IND vs WI: ಎಂಎಸ್ ಧೋನಿಯ ಟೆಸ್ಟ್ ಸಿಕ್ಸರ್‌ಗಳ ದಾಖಲೆ ಮುರಿದ ರವೀಂದ್ರ ಜಡೇಜಾ!
ವೆಸ್ ಇಂಡೀಸ್ ವಿರುದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿಉ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅರ್ಧಶತಕವನ್ನು ಬಾರಿಸಿದರು. ತಮ್ಮ ಈ ಇನಿಂಗ್ಸ್‌ನಲ್ಲಿ ಅವರು 4 ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಎಂಎಸ್ ಧೋನಿಯ ಸಿಕ್ಸರ್‌ಗಳ ದಾಖಲೆಯನ್ನು ಜಡೇಜಾ ಮುರಿದಿದ್ದಾರೆ.

ಎಂಎಸ್ ಧೋನಿಯ ಟೆಸ್ಟ್ ಸಿಕ್ಸರ್ ದಾಖಲೆ ಮುರಿದ ರವೀಂದ್ರ ಜಡೇಜಾ. -

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ (IND vs WI) ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ತಮ್ಮ ಅರ್ಧಶತಕದ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಹಾಗೂ ಮೂರು ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ಸಿಕ್ಸರ್‌ಗಳ ದಾಖಲೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು (MS Dhoni) ರವೀಂದ್ರ ಜಡೇಜಾ ಹಿಂದಿಕ್ಕಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಉಪ ನಾಯಕ, 109 ಓವರ್‌ಗಳ ವೇಳೆಗೆ 116 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ ಅಜೇಯ 66 ರನ್‌ಗಳನ್ನು ಗಳಿಸಿದ್ದಾರೆ. ತಮ್ಮ ಈ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳ ಮೂಲಕ ಅವರು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.
KL Rahul: ಕನ್ನಡಿಗ ರಾಹುಲ್ ಶತಕ; ಮುನ್ನಡೆ ಕಾಯ್ದುಕೊಂಡ ಭಾರತ
ನಾಲ್ಕು ಸಿಕ್ಸರ್‌ಗಳ ಮೂಲಕ ರವೀಂದ್ರ ಜಡೇಜಾ ಇದೀಗ 86 ಟೆಸ್ಟ್ ಪಂದ್ಯಗಳಿಂದ 79 ಸಿಕ್ಸರ್‌ಗಳನ್ನು ಸಿಡಿಸಿದಂತಾಗಿದೆ. ಎಂಎಸ್ ಧೋನಿ 90 ಟೆಸ್ಟ್ ಪಂದ್ಯಗಳಿಂದ 78 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ ಒಂದು ಸಿಕ್ಸರ್ ಜಾಸ್ತಿ ಬಾರಿಸಿದ್ದಾರೆ. 90 ಸಿಕ್ಸರ್‌ಗಳ ಮೂಲಕ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ (103 ಟೆಸ್ಟ್) ಹಾಗೂ ರಿಷಭ್ ಪಂತ್ (47 ಟೆಸ್ಟ್) ಅಗ್ರ ಸ್ಥಾನವನ್ನು ಜಂಟಿಯಾಗಿ ಅಲಂಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ( 88 ಸಿಕ್ಸರ್, 67 ಟೆಸ್ಟ್) ಇದ್ದಾರೆ.
Making his way up in a special club 📈
— BCCI (@BCCI) October 3, 2025
Another milestone for Ravindra Jadeja! 💪 #TeamIndia | #INDvWI | @IDFCFIRSTBank | @imjadeja pic.twitter.com/eeacFAFkrz
ಪ್ರಸಕ್ತ ವರ್ಷದಲ್ಲಿ ರವೀಂದ್ರ ಜಡೇಜಾ ಪಾಲಿಗೆ ಏಳನೇ ಬಾರಿ 50ಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಿದ್ದಾರೆ. ಈ ವರ್ಷ ಆಡಿದ 7 ಟೆಸ್ಟ್ ಹಾಗೂ 13 ಇನಿಂಗ್ಸ್‌ಗಳಿಂದ 75.62ರ ಸರಾಸರಿಯಲ್ಲಿ 605 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಸಿಕ್ಸರ್ ಹಾಗೂ 6 ಅರ್ಧಶತಕವನ್ನು ಗಳಿಸಿದ್ದಾರೆ. ಅಜೇಯ 107 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇಲ್ಲಿಯವರೆಗೂ 3936 ರನ್‌ಗಳನ್ನು ಗಳಿಸಿರುವ ರವೀಂದ್ರ ಜಡೇಜಾ, 4000 ರನ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 14 ರನ್‌ಗಳ ಅಗತ್ಯವಿದೆ. ಇದರಲ್ಲಿ ಇವರು ಐದು ಶತಕಗಳು ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಈ ಟಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಅವರು ಆಡಿದ್ದ ಐದು ಟೆಸ್ಟ್ ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 86ರ ಸರಾಸರಿಯಲ್ಲಿ 516 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಒಂದು ಶತಕ ಹಾಗೂ 5 ಅರ್ಧಶತಕಗಳನ್ನು ಗಳಿಸಿದ್ದರು.