ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್ ಗಳಿಸುತ್ತಿಲ್ಲ ಅಷ್ಟೇ; ಟೀಕೆಗೆ ಸೂರ್ಯಕುಮಾರ್ ಸಮರ್ಥನೆ
Suryakumar Yadav: ಸೂರ್ಯಕುಮಾರ್ ಅವರ ಕಳಪೆ ಫಾರ್ಮ್ ನಡುವೆಯೂ, ಅವರು ಶ್ರೀಲಂಕಾದಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಟಿ20ಐ ಸ್ವರೂಪದಲ್ಲಿ ಟೀಮ್ ಇಂಡಿಯಾದ ಗೆಲುವಿನ ಸರಾಸರಿ ಹೆಚ್ಚಾಗಿದೆ. ಏಷ್ಯಾಕಪ್ ಸೇರಿದಂತೆ ಅವರ ನಾಯಕತ್ವದಲ್ಲಿ ಈವರೆಗೆ ಆಡಿರುವ ಎಲ್ಲಾ ಸರಣಿಗಳನ್ನು ಭಾರತ ತಂಡ ಗೆದ್ದುಕೊಂಡಿದೆ.
Suryakumar Yadav -
ಧರ್ಮಶಾಲಾ, ಡಿ.15: ಬ್ಯಾಟಿಂಗ್ ಪ್ರದರ್ಶನ ಕುಸಿತದ ಬಗ್ಗೆ ಪ್ರಶ್ನೆಗಳು ಜೋರಾಗಿ ಕೇಳಿಬರುತ್ತಿದ್ದಂತೆ ಸೂರ್ಯಕುಮಾರ್ ಯಾದವ್(Suryakumar Yadav) ಇದನ್ನು ಸಮರ್ಥಿಸಿಕೊಂಡಿದ್ದಾರೆ. ರನ್ ಗಳಿಸುತ್ತಿಲ್ಲ ನಿಜ, ಆದರೆ ಫಾರ್ಮ್‌ನಿಂದ ಹೊರಗುಳಿದಿಲ್ಲ ಎಂದು ಅವರು ಹೇಳಿದರು.
ಭಾನುವಾರ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್,"ವಿಷಯವೇನೆಂದರೆ, ನಾನು ನೆಟ್ಸ್‌ನಲ್ಲಿ ಸುಂದರವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ನನ್ನ ನಿಯಂತ್ರಣದಲ್ಲಿರುವ ಎಲ್ಲವನ್ನೂ ನಾನು ಪ್ರಯತ್ನಿಸುತ್ತಿದ್ದೇನೆ. ಮತ್ತು ಪಂದ್ಯ ಬಂದಾಗ, ರನ್‌ಗಳು ಬರಬೇಕಾದಾಗ, ಅವು ಖಂಡಿತವಾಗಿಯೂ ಬರುತ್ತವೆ. ಆದರೆ ಹೌದು, ನಾನು ರನ್‌ಗಳನ್ನು ಹುಡುಕುತ್ತಿದ್ದೇನೆ" ಎಂದರು.
"ಈ ಕ್ರೀಡೆ ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಸರಣಿಗೆ ಹೇಗೆ ಹಿಂತಿರುಗುತ್ತೀರಿ ಎಂಬುದು ಹೆಚ್ಚು ಮುಖ್ಯವಾಗಿದೆ. ಮತ್ತು ನಾವು ಅದೇ ಕೆಲಸವನ್ನು ಮಾಡಿದ್ದೇವೆ. ನಾವು ಮೂಲಭೂತ ವಿಷಯಗಳಿಗೆ ಹಿಂತಿರುಗಲು ಬಯಸಿದ್ದೇವೆ. ನಾವು ಚಂಡೀಗಢದಲ್ಲಿ ಆಡಿದ ಆಟದಿಂದ ಬಹಳಷ್ಟು ಕಲಿಯುತ್ತಿದ್ದೆವು. ನಾವು ಬಹಳಷ್ಟು ವಿಭಿನ್ನ ವಿಷಯಗಳನ್ನು ಮಾಡಲು ಪ್ರಯತ್ನಿಸಲಿಲ್ಲ. ಆದರೆ ಆ ಸಮಯದಲ್ಲಿ ಮೂಲಭೂತ ವಿಷಯಗಳು ಬಹಳ ಮುಖ್ಯವೆಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಸೂರ್ಯಕುಮಾರ್ ಅವರ ಕಳಪೆ ಫಾರ್ಮ್ ನಡುವೆಯೂ, ಅವರು ಶ್ರೀಲಂಕಾದಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಟಿ20ಐ ಸ್ವರೂಪದಲ್ಲಿ ಟೀಮ್ ಇಂಡಿಯಾದ ಗೆಲುವಿನ ಸರಾಸರಿ ಹೆಚ್ಚಾಗಿದೆ. ಏಷ್ಯಾಕಪ್ ಸೇರಿದಂತೆ ಅವರ ನಾಯಕತ್ವದಲ್ಲಿ ಈವರೆಗೆ ಆಡಿರುವ ಎಲ್ಲಾ ಸರಣಿಗಳನ್ನು ಭಾರತ ತಂಡ ಗೆದ್ದುಕೊಂಡಿದೆ.
ಇದನ್ನೂ ಓದಿ ಸಂಘಟಿತ ಪ್ರದರ್ಶನ; 3ನೇ ಟಿ20 ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ ಭಾರತ
ಭಾರತಕ್ಕೆ ಸುಲಭ ತುತ್ತಾದ ಹರಿಣ ಪಡೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲರ್‌ಗಳ ಮೋಡಿಗೆ ನಲುಗಿ ನಿಗದಿತ 20 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಶುಭ್‌ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ನಡುವೆಯೂ, ಭಾರತ 15.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಇನ್ನು 4 ಓವರ್‌ಗಳಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.