ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸನ್‌ರೈಸರ್ಸ್‌ ವಿರುದ್ಧದ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಆರ್‌ಸಿಬಿಗೆ ನಷ್ಟವೇ?

IPL 2026: ಈ ಋತುವಿನಲ್ಲಿ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಹಲವಾರು ಹೈ-ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಆಡಿದ ಕೊನೆಯ ಪಂದ್ಯದಲ್ಲಿ, ಹೈದರಾಬಾದ್‌ ತಂಡ 235/4 ಬಾರಿಸಿತ್ತು. ಹೀಗಾಗಿ ಈ ಪಿಚ್ ಮತ್ತೊಮ್ಮೆ ಸಾಕಷ್ಟು ರನ್‌ಗಳನ್ನು ನೀಡುವ ನಿರೀಕ್ಷೆಯಿದೆ.

ಇಂದಿನ ಆರ್‌ಸಿಬಿ-ಸನ್‌ರೈಸರ್ಸ್‌ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

virat kohli rcb -

Abhilash BC
Abhilash BC May 22, 2026 10:14 AM

ಹೈದರಾಬಾದ್‌, ಮೇ 22: ಸನ್‌ರೈಸರ್ಸ್ ಹೈದರಾಬಾದ್(SRH vs RCB) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು(ಶುಕ್ರವಾರ) ನಡೆಯುವ ಐಪಿಎಲ್‌(IPL 2026) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈಗಾಗಲೇ ಪ್ಲೇಆಫ್‌ಗೆ ತಲುಪಿವೆ ಆದರೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಆದರೆ ಪಂದ್ಯಕ್ಕೆ ಭಾರೀ ಮಳೆ ಮುನ್ಸೂಚನೆ ಇದೆ.

ಪಂದ್ಯದ ಸಮಯದಲ್ಲಿ ಶೇ.45 ರಷ್ಟು ಮಳೆಯ ಭೀತಿ ಎದುರಾಗಿದೆ. ದಕ್ಷಿಣ ಭಾರತದ ಕೇರಳ, ಕರ್ನಾಟಕದಲ್ಲಿ ಈಗಾಗಲೇ ಮಳೆ ಆರಂಭಗೊಂಡಿದೆ. ಈ ಬಾರಿ ಮುಂಗಾರು ಮೇ 26ರ ಸುಮಾರಿಗೆ ಕೇರಳವನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನವೇ ಮಳೆ ಆರಂಭಗೊಂಡಿದೆ. ಹೈದರಾಬಾದ್‌ನ ಕೆಲ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ.

ಮಳೆ ಬಂದರೆ ಆರ್‌ಸಿಬಿಗೆ ಲಾಭ

ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೂ ಆರ್‌ಸಿಬಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಕಾರಣ ತಂಡ 18 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ಪಂದ್ಯ ರದ್ದಾದರೆ ಸಿಗುವ ಒಂದು ಅಂಕ ಸೇರಿದರೆ ಆರ್‌ಸಿಬಿ ಅಗ್ರಸ್ಥಾನದಲ್ಲೇ ಉಳಿಯಲಿದೆ. ಜತೆಗೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯಲಿದೆ. ಆದರೆ ಕ್ವಾಲಿಫೈಯರ್ 1ಕ್ಕೆ ಪ್ರವೇಶ ಪಡೆಯಬೇಕಿದ್ದರೆ, ಸನ್‌ರೈಸರ್ಸ್‌ಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಅದು ಕೂಡ ದೊಡ್ಡ ಅಂತರದ ಗೆಲುವು.

ಬ್ಯಾಟಿಂಗ್‌ ಸ್ನೇಹಿ ಪಿಚ್‌

ಈ ಋತುವಿನಲ್ಲಿ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಹಲವಾರು ಹೈ-ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಆಡಿದ ಕೊನೆಯ ಪಂದ್ಯದಲ್ಲಿ, ಹೈದರಾಬಾದ್‌ ತಂಡ 235/4 ಬಾರಿಸಿತ್ತು. ಹೀಗಾಗಿ ಈ ಪಿಚ್ ಮತ್ತೊಮ್ಮೆ ಸಾಕಷ್ಟು ರನ್‌ಗಳನ್ನು ನೀಡುವ ನಿರೀಕ್ಷೆಯಿದೆ.

ಪಾಟೀದಾರ್ ನಾಯಕತ್ವದ ಬೆಂಗಳೂರು ತಂಡವು ಎಲ್ಲ ವಿಭಾಗಗಳಲ್ಲಿಯೂ ಸಮತೋಲನದಿಂದ ಕೂಡಿದೆ. ಸ್ಫೋಟಕ ಶೈಲಿಯ ಬ್ಯಾಟರ್‌ಗಳು, ಪರಿಣಾಮಕಾರಿ ದಾಳಿ ಮಾಡುವ ಬೌಲರ್‌ಗಳು ಮತ್ತು ಫೀಲ್ಡಿಂಗ್‌ನಲ್ಲಿಯೂ ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ಶಿಸ್ತುಬದ್ಧತೆಯ ಆಟಗಾರರು ತಂಡದಲ್ಲಿದ್ದಾರೆ. ಆದರೂ ಸನ್‌ರೈಸರ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಗೆ ಆರ್‌ಸಿಬಿ ಬೌಲಿಂಗ್ ವಿಭಾಗವು ಕಠಿಣ ಸವಾಲೊಡ್ಡುವ ಸಾಧ್ಯತೆಗಳು ಹೆಚ್ಚು. ಆತಿಥೇಯ ತಂಡದ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕುವುದು ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲುಗಳು.

IPL 2026: ಸೋಲಿನ ಮಧ್ಯೆ 24 ಲಕ್ಷ ದಂಡಕ್ಕೆ ಗುರಿಯಾದ ಋತುರಾಜ್‌ ಗಾಯಕ್ವಾಡ್‌

ಸಂಭಾವ್ಯ ತಂಡಗಳು

ಸನ್‌ರೈಸರ್ಸ್ ಹೈದರಾಬಾದ್ (SRH): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ.), ಹೆನ್ರಿಚ್ ಕ್ಲಾಸೆನ್, ಸಲಿಲ್ ಅರೋರಾ, ಸ್ಮರನ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

ಇಂಪ್ಯಾಕ್ಟ್ ಪ್ಲೇಯರ್: ಟ್ರಾವಿಸ್ ಹೆಡ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಡಫಿ.