15 ವರ್ಷದ ಸೂರ್ಯವಂಶಿ ಭೇಟಿಗೆ ಒಂದು ಗಂಟೆ ಕಾದ ಲಂಕಾದ ದಿಗ್ಗಜ ನಾಯಕ
Vaibhav Sooryavanshi: ಸೂರ್ಯವಂಶಿ, 79 ವರ್ಷದ ತೆನ್ನೆಕೂನ್ ಅವರನ್ನು ನೋಡಿದ ತಕ್ಷಣ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ಸೂರ್ಯವಂಶಿಯನ್ನು ಅಪ್ಪಿಕೊಂಡ ತೆನ್ನೆಕೂನ್ ಬೆನ್ನು ತಟ್ಟಿ ಅಭಿನಂದಿಸಿದರು. ಭೇಟಿಯ ಬಳಿಕ ಸ್ಟಾರ್‌ಸ್ಪೋರ್ಟ್ಸ್ ಜತೆ ಮಾತನಾಡಿದ ತೆನ್ನೆಕೂನ್, "ನೀವು ನಿಮ್ಮ ಆಟದ ಮೇಲೆ ಗಮನಹರಿಸಿ ಮತ್ತು ಹೊರಗಿನ ಮಾತುಗಳಿಗೆ ಕಿವಿಗೊಡಬೇಡಿ" ಎಂದು ಸಲಹೆ ನೀಡಿದ್ದಾಗಿ ತಿಳಿಸಿದರು.
Anura Tennekoon -
ಕೊಲಂಬೊ, ಜೂ.16: ವಿಶ್ವ ಕ್ರಿಕೆಟ್‌ನ ಆಕರ್ಷಣೆಯ ಕೇಂದ್ರವಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi)ಯನ್ನು ಶ್ರೀಲಂಕಾದ ದಿಗ್ಗಜ, ತಂಡದ ಮೊದಲ ನಾಯಕ ಅನುರಾ ತೆನ್ನೆಕೂನ್(Anura Tennekoon) ಭೇಟಿಯಾಗಿ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಆದರೆ ಸೂರ್ಯವಂಶಿಯ ಭೇಟಿಗಾಗಿ ಅವರು ಸ್ಟೇಡಿಯಂನ ಹೊರಗೆ ಒಂದು ಗಂಟೆ ಕಾಯಬೇಕಾಯಿತು.
ಸೋಮವಾರ ನಡೆದಿದ್ದ ಶ್ರೀಲಂಕಾ 'ಎ' ವಿರುದ್ಧದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್‌ನಲ್ಲಿ ಸೋಲು ಕಂಡಿತ್ತು. ಪಂದ್ಯದಲ್ಲಿ ಲಂಕಾದ ಬೌಲರ್ ಮಥುಲನ್ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆದಿತ್ತು.
ಸೂರ್ಯವಂಶಿ, 79 ವರ್ಷದ ತೆನ್ನೆಕೂನ್ ಅವರನ್ನು ನೋಡಿದ ತಕ್ಷಣ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ಸೂರ್ಯವಂಶಿಯನ್ನು ಅಪ್ಪಿಕೊಂಡ ತೆನ್ನೆಕೂನ್ ಬೆನ್ನು ತಟ್ಟಿ ಅಭಿನಂದಿಸಿದರು. ಭೇಟಿಯ ಬಳಿಕ ಸ್ಟಾರ್‌ಸ್ಪೋರ್ಟ್ಸ್ ಜತೆ ಮಾತನಾಡಿದ ತೆನ್ನೆಕೂನ್, "ನೀವು ನಿಮ್ಮ ಆಟದ ಮೇಲೆ ಗಮನಹರಿಸಿ ಮತ್ತು ಹೊರಗಿನ ಮಾತುಗಳಿಗೆ ಕಿವಿಗೊಡಬೇಡಿ" ಎಂದು ಸಲಹೆ ನೀಡಿದ್ದಾಗಿ ತಿಳಿಸಿದರು.
'ಪಂದ್ಯ ಮುಗಿಯಿತು, ಈಗ ನೀನು...'; ವೈಭವ್ ಸೂರ್ಯವಂಶಿ ಕೋಪಕ್ಕೆ ಇದುವೇ ಕಾರಣ!
"ಐಪಿಎಲ್ ಸಮಯದಲ್ಲಿ ಸೂರ್ಯವಂಶಿ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯ ಕಂಡು ನಾನು ವಿಶೇಷವಾಗಿ ಪ್ರಭಾವಿತನಾದೆ. ಅವರು ಬ್ಯಾಟಿಂಗ್ ಮಾಡುವ ರೀತಿಯಲ್ಲಿ ಆ ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಹೊಡೆಯುವುದು ನಂಬಲಾಗದ ಸಂಗತಿ. ಅವರು ಇದೇ ರೀತಿ ಮುಂದುವರಿಯುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ತೆನ್ನೆಕೂನ್ ಹೇಳಿದರು.
Vaibhav Sooryavanshi touching Sri Lankan first ODI captain’s feet. ❤️ pic.twitter.com/oRIgusAgjn
— Mufaddal Vohra (@mufaddal_vohra) June 16, 2026
ಪಂದ್ಯ ಬಗ್ಗೆ ಹೇಳುವುದಾದರೆ ಶ್ರೀಲಂಕಾ ಗೆಲುವಿಗೆ ಅಂತಿಮ ಓವರ್‌ನಲ್ಲಿ ಐದು ರನ್‌ಗಳು ಬೇಕಾಗಿದ್ದವು, ಆದರೆ ಅರ್ಷದ್ ಖಾನ್ ಕೇವಲ ನಾಲ್ಕು ರನ್‌ಗಳನ್ನು ಬಿಟ್ಟುಕೊಟ್ಟರು. ಭಾರತ ಎ ತಂಡವು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ ಪಂದ್ಯವು ಸೂಪರ್ ಓವರ್‌ಗೆ ಹೋಯಿತು, ಅದರಲ್ಲಿ ಶ್ರೀಲಂಕಾ ಎ ತಂಡ ಗೆದ್ದಿತು. ಸೂಪರ್ ಓವರ್‌ನಲ್ಲಿ ಸೂರ್ಯವಂಶಿ ಮೊದಲ ಎಸೆತ ಎದುರಿಸದಿದ್ದುದು ಕೂಡ ಆಶ್ಚರ್ಯಕ್ಕೆ ಕಾರಣವಾಯಿತು.
ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡವು ಇದುವರೆಗೆ ಒಂದು ಪಂದ್ಯವನ್ನು ಗೆದ್ದು ಎರಡು ಪಂದ್ಯಗಳನ್ನು ಸೋತಿದೆ. ಜೂನ್ 17, ಬುಧವಾರ ನಡೆಯಲಿರುವ ಅಫ್ಘಾನಿಸ್ತಾನ ಎ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಗೆದರೂ ಅವರಿಗೆ ಫೈನಲ್‌ನಲ್ಲಿ ಸ್ಥಾನ ಖಾತರಿಪಡಿಸುವುದಿಲ್ಲ.