ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs AUSW: ಮಂಧಾನ, ರಾವಲ್‌ ಅರ್ಧಶತಕ; ಆಸೀಸ್‌ಗೆ ಸವಾಲಿನ ಗುರಿ

ಹರ್ಮನ್‌ಪ್ರೀತ್‌ ಕೌರ್‌(22) ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹರ್ಲಿನ್‌ ಡಿಯೋಲ್‌(38), ರಿಚಾ ಘೋಷ್‌(32) ಮತ್ತು ಜೆಮೀಮಾ ರೋಡಿಗ್ರಸ್‌(33) ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಆಸೀಸ್‌ ಪರ ಅನ್ನಾಬೆಲ್ ಸದರ್ಲ್ಯಾಂಡ್ 5 ವಿಕೆಟ್‌ ಕಿತ್ತರು. ಉಳಿದಂತೆ ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಪಡೆದರು.

ಮಂಧಾನ, ರಾವಲ್‌ ಅರ್ಧಶತಕ; ಆಸೀಸ್‌ಗೆ ಸವಾಲಿನ ಗುರಿ

-

Abhilash BC Abhilash BC Oct 12, 2025 6:29 PM

ವಿಶಾಖಪಟ್ಟಣಂ: ಸ್ಮೃತಿ ಮಂಧಾನ(80) ಮತ್ತು ಪ್ರತೀಕಾ ರಾವಲ್(75) ಅವರ ಆಕರ್ಷಕ ಅರ್ಧಶತಕ ನೆರವಿನಿಂದ ಆಸ್ಟ್ರೇಲಿಯಾ(INDW vs AUSW) ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್‌(Womens World Cup 2025) ಪಂದ್ಯದಲ್ಲಿ ಭಾರತ 330 ರನ್‌ ಗಳಿಸಿ ಸವಾಲೊಡ್ಡಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ, ದಿಟ್ಟ ಬ್ಯಾಟಿಂಗ್‌ ಮೂಲಕ ಉತ್ತಮ ರನ್‌ ಕಲೆ ಹಾಕಿತು. 48.5 ಓವರ್‌ಗಳಲ್ಲಿ 330ರನ್‌ಗೆ ಆಲೌಟ್‌ ಆಯಿತು. ಆಸೀಸ್‌ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಂಧಾನ ಮತ್ತು ರಾವಲ್ 24 ಓವರ್‌ ತನಕ ಬ್ಯಾಟಿಂಗ್‌ ನಡೆಸಿ ಮೊದಲ ವಿಕೆಟ್‌ಗೆ 155 ರನ್‌ ರಾಶಿ ಹಾಕಿದರು. ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ಬರ ಎದುರಿಸಿದ್ದ ಸ್ಮೃತಿ, ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‌ ಬೀಸಿ ಮಂದಹಾಸ ಬೀರಿದರು.

18 ರನ್‌ ಪೂರ್ತಿಗೊಳಿಸುತ್ತಿದ್ದಂತೆ ಮಹಿಳಾ ಏಕದಿನ ಕ್ರಿಕೆಟ್‌ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜತೆಗೆ ಏಕದಿನದಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಿದರು. ಒಟ್ಟು 66 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 80 ರನ್‌ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸತತ ಐದು ಬಾರಿ 50+ ರನ್ ಗಳಿಸಿದ ಏಕೈಕ ಬ್ಯಾಟರ್‌ ಎನಿಸಿದರು.

ಇದನ್ನೂ ಓದಿ IND vs WI 2nd Test: ಫಾಲೋ ಆನ್ ಒತ್ತಡದ ಮಧ್ಯೆ ವಿಂಡೀಸ್‌ ದಿಟ್ಟ ಹೋರಾಟ

ಪ್ರತೀಕಾ ರಾವಲ್ 75 ರನ್‌ ಬಾರಿಸಿದರು. ಹರ್ಮನ್‌ಪ್ರೀತ್‌ ಕೌರ್‌(22) ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹರ್ಲಿನ್‌ ಡಿಯೋಲ್‌(38), ರಿಚಾ ಘೋಷ್‌(32) ಮತ್ತು ಜೆಮೀಮಾ ರೋಡಿಗ್ರಸ್‌(33) ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಆಸೀಸ್‌ ಪರ ಅನ್ನಾಬೆಲ್ ಸದರ್ಲ್ಯಾಂಡ್ 5 ವಿಕೆಟ್‌ ಕಿತ್ತರು. ಉಳಿದಂತೆ ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಪಡೆದರು.