KL Rahul: ಕನ್ನಡಿಗ ರಾಹುಲ್ ಶತಕ; ಮುನ್ನಡೆ ಕಾಯ್ದುಕೊಂಡ ಭಾರತ
53 ರನ್ ಗಳಿಸಿದ್ದಲ್ಲಿಂದ ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ 12 ಬೌಂಡರಿಯೊಂದಿಗೆ ಶತಕ ಪೂರ್ತಿಗೊಳಿಸಿದರು. 100 ರನ್ ಗಳಿಸಿರುವ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶತಕ ಬಾರಿಸಿದ ಬಳಿಕ ವಿಶೇಷವಾಗ ಸಂಭ್ರಮಿಸಿದರು. ಸದ್ಯ ಭೋಜನ ವಿರಾಮಕ್ಕೆ ಭಾರತ 3 ವಿಕೆಟ್‌ಗೆ 218 ರನ್ ಗಳಿಸಿದ್ದು, 56 ರನ್ ಮುನ್ನಡೆ ಸಾಧಿಸಿದೆ.

-

ಅಹಮದಾಬಾದ್: ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದಾರೆ. ತವರಿನಲ್ಲಿ ದಾಖಲಾದ ಎರಡನೇ ಮತ್ತು ಒಟ್ಟಾರೆ 11ನೇ ಟೆಸ್ಟ್ ಶತಕವಾಗಿದೆ. ರಾಹುಲ್ ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಶತಕ ಬಾರಿಸಿದ್ದು 2016ರ ಇಂಗ್ಲೆಂಡ್ ಪ್ರವಾಸದಲ್ಲಿ.
ಶತಕದ ಮೂಲಕ ಇಂಗ್ಲೆಂಡ್‌ನ ಬೆನ್ ಡಕೆಟ್ ಅವರನ್ನು ಹಿಂದಿಕ್ಕಿ 2025 ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆರಂಭಿಕ ಆಟಗಾರ ಎಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. ಸದ್ಯ ರಾಹುಲ್ 672*ರನ್ ಬಾರಿಸಿದ್ದಾರೆ. ಬೆನ್ ಡಕೆಟ್ 602 ರನ್ ಗಳಿಸಿದ್ದಾರೆ.
A knock of the highest order! 🔝
— BCCI (@BCCI) October 3, 2025
KL Rahul celebrates a superb Test hundred 🙌
Updates ▶ https://t.co/MNXdZcelkD#INDvWI | @IDFCFIRSTBank | @klrahul pic.twitter.com/Q7r5Xj1sup
53 ರನ್ ಗಳಿಸಿದ್ದಲ್ಲಿಂದ ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ 12 ಬೌಂಡರಿಯೊಂದಿಗೆ ಶತಕ ಪೂರ್ತಿಗೊಳಿಸಿದರು. 100 ರನ್ ಗಳಿಸಿರುವ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶತಕ ಬಾರಿಸಿದ ಬಳಿಕ ವಿಶೇಷವಾಗ ಸಂಭ್ರಮಿಸಿದರು. ಸದ್ಯ ಭೋಜನ ವಿರಾಮಕ್ಕೆ ಭಾರತ 3 ವಿಕೆಟ್‌ಗೆ 218 ರನ್ ಗಳಿಸಿದ್ದು, 56 ರನ್ ಮುನ್ನಡೆ ಸಾಧಿಸಿದೆ. 18 ರನ್ ಗಳಿಸಿದ್ದ ನಾಯಕ ಶುಭಮನ್ ಗಿಲ್ ಅವರು ಎರಡನೇ ದಿನದಾಟದಲ್ಲಿ 50 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್; ಬೆಳ್ಳಿ ಗೆದ್ದ ಮೀರಾಬಾಯಿ ಚಾನು
ಮೊದಲ ಟೆಸ್ಟ್‌ನ ಮೊದಲ ದಿನ ಅಹಮದಾಬಾದ್ ಕ್ರೀಡಾಂಗಣಕ್ಕೆ ಹೆಚ್ಚಿನ ಪ್ರೇಕ್ಷಕರು ಆಗಮಿಸಲಿಲ್ಲ. ಆದರೆ ದ್ವಿತೀಯ ದಿನದಾಟದಲ್ಲಿ ಹೆಚ್ಚಿನ ಪ್ರೇಕ್ಷಕರು ಉಪಸ್ಥಿತರಿದ್ದರು. ಭಾರತೀಯ ಆಟಗಾರರನ್ನು ಹುರದುಂಬಿಸುವ ವಿಡಿಯೊಗಳು ವೈರಲ್ ಆಗಿದೆ.