ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunil Joshi: ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌; ಭಾರತ ಎ ತಂಡಕ್ಕೆ ಕನ್ನಡಿಗ ಜೋಶಿ ಕೋಚ್

ಸುನಿಲ್ ಜೋಶಿ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಅಪೂರ್ವ ದೇಸಾಯಿ ಮತ್ತು ಪಲ್ಲವ್ ವೋಹ್ರಾ ಫೀಲ್ಡಿಂಗ್ ಕೋಚ್ ಇರಲಿದ್ದಾರೆ. ಸದ್ಯ, ಭಾರತ ಎ ತಂಡದ ತರಬೇತುದಾರರಾಗಿರುವ ಹೃಷಿಕೇಶ್ ಕಾನಿಟ್ಕರ್, ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡದ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಿರತರಾಗಿರುತ್ತಾರೆ.

ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

ಭಾರತ ಎ ತಂಡಕ್ಕೆ ಸುನಿಲ್ ಜೋಶಿ ಕೋಚ್ -

Abhilash BC Abhilash BC Nov 5, 2025 11:31 AM

ಬೆಂಗಳೂರು: ಭಾರತ ತಂಡದ ಮಾಜಿ ಸ್ಪಿನ್ನರ್, ಕನ್ನಡಿಗ ಸುನಿಲ್ ಜೋಶಿ(Sunil Joshi) ಅವರು ನವೆಂಬರ್ 14 ರಿಂದ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌(Asia Cup Rising Stars)ನಲ್ಲಿ ಭಾರತ ಎ ತಂಡಕ್ಕೆ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅವರು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನ ಸ್ಪಿನ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗೆ ಬಿಸಿಸಿಐ ಸಿಒಇ ಸೇರಿರುವ ಜೋಶಿ, ಆಸ್ಟ್ರೇಲಿಯಾ ಎ ವಿರುದ್ಧದ ಟೂರ್ನಿಯಲ್ಲೂ ಭಾರತ ಎ ತಂಡಕ್ಕೆ ಕೋಚ್ ಜವಾಬ್ದಾರಿ ನಿಭಾಯಿಸಿದ್ದರು.

ಸುನಿಲ್ ಜೋಶಿ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಅಪೂರ್ವ ದೇಸಾಯಿ ಮತ್ತು ಪಲ್ಲವ್ ವೋಹ್ರಾ ಫೀಲ್ಡಿಂಗ್ ಕೋಚ್ ಇರಲಿದ್ದಾರೆ. ಸದ್ಯ, ಭಾರತ ಎ ತಂಡದ ತರಬೇತುದಾರರಾಗಿರುವ ಹೃಷಿಕೇಶ್ ಕಾನಿಟ್ಕರ್, ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡದ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಿರತರಾಗಿರುತ್ತಾರೆ.

ಜಿತೇಶ್‌ ಶರ್ಮ ನಾಯಕತ್ವದ ತಂಡದಲ್ಲಿ ಐಪಿಎಲ್‌ನಲ್ಲಿ ಮಿಂಚಿರುವ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ನಮನ್ ಧೀರ್, ನೆಹಾಲ್ ವಧೇರಾ ಮತ್ತು ರಮಣದೀಪ್ ಸಿಂಗ್ ರಂತಹ ತಾರಾ ಆಟಗಾರರು ಕಾಣಿಸಿಕೊಂಡಿದ್ದಾರೆ.

8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಎ ತಂಡಗಳ ಜತೆಗೆ ಯುಎಇ, ಓಮನ್​ ತಂಡಗಳಿದ್ದರೆ, ಎ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಎ ತಂಡಗಳ ಜತೆಗೆ ಹಾಂಕಾಂಗ್​ ತಂಡ ಸ್ಥಾನ ಪಡೆದಿದೆ. ಭಾರತ-ಪಾಕಿಸ್ತಾನ ಎ ತಂಡಗಳು ನವೆಂಬರ್​ 16ಕ್ಕೆ ಮುಖಾಮುಖಿಯಾಗಲಿವೆ.

ಇದನ್ನೂ ಓದಿ ಚೊಚ್ಚಲ ಮಹಿಳಾ ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!

ಭಾರತ ತನ್ನ ಅಭಿಯಾನವನ್ನು ನ.14ಕ್ಕೆ ಯುಎಇ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ನ.18ರ ಕೊನೇ ಲೀಗ್​ ಪಂದ್ಯದಲ್ಲಿ ಓಮನ್​ ವಿರುದ್ಧ ಆಡಲಿದೆ. ಗುಂಪಿನ ಅಗ್ರ 2 ತಂಡಗಳು ನ.21ರಂದು ನಡೆಯಲಿರುವ ಸೆಮಿಫೈನಲ್​ ಪ್ರವೇಶಿಸಲಿವೆ. ನ.23ರಂದು ಫೈನಲ್​ ನಡೆಯಲಿದೆ.

ಭಾರತ ತಂಡ

ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್, ಸೂರ್ಯಾಂಶ್ ಶೆಡ್ಜ್, ಜಿತೇಶ್ ಶರ್ಮಾ (ನಾಯಕ), ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಕ್, ಯುದ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ಸುಯಾಶ್ ಶರ್ಮಾ.

ಸ್ಟ್ಯಾಂಡ್-ಬೈ: ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ, ಶೇಕ್ ರಶೀದ್.

ಜೋಶಿ ಸಾಧನೆ...

ಆಫ್‌ಸ್ಪಿನ್ನರ್ ಜೋಶಿ ಕ್ರಿಕೆಟ್ ಅಂಗಳದಲ್ಲಿ ಮಾಡಿದ ಕೆಲವು ಸಾಧನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಕರ್ನಾಟಕ ತಂಡವು 1995-96, 97-98 ಹಾಗೂ 99-2000ರಲ್ಲಿ ಶ್ರೇಷ್ಠವಾಗಿ ಹೊರಹೊಮ್ಮಲು ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮೂಲಕವೂ ಮಹತ್ವದ ಕೊಡುಗೆ ನೀಡಿದ್ದರು.

ರಣಜಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ (479 ವಿಕೆಟ್).

ಒಂದೇ ರಣಜಿ ಋತುವಿನಲ್ಲಿ 53 ವಿಕೆಟ್ ಪಡೆಯುವ ಜೊತೆಗೆ 529 ರನ್ ಗಳಿಸಿದ ವಿಶಿಷ್ಟ ಸಾಧನೆ ಶ್ರೇಯ.

ರಣಜಿ ಟ್ರೋಫಿಯಲ್ಲಿ ಒಟ್ಟಾರೆ 4000 ರನ್ ಗಳಿಸಿದ್ದಲ್ಲದೇ 400 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.

ಕರ್ನಾಟಕ ಪರ ಅತಿ ಹೆಚ್ಚು ರಣಜಿ ಪಂದ್ಯಗಳನ್ನು ಆಡಿದ ಕ್ರಿಕೆಟಿಗ (117 ಪಂದ್ಯ).

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಅಧಿಕ ವಿಕೆಟ್ ಪಡೆದ ಬೌಲರ್.

ನೈರೋಬಿಯಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ಓವರುಗಳಲ್ಲಿ 6 ಮೇಡಿನ್ ಮಾಡಿ ಕೇವಲ ಆರು ರನ್ ನೀಡಿ ಐದು ವಿಕೆಟ್ ಕಬಳಿಸಿದ್ದರು.

ಭಾರತ ಹಾಗೂ ಬಾಂಗ್ಲಾದೇಶ ನಡುವೆ 2000ದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸರಣಿ ಶ್ರೇಷ್ಠ.