ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shreya Ghoshal: ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಶ್ರೇಯಾ ಘೋಷಾಲ್ ಭೇಟಿ: ಹಾಡಿನ ಮೂಲಕ ಆಟಗಾರ್ತಿಯರಿಗೆ ವಿಶ್ವಕಪ್‌ ಗೆಲ್ಲಲು 'ಚಿಯರ್‌ ಅಪ್‌'

ಅತ್ಯಂತ ಜನಪ್ರಿಯ ಮತ್ತು ಭಾವಪೂರ್ಣ ಗೀತೆಗಳಲ್ಲಿ ಒಂದಾದ ಪರಿಣೀತಾ ಚಿತ್ರದ 'ಪಿಯು ಬೋಲೆ' ಹಾಡನ್ನು ಹಾಡುವ ಮೂಲಕ ಆಟಗಾರ್ತಿಯರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದರು. ಈ ವಿಶೇಷ ಕ್ಷಣದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಟೀಮ್‌ ಇಂಡಿಯಾ ಆಟಗಾರ್ತಿಯರು ಕೂಡ ಶ್ರೇಯಾ ಘೋಷಾಲ್ ಜತೆ ತಮ್ಮ ನೆಚ್ಚಿನ ಹಾಡುಗಳಿಗೆ ಧ್ವನಿ ಗೂಡಿಸಿದರು.

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಶ್ರೇಯಾ ಘೋಷಾಲ್ ಭೇಟಿ

-

Abhilash BC Abhilash BC Oct 3, 2025 2:33 PM

ಗುವಾಹಟಿ: 13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌(ICC Women’s World Cup 2025)ಗೆ ಕಳೆದ ಮಂಗಳವಾರ ಅಧಿಕೃತ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಶುಭಾರಂಭ ಮಾಡಿತ್ತು. ಪಂದ್ಯ ಮುಕ್ತಾಯದ ಬಳಿಕ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್(Shreya Ghoshal) ಅವರು ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ಕೊಟ್ಟು ಆಟಗಾರ್ತಿಯರನ್ನು ವಿಶೇಷವಾಗಿ ಹುರಿದುಂಬಿಸಿದರು.

ಅತ್ಯಂತ ಜನಪ್ರಿಯ ಮತ್ತು ಭಾವಪೂರ್ಣ ಗೀತೆಗಳಲ್ಲಿ ಒಂದಾದ ಪರಿಣೀತಾ ಚಿತ್ರದ 'ಪಿಯು ಬೋಲೆ' ಹಾಡನ್ನು ಹಾಡುವ ಮೂಲಕ ಆಟಗಾರ್ತಿಯರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದರು. ಈ ವಿಶೇಷ ಕ್ಷಣದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಟೀಮ್‌ ಇಂಡಿಯಾ ಆಟಗಾರ್ತಿಯರು ಕೂಡ ಶ್ರೇಯಾ ಘೋಷಾಲ್ ಜತೆ ತಮ್ಮ ನೆಚ್ಚಿನ ಹಾಡುಗಳಿಗೆ ಧ್ವನಿ ಗೂಡಿಸಿದರು.

ಡ್ರೆಸ್ಸಿಂಗ್ ರೂಮ್‌ಗೆ ದಿಢೀರ್‌ ಆಗಿ ಭೇಟಿ ಕೊಟ್ಟ ಶ್ರೇಯಾ ಘೋಷಾಲ್‌ಗೆ ಸ್ಟಾರ್‌ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಆಟಗಾರ್ತಿಯರ ಪರಿಚಯ ಮಾಡಿಕೊಟ್ಟರು. ಈ ವೇಳೆ ಶ್ರೇಯಾ ಅವರು ನಾನು ಸ್ಮೃತಿ ಮಂಧಾನ ಅವರ ಅಭಿಮಾನಿ ಎಂದರು.

ಭಾರತ ಮಹಿಳಾ ತಂಡ ತನ್ನ ಎರಡನೇ ಪಂದ್ಯವನ್ನು ಅ.5(ಭಾನುವಾರ) ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರೂ ಪಾಕ್‌ ಆಟಗಾರ್ತಿಯರಿಗೆ ಶೇಕ್‌ಹ್ಯಾಂಡ್‌ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಆಟಗಾರ್ತಿಯರು ಮತ್ತು ತಂಡದ ನಿರ್ವಹಣ ಸಮಿತಿಗೆ ಶೇಕ್‌ಹ್ಯಾಂಡ್‌ ಮಾಡದಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ

ಇದನ್ನೂ ಓದಿ Women's World Cup: ಹೊಸ ದಾಖಲೆ ಬರೆದ ಮಹಿಳಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ