರ್‌ ಓವರ್‌ ಕೂಡ ಸಂದೀಪ್‌ ಶರ್ಮಾ ಎಸೆದರು.

ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ಎಸೆತಗಳು

ಮೊಹಮ್ಮದ್‌ ಸಿರಾಜ್‌- 11 ಎಸೆತ (2023)

ತುಷಾರ್‌ ದೇಶ್‌ಪಾಂಡೆ- 11 ಎಸೆತ(2023)

ಶಾರ್ದೂಲ್‌ ಠಾಕೂರ್‌- 11 ಎಸೆತ(2025)

ಸಂದೀಪ್‌ ಶರ್ಮಾ- 11 ಎಸೆತ(2025)

ಇದನ್ನೂ ಓದಿ IPL 2025: ರಿಯಾನ್ ಪರಾಗ್ ಬ್ಯಾಟ್‌ ಪರಿಶೀಲಿಸಲು ವಿಫಲರಾದ ಅಂಪೈರ್‌

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ 5 ವಿಕೆಟ್‌ಗೆ 188 ರನ್‌ ಬಾರಿಸಿದರೆ, ರಾಜಸ್ಥಾನ್‌ ಆರಂಭದಿಂದಲೇ ಅಬ್ಬರಿಸುತ್ತ ಹೋದರೂ ಅಂತಿಮವಾಗಿ 4 ವಿಕೆಟಿಗೆ 188 ರನ್‌ ಗಳಿಸಿ ಪಂದ್ಯ ಟೈ ಗೊಂಡಿತು.

ಸೂಪರ್ ಓವರ್​​ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್ 11 ರನ್​ಗಳಿಸಿತು. 12 ರನ್​ಗಳ ಸೂಪರ್​ ಓವರ್​ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 4 ಎಸೆತಗಳಲ್ಲಿ 13 ರನ್​ಗಳಿಸಿ ಗೆಲುವು ಸಾಧಿಸಿತು. ಡೆಲ್ಲಿ ಪರ ರಾಹುಲ್ 7, ಟ್ರಿಸ್ಟಾನ್ ಸ್ಟಬ್ಸ್ 6 ರನ್​ಗಳಿಸಿದರು.