Harmanpreet Kaur: ವಿಶ್ವಕಪ್ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ ಕೌರ್
Harmanpreet Kaur World Cup tattoo: ವಿಶ್ವಕಪ್‌ಅನ್ನು ಮಗ್ಗುಲಲ್ಲೇ ಇಟ್ಟುಕೊಂಡು ಭಾನುವಾರ ನಿದ್ರಿಸಿದ ಫೋಟೊವೊಂದನ್ನು ಹಂಚಿಕೊಂಡಿದ್ದ ಕೌರ್, ‘ಕ್ರಿಕೆಟ್ ಎಂಬುದು ಜೆಂಟಲ್‌ಮನ್‌ಗಳಿಗಷ್ಟೇ ಸೀಮಿತವಾದದ್ದಲ್ಲ, ಅದು ಪ್ರತಿಯೊಬ್ಬರ ಆಟ’ ಎಂಬ ಬರಹವುಳ್ಳ ಅವರ ಟೀ-ಶರ್ಟ್ ಭಾರಿ ವೈರಲ್ ಆಗಿತ್ತು. ಐತಿಹಾಸಿಕ ಟ್ರೋಫಿ ಗೆಲುವಿನ ಬಳಿಕ ಹರ್ಮನ್‌ಪ್ರೀತ್ ಮೈದಾನದಲ್ಲೇ ಕೋಚ್ ಅಮೋಲ್ ಮಜುಂದಾರ್ ಅವರ ಕಾಲಿಗೆ ಬಿದ್ದರು. ಇದರ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ವಿಶ್ವಕಪ್ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ -
Abhilash BC
Nov 5, 2025 2:09 PM
ಮುಂಬಯಿ: ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ಅವರು ಚೊಚ್ಚಲ ವಿಶ್ವಕಪ್ ಗೆಲುವಿನ ಸವಿ ನೆನಪಿಗಾಗಿ ವಿಶ್ವಕಪ್ ಟ್ರೋಫಿಯ ಟ್ಯಾಟೂ(Harmanpreet Kaur World Cup tattoo) ಹಾಕಿಸಿಕೊಂಡಿದ್ದರೆ. ಈ ಫೋಟೊವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟ್ಯಾಟೂ ಫೋಟೊ ಹಂಚಿಕೊಂಡಿರುವ ಹರ್ಮನ್‌ಪ್ರೀತ್ ಕೌರ್, "ಮೊದಲ ದಿನದಿಂದ ನಿಮಗಾಗಿ ಕಾಯುತ್ತಿದ್ದೆ, ಮತ್ತು ಈಗ ನಾನು ಪ್ರತಿದಿನ ಬೆಳಿಗ್ಗೆ ನಿಮ್ಮನ್ನು ಭೇಟಿಯಾಗುತ್ತೇನೆ ಮತ್ತು ಕೃತಜ್ಞರಾಗಿರುತ್ತೇನೆ" ಎಂದು ಅವರು ಬರೆದಿದ್ದಾರೆ.
ಭಾನುವಾರ ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟದಲ್ಲಿ 298 ರನ್ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್ ಅಮೋಘ ಆಟದ ಹೊರತಾಗಿಯೂ ದ.ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ವಿಶ್ವಕಪ್‌ಅನ್ನು ಮಗ್ಗುಲಲ್ಲೇ ಇಟ್ಟುಕೊಂಡು ಭಾನುವಾರ ನಿದ್ರಿಸಿದ ಫೋಟೊವೊಂದನ್ನು ಹಂಚಿಕೊಂಡಿದ್ದ ಕೌರ್, ‘ಕ್ರಿಕೆಟ್ ಎಂಬುದು ಜೆಂಟಲ್‌ಮನ್‌ಗಳಿಗಷ್ಟೇ ಸೀಮಿತವಾದದ್ದಲ್ಲ, ಅದು ಪ್ರತಿಯೊಬ್ಬರ ಆಟ’ ಎಂಬ ಬರಹವುಳ್ಳ ಅವರ ಟೀ-ಶರ್ಟ್ ಭಾರಿ ವೈರಲ್ ಆಗಿತ್ತು. ಐತಿಹಾಸಿಕ ಟ್ರೋಫಿ ಗೆಲುವಿನ ಬಳಿಕ ಹರ್ಮನ್‌ಪ್ರೀತ್ ಮೈದಾನದಲ್ಲೇ ಕೋಚ್ ಅಮೋಲ್ ಮಜುಂದಾರ್ ಅವರ ಕಾಲಿಗೆ ಬಿದ್ದರು. ಇದರ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಏಕದಿನ ವಿಶ್ವಕಪ್‌ನಲ್ಲಿ 4, ಟಿ20 ವಿಶ್ವಕಪ್‌ನಲ್ಲಿ 8 ಬಾರಿ ಭಾರತವನ್ನು ಪ್ರತಿನಿಧಿಸಿದ್ದರೂ ಹರ್ಮನ್‌ಗೆ ಟ್ರೋಫಿ ಸಿಕ್ಕಿರಲಿಲ್ಲ. 13ನೇ ಪ್ರಯತ್ನದಲ್ಲಿ, ತಮ್ಮ 36ನೇ ವರ್ಷದಲ್ಲಿ ಕಪ್ ಗೆದ್ದಿದ್ದಾರೆ ಪಂಜಾಬ್‌ನ ಸ್ಟೈಲಿಶ್ ಬ್ಯಾಟರ್. ಈ ಮೂಲಕ ತಮ್ಮ ನಾಯಕತ್ವ, ಆಟವನ್ನು ಪ್ರಶ್ನಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅಂದಹಾಗೆ ಹರ್ಮನ್ ಭಾರತದ ಪರ 161 ಏಕದಿನ, 182 ಟಿ20, 6 ಟೆಸ್ಟ್ ಆಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ದಾಖಲೆ
ಮಹಿಳಾ ಏಕದಿನ ವಿಶ್ವಕಪ್‌ಗಳ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುರಿದು ಹಾಕಿದ್ದಾರೆ. ಈಗ ಮಹಿಳಾ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಕೌರ್ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.