ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

FIFA World Cup 2026: ದ್ವಿತೀರ್ಯಾಧದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರೊನಾಲ್ಡೊ ಎರಡು ಗೋಲು ಗಳಿಸುವ ಅವಕಾಶ ಪಡೆದರೂ, ಅದನ್ನು ಗೋಲಾಗಿ ಪರಿವರ್ತಿಸುಲ್ಲಿ ವಿಫಲರಾದರು. ಪೋರ್ಚುಗಲ್ 7 ಬಾರಿ ಗೋಲು ಪ್ರಯತ್ನ ನಡೆಸಿದರೆ , ಕಾಂಗೊ 8 ಬಾರಿ ಗೋಲು ಪ್ರಯತ್ನ ನಡೆಸಿತು. ಅಂತಿಮವಾಗಿ 1-1 ಸಮಬಲ ಸಾಧಿಸಿ ಡ್ರಾಗೊಳಿಸಿತು.

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

Cristiano Ronaldo -

Abhilash BC
Abhilash BC Jun 18, 2026 8:34 AM

ಹೂಸ್ಟನ್‌, ಜೂ.18: ಭಾರೀ ನಿರೀಕ್ಷೆ ಮೂಡಿಸಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಫಿಫಾ ವಿಶ್ವಕಪ್‌(FIFA World Cup 2026) ಟೂರ್ನಿಯ ತಂಡ ಆರಂಭಿಕ ಪಂದ್ಯದಲ್ಲೇ ಆಘಾತ ಅನುಭವಿಸಿದೆ. 'ಕೆ' ಗುಂಪಿನ ಮೊದಲ ಪಂದ್ಯದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ತಂಡದ ವಿರುದ್ಧ 1-1 ಗೋಲುಗಳ ಡ್ರಾ ಗಳಿಸಲಷ್ಟೇ ಶಕ್ತವಾಗಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿತು.

ಪೋರ್ಚುಗಲ್ ಪಂದ್ಯಕ್ಕೂ ಮುನ್ನ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ಗೆಲುವು ಸಾಧಿಸಿತ್ತು. ಸ್ಟಾರ್‌ ಆಟಗಾರರಾದ ಲಿಯೋನಲ್‌ ಮೆಸ್ಸಿ ಹ್ಯಾಟ್ರಿಕ್‌ ಮತ್ತು ಎಂಬಾಪ್ಪೆ ಅವಳಿ ಗೋಲು ಬಾರಿಸಿದ್ದರು. ಹೀಗಾಗಿ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮೇಲೂ ಬೆಟ್ಟದಷ್ಟು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರಿಗೆ ಕನಿಷ್ಠ ಒಂದು ಗೋಲು ಬಾರಿಸಲು ಸಾಧ್ಯವಾಗಲಿಲ್ಲ.

ಎದುರಾಳಿ ಆಟಗಾರನಿಗೆ ತುಳಿದರೂ ರೆಡ್‌ ಕಾರ್ಡ್‌ ಪಡೆಯದ ಮೆಸ್ಸಿ; ವಿವಾದಾತ್ಮಕ ವಿಡಿಯೊ ವೈರಲ್‌

ನಡೆಯದ ಪರಾಕ್ರಮ

ಈ ಬಾರಿ ಟೂರ್ನಿಯಲ್ಲಿ ಪೋರ್ಚುಗಲ್ ಅತ್ಯಂತ ಬಲಿಷ್ಠ ತಂಡ ಎಂದೇ ಗರುತಿಸಿಕೊಂಡಿತ್ತು. ಎಲ್ಲ ವಿಭಾಗದಲ್ಲಿಯೂ ಸ್ಟಾರ್‌ ಆಟಗಾರರೇ ಕಾಣಿಸಿಕೊಂಡಿದ್ದರು. ಆದರೆ ಎರಡನೇ ವಿಶ್ವಕಪ್ ಆಡುತ್ತಿರುವ ಕಾಂಗೊ ವಿರುದ್ಧ ಅವರ ಪರಾಕ್ರಮ ನಡೆಯಲಿಲ್ಲ. ಕಾಂಗೊ ತಂಡ ವಿಶ್ವಕಪ್‌ನಲ್ಲಿ ಮೊದಲ ಗೋಲು ಬಾರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು. ಝೈರೆ ಹೆಸರಿನಲ್ಲಿದ್ದಾಗ 1974ರಲ್ಲಿ ಕಾಂಗೊ ಮೊದಲ ಬಾರಿಗೆ ವಿಶ್ವಕಪ್ ಆಡಿತ್ತು.



ಪಂದ್ಯದುದ್ದಕ್ಕೂ ಪೋರ್ಚುಗಲ್ ಪ್ರಾಬಲ್ಯ ಸ್ಥಾಪಿಸಿದರೂ, ಅವಕಾಶಗಳನ್ನುಗೋಲುಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಯಿತು. ಜಾವೊ ನೆವೇಸ್ ಆರನೇ ನಿಮಿಷದಲ್ಲೇ ಗಳಿಸಿದ ಗೋಲಿನಿಂದ ಪೋರ್ಚುಗಲ್ ಗೋಲಿನ ಖಾತೆ ತೆರೆಯಿತು. ಈ ವೇಳೆ ತಂಡ ಗೋಲಿನ ಸುರಿಮಳೆ ಸುರಿಸಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಕಾಂಗೊದ ರಕ್ಷಣಾ ಪಡೆಯ ಮುಂದೆ ಮಂಡಿಯೂರಿತು.

ದ್ವಿತೀರ್ಯಾಧದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರೊನಾಲ್ಡೊ ಎರಡು ಗೋಲು ಗಳಿಸುವ ಅವಕಾಶ ಪಡೆದರೂ, ಅದನ್ನು ಗೋಲಾಗಿ ಪರಿವರ್ತಿಸುಲ್ಲಿ ವಿಫಲರಾದರು. ಪೋರ್ಚುಗಲ್ 7 ಬಾರಿ ಗೋಲು ಪ್ರಯತ್ನ ನಡೆಸಿದರೆ , ಕಾಂಗೊ 8 ಬಾರಿ ಗೋಲು ಪ್ರಯತ್ನ ನಡೆಸಿತು. ಅಂತಿಮವಾಗಿ 1-1 ಸಮಬಲ ಸಾಧಿಸಿ ಡ್ರಾಗೊಳಿಸಿತು.