ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಮುಸ್ತಾಫಿಝುರ್‌ ರೆಹಮಾನ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌ ಕೊಟ್ಟ ಕೆಕೆಆರ್!

ಕೊಲ್ಕತಾ ನೈಟ್ ರೈಡರ್ಸ್ ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಮುಸ್ತಾಫಿಝುರ್ ರೆಹಮಾನ್ ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ಆಯ್ಕೆ ಮಾಡಿದೆ. ಬಾಂಗ್ಲಾ ವೇಗಿ, ಬಿಸಿಸಿಐ ನೀಡಿದ ಆದೇಶದ ನಂತರ ಮೂರು ಬಾರಿ ಚಾಂಪಿಯನ್ಸ್‌ ತಂಡದಿಂದ ಬಿಡುಗಡೆಯಾಗಿದ್ದರು. ಇದೀಗ ಇವರ ಸ್ಥಾನಕ್ಕೆ ಜಿಂಬಾಬ್ವೆ ವೇಗಿ ಬ್ಲೆಸಿಂಗ್‌ ಮುಝರಬಾನಿ ಸೇರ್ಪಡೆಯಾಗಿದ್ದಾರೆ.

IPL 2026: ಮುಸ್ತಾಫಿಝುರ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌!

ಕೆಕೆಆರ್‌ ತಂಡಕ್ಕೆ ಸೇರಿದ ಬ್ಲೆಸಿಂಗ್‌ ಮಝರಬಾನಿ. -

Profile
Ramesh Kote Mar 13, 2026 8:46 PM

ನವದೆಹಲಿ: ವಿವಾದಾತ್ಮಕವಾಗಿ ಮೂರು ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಿಂದ ಹೊರ ನಡೆದಿದ್ದ ಬಾಂಗ್ಲಾದೇಶ ವೇಗದ ಬೌಲರ್‌ ಮುಸ್ತಾಫಿಝುರ್‌ ರೆಹಮಾನ್‌ (Mustafizur Rahman) ಅವರ ಸ್ಥಾನಕ್ಕೆ ಜಿಂಬಾಬ್ವೆ ವೇಗದ ಬ್ಲೆಸಿಂಗ್‌ ಮುಝರಬಾನಿಗೆ (Blessing Muzarabani) ಅವಕಾಶವನ್ನು ನೀಡಲಾಗಿದೆ. 2026ರ ಐಪಿಎಲ್‌ ಟೂರ್ನಿಯು ಮಾರ್ಚ್‌ 28 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

"ಕೊಲ್ಕತಾ ನೈಟ್ ರೈಡರ್ಸ್ ಜಿಂಬಾಬ್ವೆ ವೇಗದ ಬೌಲರ್ ಬ್ಲೆಸಿಂಗ್ ಮುಝರಬಾನಿ ಅವರನ್ನು ಮುಂದಿನ 2026ರ ಸಾಲಿನ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಕ್ಕೆ ಸೇರಿಸಿರುವುದಾಗಿ ಘೋಷಿಸಿದೆ. 6 ಅಡಿ 8 ಇಂಚು ಎತ್ತರದ ಈ ರೈಟ್-ಆರ್ಮ್ ವೇಗದ ಬೌಲರ್, ಟಿ20 ಫಾರ್ಮಾಟ್‌ನಲ್ಲಿ ಜಿಂಬಾಬ್ವೆ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಬೌನ್ಸ್ ಮತ್ತು ನಿರ್ನಾಯಕ ಹಂತಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಬ್ಲೆಸಿಂಗ್‌ ಮುಝರಬಾನಿ ತಂಡಕ್ಕೆ ವಿಶೇಷ ಟಿ20 ಅನುಭವವನ್ನು ತರುತ್ತಾರೆ. ಅವರು 80ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 90ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್‌ಗಳು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ವೇಗ ಮತ್ತು ಸ್ಥಿರತೆಯು ಕೆಕೆಆರ್‌ ತಂಡದ ವೇಗದ ಬೌಲಿಂಗ್ ದಾಳಿಗೆ ಇನ್ನಷ್ಟು ಡೆಪ್ತ್‌ ತಂದುಕೊಡಲಿದೆ," ಎಂದು ಕೋಲ್ಕತಾ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ! ಸ್ಟಾರ್‌ ವೇಗಿ ಡೌಟ್..

ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡ, ಮುಝರಬಾನಿ ಅವರಿಂದ ಸಹಿ ಮಾಡಿಕೊಂಡಿದ್ದರು. ಇದೀಗ ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಲು ಅವಕಾಶ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ ಟೂರ್ನಿಯಿಂದ ಹೊರ ಬಂದಿದ್ದಾರೆ. ವೆಸ್ಟ್ ಇಂಡೀಸ್ ಸ್ಟಾರ್ ಶಮರ್ ಜೋಸೆಫ್ ಅವರ ಸ್ಥಾನಕ್ಕೆ ಇಸ್ಲಾಮಾಬಾದ್‌ ಯುನೈಟೆಡ್‌ ತಂಡದಿಂದ ಹೊರಬಿದ್ದ ಬಳಿಕ ಮುಝರಬಾನಿಗೆ ಅವಕಾಶ ನೀಡಲಾಗಿತ್ತು. ಇದೀಗ ಜಿಂಬಾಬ್ವೆ ವೇಗಿ ಕೂಡ ಹೊರ ಬಂದಿದ್ದಾರೆ.



ಪಾಕಿಸ್ತಾನ ಸೂಪರ್‌ ಲೀಗ್‌ ತೊರೆದು ಐಪಿಎಲ್‌ ಟೂರ್ನಿಯಲ್ಲಿ ಗಾಯದ ಆಟಗಾರನ ಸ್ಥಾನವನ್ನು ತುಂಬಿರುವ ಘಟನೆ ನಡೆದಿರುವುದು ಇದು ಎರಡನೇ ವರ್ಷ. ಕಳೆದ ವರ್ಷ ಪೇಶಾವರ್‌ ಝಾಲ್ಮಿ ತಂಡವನ್ನು ತೊರೆದು ಕಾರ್ಬಿನ್‌ ಬಾಷ್‌ ಅವರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ಆಟಗಾರನನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಒಂದು ವರ್ಷ ಅಮಾನತುಗೊಳಿಸಿತ್ತು.

ಟಿ20 ವಿಶ್ವಕಪ್‌ ಟೂರ್ನಿಯನ್ನು ಬಾಯ್ಕಟ್‌ ಮಾಡಿದ್ದ ಬಾಂಗ್ಲಾ

ಮಸ್ತಾಫಿಝುರ್ ರೆಹಮಾನ್ ಅವರನ್ನು ಕೊಲ್ಕತಾ ನೈಟ್ ರೈಡರ್ಸ್ ತಂಡವು ಹರಾಜಿನಲ್ಲಿ 9.2 ಕೋಟಿ ರು. ಗಳ ಭಾರಿ ಮೊತ್ತಕ್ಕೆ ಖರೀದಿಸಿತ್ತು. ಆದರೆ ರಾಜಕೀಯ ಕಾರಣಗಳಿಂದಾಗಿ ಬಾಂಗ್ಲಾ ವೇಗಿಯನ್ನು ಐಪಿಎಲ್‌ ಒಪ್ಪಂಧದಿಂದ ಕೈ ಬಿಡಬೇಕೆಂದು ಬಿಸಿಸಿಐ, ಕೆಕೆಆರ್‌ಗೆ ಸೂಚನೆ ನೀಡಿತ್ತು. ಇದರಿಂದಾಗಿ ದೊಡ್ಡ ವಿವಾದ ಹುಟ್ಟಿಕೊಂಡಿತ್ತು. ಇದರ ಪರಿಣಾಮವಾಗಿ ಬಾಂಗ್ಲಾದೇಶ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಬಾಯ್ಕಡ್‌ ಮಾಡಿತ್ತು. ಭದ್ರತೆಯ ಕಾರಣ ಭಾರತದ ಬದಲು ಶ್ರೀಲಂಕಕ್ಕೆ ಬಾಂಗ್ಲಾದೇಶ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂದು ಬಿಸಿಬಿ ಪಟ್ಟು ಹಿಡಿದಿತು. ಇದಕ್ಕೆ ಐಸಿಸಿ ಒಪ್ಪದ ಕಾರಣ ಬಾಂಗ್ಲಾದೇಶ ತಂಡ, ಟಿ20 ವಿಶ್ವಕಪ್‌ ಟೂರ್ನಯನ್ನು ಬಾಯ್ಕಟ್‌ ಮಾಡಿತ್ತು.