ಹ್ಯಾಟ್ರಿಕ್ ಸಿಕ್ಸರ್ ಕಂಡು ಮೊಹಮ್ಮದ್ ಸಿರಾಜ್ ಬ್ಯಾಟ್ ಪರಿಶೀಲಿಸಿದ ಶ್ರೀಲಂಕಾ ಆಟಗಾರರು
Mohammed Siraj: ಕೊನೆಯ 3 ಓವರ್ ಬಾಕಿ ಇದ್ದಾಗ ಭಾರತಕ್ಕೆ ಗೆಲ್ಲಲು 28 ರನ್ ಬೇಕಿತ್ತು. ಈ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮೊಹಮದ್ ಸಿರಾಜ್ 15 ಎಸೆತದಲ್ಲಿ 4 ಸಿಕ್ಸರ್, 1 ಬೌಂಡರಿ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕೇಶರ ನುವಂಥ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು.
Mohammed Siraj -
ಕೊಲಂಬೊ, ಆ.11: ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನ ಉತ್ತಮ ಬ್ಯಾಟಿಂಗ್ ಅಭ್ಯಾಸ ನಡೆಸಿದ ಭಾರತ 207 ರನ್‌ಗಳನ್ನು 45 ಓವರಲ್ಲಿ ಬೆನ್ನತ್ತಿ 6 ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಮಿಂಚಿದರು. ಪಂದ್ಯದ ಬಳಿಕ ಲಂಕಾ ಆಟಗಾರರು ಸಿರಾಜ್ ಬ್ಯಾಟ್ ಪರೀಶೀಲಿಸಿದ ಘಟನೆಯೂ ನಡೆಯಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲ ದಿನ ಲಂಕಾ ಇಲೆವೆನ್ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 363 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 2ನೇ ದಿನ ಭಾರತ, ಪಡಿಕ್ಕಲ್‌ರ ಶತಕದ ನೆರವಿನಿಂದ 6 ವಿಕೆಟ್‌ಗೆ 357 ರನ್ ಗಳಿಸಿತ್ತು. ಭಾನುವಾರ ಎರಡೂ ತಂಡಗಳಿಗೆ ತಲಾ 45 ಓವರ್ ಬ್ಯಾಟಿಂಗ್ ದೊರೆಯಿತು.
DSP GOES 6️⃣ 6️⃣ 6️⃣! 🔥
— Sony Sports Network (@SonySportsNetwk) August 9, 2026
Mohammed Siraj signs off the warm-up game with three sixes on the trot! 💥 #SonySportsNetwork #SonyLIV #BeautifulGameofTestCricket pic.twitter.com/poApnwLVwu
6 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ, 45 ಓವರಲ್ಲಿ 6 ವಿಕೆಟ್‌ಗೆ 200 ರನ್ ಗಳಿಸಿತು. ಗೆಲ್ಲಲು 207 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಜೈಸ್ವಾಲ್ ಹಾಗೂ ಗಿಲ್ ಉತ್ತಮ ಆರಂಭ ಒದಗಿಸಿದರು.
ಮೊದಲ ಟೆಸ್ಟ್‌ಗೆ ಶುಭಮನ್ ಗಿಲ್ ಸಿದ್ಧ; ಸ್ಪಿನ್ ಕೋಚ್ ಸಾಯಿರಾಜ್ ಬಹುತುಲೆ
ಕೊನೆಯ 3 ಓವರ್ ಬಾಕಿ ಇದ್ದಾಗ ಭಾರತಕ್ಕೆ ಗೆಲ್ಲಲು 28 ರನ್ ಬೇಕಿತ್ತು. ಈ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮೊಹಮದ್ ಸಿರಾಜ್ 15 ಎಸೆತದಲ್ಲಿ 4 ಸಿಕ್ಸರ್, 1 ಬೌಂಡರಿ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕೇಶರ ನುವಂಥ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಪಂದ್ಯದ ಬಳಿಕ ಲಂಕಾ ಆಟಗಾರರು ಸಿರಾಜ್ ಬ್ಯಾಟ್ ಪರಿಶೀಲಿಸಿದರು.
Sri Lankan players checking Mohammed Siraj’s bat after his 3 sixes 🔥🔥 pic.twitter.com/mifkQHUQZc
— MSDian™ (@Kushal_MSD) August 9, 2026
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಶ್ರೀಲಂಕಾ ಇಲೆವನ್: 90 ಓವರ್‌ಗಳಲ್ಲಿ 8ಕ್ಕೆ363 ಡಿಕ್ಲೇರ್ಡ್. ಭಾರತ: 90 ಓವರ್‌ಗಳಲ್ಲಿ 6ಕ್ಕೆ357 (ಕೆ.ಎಲ್. ರಾಹುಲ್ 40, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 142, ರವೀಂದ್ರ ಜಡೇಜಾ 63, ಮಾನವ ಸುತಾರ್ 41, ಸಾರಾಂಶ್ ಜೈನ್ 22, ಗುರ್ನೂರ್ ಬ್ರಾರ್ ಬ್ಯಾಟಿಂಗ್ 36, ರಮೇಶ್ ಮೆಂಡಿಸ್ 77ಕ್ಕೆ2, ಅಸಾಂಕಾ ಮನೋಜ್ 32ಕ್ಕೆ 2)
ದ್ವಿತೀಯ ಇನಿಂಗ್ಸ್: ಶ್ರೀಲಂಕಾ ಇಲೆವನ್: 6ಕ್ಕೆ 200 ಡಿಕ್ಲೇರ್(ನಿಶಾನ್ ಮದುಷ್ಕಾ 63*, ನಿಪುನ್ ಧನಂಜಯ 46, ಗುರ್ನೂರ್ ಬ್ರಾರ್ 37ಕ್ಕೆ 2, ರವೀಂದ್ರ ಜಡೇಜಾ 33 ಕ್ಕೆ 2). ಭಾರತ; 4ಕ್ಕೆ 214 ರನ್(ಜೈಸ್ವಾಲ್ 61, ಶುಭಮನ್ ಗಿಲ್ 44, ರಿಷಭ್ ಪಂತ್ 28, ಕೇಶರ ನುವಂಥ 57ಕ್ಕೆ 2).