ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿ20 ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಶಫಾಲಿ ವರ್ಮಾ, ಸ್ಮೃತಿ ಮಂಧಾನ

INDW vs NEDW: ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮತ್ತು ಕನಿಷ್ಠ ಮೂರು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾದರು. ಒಟ್ಟಾರೆಯಾಗಿ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೇಲಿ ಮ್ಯಾಥ್ಯೂಸ್ ಮತ್ತು ಸುನೆ ಲೂಸ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಶಫಾಲಿ, ಸ್ಮೃತಿ ಮಂಧಾನ

shafali and smriti -

Abhilash BC
Abhilash BC Jun 18, 2026 9:48 AM

ಲೀಡ್ಸ್‌, ಜೂ.18: ಬುಧವಾರ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌(Women's T20 World Cup 2026) ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ಸ್‌(INDW vs NEDW) ವಿರುದ್ಧ 95 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದ ಆರಂಭಿಕ ಆಟಗಾರ್ತಿಯರಾ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ವೈಯಕ್ತಿಕ ದಾಖಲೆಯೊಂದನ್ನು ಬರೆದಿದ್ದಾರೆ.

ಬಿರುಸಿನ ಬ್ಯಾಟಿಂಗ್‌ ನಡೆಸಿದ ಮಂಧಾನ 11 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 74 ರನ್‌ ಬಾರಿಸಿದರು. ಇದೇ ವೇಳೆ ಪುರುಷ ಮತ್ತು ಮಹಿಳಾ ಕ್ರಿಕೆಟ್‌ ಟಿ20ಐ ಇತಿಹಾಸದಲ್ಲಿ 600 ಬೌಂಡರಿಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು. ಮಂಧಾನಾ 11 ಬೌಂಡರಿಗಳೊಂದಿಗೆ ಮಹಿಳಾ ಟಿ20ಐಗಳಲ್ಲಿ 604 ಬೌಂಡರಿಗಳನ್ನು ಗಳಿಸಿದ್ದಾರೆ. ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದವರ ಪಟ್ಟಿಯಲ್ಲಿ ಅವರು ಸುಜೀ ಬೇಟ್ಸ್ ಮತ್ತು ಚಾಮರಿ ಅಥಪತ್ತು ಅವರಿಗಿಂತ ಮುಂದಿದ್ದಾರೆ. ಬೇಟ್ಸ್ 183 ಟಿ20ಐ ಪಂದ್ಯಗಳಲ್ಲಿ 176 ಇನ್ನಿಂಗ್ಸ್‌ಗಳಲ್ಲಿ 521 ಬೌಂಡರಿಗಳನ್ನು ಬಾರಿಸಿದ್ದಾರೆ. ಅಥಪತ್ತು 159 ಟಿ20ಐಗಳಲ್ಲಿ 493 ಬೌಂಡರಿಗಳನ್ನು ಬಾರಿಸಿದ್ದಾರೆ.



ಪುರುಷರ ಟಿ20ಐ ಕ್ರಿಕೆಟ್‌ನಲ್ಲಿ, ಅತಿ ಹೆಚ್ಚು ಬೌಂಡರಿ ಗಳಿಸಿದ ದಾಖಲೆ ಬಾಬರ್ ಅಜಮ್ ಅವರ ಹೆಸರಿನಲ್ಲಿದೆ. ಪಾಕಿಸ್ತಾನ ಮಾಜಿ ನಾಯಕ 145 ಟಿ20ಐಗಳಲ್ಲಿ 136 ಇನ್ನಿಂಗ್ಸ್‌ಗಳಲ್ಲಿ 477 ಬೌಂಡರಿಗಳನ್ನು ಬಾರಿಸಿದ್ದಾರೆ. ಅವರ ನಂತರ 163 ಟಿ20ಐ ಪಂದ್ಯಗಳಲ್ಲಿ 449 ಬೌಂಡರಿಗಳನ್ನು ಗಳಿಸಿರುವ ಪಾಲ್ ಸ್ಟಿರ್ಲಿಂಗ್ ಇದ್ದಾರೆ.

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

ಶಫಾಲಿ ದಾಖಲೆ

ಪಂದ್ಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಶಫಾಲಿ, 38 ಎಸೆತಗಳಲ್ಲಿ 55 ರನ್ ಗಳಿಸಿದರು. ಈ ವೇಳೆ 10 ಬೌಂಡರಿಗಳನ್ನು ಬಾರಿಸಿದರು. ಬ್ಯಾಟಿಂಗ್‌ನಲ್ಲಿ ಮಿಂಚಿದ ನಂತರ, ಬೌಲಿಂಗ್‌ನಲ್ಲಿಯೂ ಪ್ರಭಾವ ಬೀರಿದ ಶಫಾಲಿ, 3.2 ಓವರ್‌ಗಳಲ್ಲಿ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮತ್ತು ಕನಿಷ್ಠ ಮೂರು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾದರು. ಒಟ್ಟಾರೆಯಾಗಿ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೇಲಿ ಮ್ಯಾಥ್ಯೂಸ್ ಮತ್ತು ಸುನೆ ಲೂಸ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್‌ ಪಡೆ 17.3 ಓವರ್‌ಗಳಲ್ಲಿ 114 ರನ್‌ಗಳಿಗೆ ಹೋರಾಟ ಮುಗಿಸಿತು.

ಭಾರತ ಪರ ಸ್ಪಿನ್ನರ್‌ ಶ್ರೀಚರಣಿ (19ಕ್ಕೆ 4), ಶಫಾಲಿ ವರ್ಮಾ (20ಕ್ಕೆ 3) ಮತ್ತು ನಂದನಿ ಶರ್ಮಾ (22ಕ್ಕೆ 2) ನೆದರ್ಲೆಂಡ್ಸ್‌ ತಂಡಕ್ಕೆ ಕಡಿವಾಣ ಹಾಕಿದರು. ಸತತ ಎರಡನೇ ಜಯ ಸಾಧಿಸಿದ ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.