ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Smriti Mandhana: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ಸ್ಮೃತಿ ಮಂಧಾನ

ಸ್ಮೃತಿ ಮತ್ತು ಪ್ರತೀಕಾ ವಿಶ್ವಕಪ್‌ನಲ್ಲಿ 100 ರನ್‌ಗಳ ಆರಂಭಿಕ ಜತೆಯಾಟವನ್ನು ದಾಖಲಿಸಿದ ನಾಲ್ಕನೇ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಪಾಲುದಾರಿಕೆಯೊಂದಿಗೆ, ಸ್ಮೃತಿ-ಪ್ರತಿಕಾ ಈಗ ಕ್ಯಾಲೆಂಡರ್ ವರ್ಷದಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು 100 ರನ್ ಗಳಿಸಿದ ಆರಂಭಿಕ ಪಾಲುದಾರಿಕೆಯನ್ನು ಹೊಂದಿದ್ದಾರೆ.

ಆಸೀಸ್‌ ವಿರುದ್ಧದ ಪಂದ್ಯದಲ್ಲಿ ಮಂಧಾನ ನಿರ್ಮಿಸಿದ ದಾಖಲೆ ಪಟ್ಟಿ ಇಲ್ಲಿದೆ

-

Abhilash BC Abhilash BC Oct 12, 2025 8:22 PM

ವಿಶಾಖಪಟ್ಟಣಂ: ಇಲ್ಲಿನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಏಕದಿನ ವಿಶ್ವಕಪ್‌(INDW vs AUSW) ಪಂದ್ಯದಲ್ಲಿ ಭಾರತದ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನ(Smriti Mandhana) ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 5000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆ ಮಾಡಿದ ಅತ್ಯಂತ ಕಿರಿಯ (29 ವರ್ಷ) ಮತ್ತು ಅತ್ಯಂತ ವೇಗವಾಗಿ (112 ಇನ್ನಿಂಗ್ಸ್ ಮತ್ತು 5569 ಎಸೆತಗಳು) ಈ ಸಾಧನೆ ಮಾಡಿದರು.

ಇದು ಮಾತ್ರವಲ್ಲದೆ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ದಾಟುವ ಮೂಲಕ, ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರತೀಕಾ ರಾವಲ್‌ ಜತೆ ಮೊದಲ ವಿಕೆಟ್‌ಗೆ 155 ರನ್‌ಗಳನ್ನು ಸೇರಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಯಾವುದೇ ತಂಡದಿಂದ ಅತ್ಯಧಿಕ ಆರಂಭಿಕ ಪಾಲುದಾರಿಕೆಯನ್ನು ದಾಖಲಿಸಿದರು.

ಇದನ್ನೂ ಓದಿ INDW vs AUSW: ಮಂಧಾನ, ರಾವಲ್‌ ಅರ್ಧಶತಕ; ಆಸೀಸ್‌ಗೆ ಸವಾಲಿನ ಗುರಿ

ಸ್ಮೃತಿ ಮತ್ತು ಪ್ರತೀಕಾ ವಿಶ್ವಕಪ್‌ನಲ್ಲಿ 100 ರನ್‌ಗಳ ಆರಂಭಿಕ ಜತೆಯಾಟವನ್ನು ದಾಖಲಿಸಿದ ನಾಲ್ಕನೇ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಪಾಲುದಾರಿಕೆಯೊಂದಿಗೆ, ಸ್ಮೃತಿ-ಪ್ರತಿಕಾ ಈಗ ಕ್ಯಾಲೆಂಡರ್ ವರ್ಷದಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು 100 ರನ್ ಗಳಿಸಿದ ಆರಂಭಿಕ ಪಾಲುದಾರಿಕೆಯನ್ನು ಹೊಂದಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸತತ ಐದು ಬಾರಿ 50+ ರನ್ ಗಳಿಸಿದ ಏಕೈಕ ಬ್ಯಾಟರ್‌ ಎಂಬ ಹಿರಿಮೆಗೂ ಸ್ಮೃತಿ ಪಾತ್ರರಾಗಿದ್ದಾರೆ.