ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ಏಕದಿನ ನಾಯಕತ್ವದೊಂದಿಗೆ ಹಲವು ದಾಖಲೆ ಬರೆದ ಗಿಲ್‌; ಮಳೆಯಿಂದ ಪಂದ್ಯ ಸ್ಥಗಿತ

ಸುಮಾರು ಆರು ತಿಂಗಳ ಬಳಿಕ ಭಾರತ ತಂಡದ ಪರ ಆಡಲಿರುವ ಸ್ಟಾರ್​ ಬ್ಯಾಟರ್​ಗಳಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಪಂದ್ಯದ ಕೇಂದ್ರಬಿಂದುಗಳೆನಿಸಿದ್ದರು. ಇವರ ಆಟ ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ ಉಭಯ ಆಟಗಾರರು ಕಳಪೆ ಬ್ಯಾಟಿಂಗ್‌ ಮೂಲಕ ಅವರ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಏಕದಿನ ನಾಯಕತ್ವದೊಂದಿಗೆ ಹಲವು ದಾಖಲೆ ಬರೆದ ಗಿಲ್‌

-

Abhilash BC Abhilash BC Oct 19, 2025 10:27 AM

ಪರ್ತ್‌: ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌(Shubman Gill) ಅವರು ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ(IND vs AUS 1st ODI) ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಏಕದಿನ ನಾಯಕತ್ವವನ್ನು ಆರಂಭಿಸಿದರು. ಇದರೊಂದಿಗೆ ಅವರು ಹಲವು ದಾಖಲೆಗಳನ್ನು ನಿರ್ಮಿಸಿದರು. ದಾಖಲೆಯ ಪಟ್ಟಿ ಇಲ್ಲಿದೆ.

ಶುಭಮಾನ್​ ಗಿಲ್​ ಎಲ್ಲ 3 ಕ್ರಿಕೆಟ್​ ಪ್ರಕಾರದಲ್ಲಿ ಭಾರತವನ್ನು ಮುನ್ನಡೆಸಿದ 7ನೇ ನಾಯಕ ಎನಿಸಿಕೊಂಡರು. ವೀರೇಂದ್ರ ಸೆಹ್ವಾಗ್​, ಎಂಎಸ್​ ಧೋನಿ, ವಿರಾಟ್​ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್​ ಶರ್ಮ, ಕೆಎಲ್​ ರಾಹುಲ್​ ಹಿಂದಿನ ಸಾಧಕರು.

ಶುಭಮಾನ್​ ಗಿಲ್​ (26 ವರ್ಷ, 41 ದಿನ) ಏಕದಿನ ಕ್ರಿಕೆಟ್​ನಲ್ಲಿ ಭಾರತದ 28ನೇ ಮತ್ತು 7ನೇ ಅತಿ ಕಿರಿಯ ನಾಯಕ ಎನಿಸಿದರು.

ಗಿಲ್​ (122) ಭಾರತ ಪರ ಅತಿ ಕಡಿಮೆ ಪಂದ್ಯಗಳನ್ನು ಆಡಿ ಮೂರೂ ಮಾದರಿಯಲ್ಲಿಯೂ ನಾಯಕತ್ವ ವಹಿಸಿದ ನಾಯಕ ಎಂಬ ಹಿರಿಮೆಗೆ ಪಾತ್ರರಾದರು. ಅಜಿಂಕ್ಯ ರಹಾನೆ (129) ಹಿಂದಿನ ಸಾಧಕ.

ಇದನ್ನೂ ಓದಿ Rohit Sharma: ಆಸೀಸ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶೇಷ ದಾಖಲೆ ಬರೆದ ರೋಹಿತ್‌

ಸತತ 16 ಟಾಸ್‌ ಸೋತ ಭಾರತ

ಈ ಪಂದ್ಯದಲ್ಲಿ ಭಾರತ ಟಾಸ್‌ ಸೋಲುದರೊಂದಿಗೆ ಸತತವಾಗಿ 16 ಏಕದಿನ ಪಂದ್ಯದಲ್ಲಿ ಟಾಸ್‌ ಸೋತಂತಾಯಿತು. ಭಾರತ ಕೊನೆಯ ಟಾಸ್ 2023 ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ವಾಂಖೆಡೆಯಲ್ಲಿ ಗೆದ್ದಿತ್ತು.

ಕೊಹ್ಲಿ-ರೋಹಿತ್‌ ವಿಫಲ

ಸುಮಾರು ಆರು ತಿಂಗಳ ಬಳಿಕ ಭಾರತ ತಂಡದ ಪರ ಆಡಲಿರುವ ಸ್ಟಾರ್​ ಬ್ಯಾಟರ್​ಗಳಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಪಂದ್ಯದ ಕೇಂದ್ರಬಿಂದುಗಳೆನಿಸಿದ್ದರು. ಇವರ ಆಟ ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ ಉಭಯ ಆಟಗಾರರು ಕಳಪೆ ಬ್ಯಾಟಿಂಗ್‌ ಮೂಲಕ ಅವರ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ರೋಹಿತ್‌ 8 ರನ್‌ ಗಳಿಸಿದರೆ. ಕೊಹ್ಲಿ ಶೂನ್ಯ ಸುತ್ತಿದರು. ನಾಯಕ ಶುಭಮನ್‌ ಗಿಲ್‌ 10ರನ್‌ಗೆ ಆಟ ಮುಗಿಸಿದರು.

ಪಂದ್ಯಕ್ಕೆ ಮಳೆ ಅಡ್ಡಿ

ಹವಾವಾನ ಇಲಾಖೆ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಎರಡು ಬಾರಿ ಮಳೆ ಅಡಚಣೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಭಾರತ 11.5 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 37 ರನ್‌ ಗಳಿಸಿದೆ. ಅಕ್ಷರ್‌ ಪಟೇಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.