ಸೂಪರ್ ಸಂಡೆಯಲ್ಲಿ ಹರಿಣಗಳ ವಿರುದ್ಧ ಭಾರತಕ್ಕೆ ಸೂಪರ್-8 ಸವಾಲು
T20 World Cup: ಸೂಪರ್ 8 ಹಂತದ ಪ್ರತಿ ಗುಂಪಿನಲ್ಲಿ ತಂಡವೊಂದು ಕನಿಷ್ಠ ಎರಡು ಗೆಲುವು ದಾಖಲಿಸಿದರೆ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸೂಪರ್-8 ಹಂತದ ಪ್ರತಿ ಪಂದ್ಯವು ಎಲ್ಲಾ ತಂಡಗಳಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
The Indian team -
ಅಹಮದಾಬಾದ್, ಫೆ.21: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup)ನ ಅಜೇಯ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ತಂಡ ಭಾನುವಾರ ನಡೆಯುವ ಸೂಪರ್-8 ಪಂದ್ಯದಲ್ಲಿ ಮುಖಾಮುಖಿಯಾಲಿವೆ. ಸಹಜವಾಗಿಯೇ ಒಂದು ತಂಡ ಮೊದಲ ಸೋಲು ಕಾಣಲಿದೆ. ಈ ತಂಡ ಯಾವುದು ಎಂಬುದು ಪಂದ್ಯದ ಕೌತುಕ. ಪಂದ್ಯಕ್ಕೆ ಮೋದಿ ಕ್ರೀಡಾಂಗಣ ಅಣಿಯಾಗಿದೆ.
ತನ್ನದೇ ಆತಿಥ್ಯದಲ್ಲಿ ವಿಶ್ವಕಪ್ ನಡೆಯುತ್ತಿದ್ದರೂ ಭಾರತ ತಂಡ ಈಗಲೂ ಟೂರ್ನಿಗೆ ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ. ಲೀಗ್ ಹಂತದ ಎಲ್ಲ ಪಂದ್ಯವನ್ನೂ ಗೆದ್ದಿದ್ದರೂ ಕೂಡ ಬಲಿಷ್ಠ ತಂಡಗಳ ಸವಾಲು ಇನ್ನಷ್ಟೇ ಎದುರಿಸಬೇಕಿದೆ. ನೆದರ್ಲೆಂಡ್ಸ್ ವಿರುದ್ಧ ಸೋಲಿನ ಅಂಚಿನ ತನಕ ಹೋಗಿ ಕೊನೆಗೆ ಸಣ್ಣ ಅಂತರದ ಗೆಲುವಿನ ನಿಟ್ಟುಸಿರು ಬಿಟ್ಟಿದ್ದನ್ನು ಮರೆಯುವಂತಿಲ್ಲ. ತಂಡದ ಬೌಲಿಂಗ್ ಸುಧಾರಣೆ ಕಾಣದ ಹೊರತು ತಂಡ ಮುಂದಿನ ಹಂತ ಕಷ್ಟವಿದೆ.
ಹೊರನೋಟಕ್ಕೆ ತಂಡ ಸಮರ್ಥವಾಗಿ, ಕಾಣಿಸಿದರೂ ತಂಡದಲ್ಲಿ ಸಮಸ್ಯೆ ಇಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮ ಹ್ಯಾಟ್ರಿಕ್ ಶೂನ್ಯ ಸುತ್ತಿದ್ದಾರೆ. ಅನುಭವಿ ಬೌಲರ್ ಜಸ್‌ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್ ಇದುವರೆಗೂ ಪರಿಣಾಮಕಾರಿ ಬೌಲಿಂಗ್ ನಡೆಸಿಲ್ಲ. ತಿಲಕ್ ವರ್ಮ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಸದ್ಯ ಇಶಾನ್ ಕಿಶನ್ ಮಾತ್ರ ನಂಬಿಕಸ್ಥ ಬ್ಯಾಟರ್ ಆಗಿದ್ದಾರೆ.
ಕನ್ನಡತಿ ಶ್ರೇಯಾಂಕಾ ಬೌಲಿಂಗ್ ಕಮಾಲ್; 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ
ಸೂಪರ್ 8 ಹಂತದ ಪ್ರತಿ ಗುಂಪಿನಲ್ಲಿ ತಂಡವೊಂದು ಕನಿಷ್ಠ ಎರಡು ಗೆಲುವು ದಾಖಲಿಸಿದರೆ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸೂಪರ್-8 ಹಂತದ ಪ್ರತಿ ಪಂದ್ಯವು ಎಲ್ಲಾ ತಂಡಗಳಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಮೂರು ಪಂದ್ಯಗಳನ್ನು ಆಡಿದ್ದು ತಂಡಕ್ಕೆ ಹೆಚ್ಚು ಅನುಕೂಲ. ಭಾರತ ತಂಡ ಇಲ್ಲಿ ಏಕೈಕ ಪಂದ್ಯ ಆಡಿತ್ತು. ನೆದರ್ಲ್ಯಾಂಡ್ಸ್ ವಿರುದ್ಧ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ.), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಕ್ವೆನಾ ಮಫಕಾ, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ
ಪಂದ್ಯ ಆರಂಭ: ರಾತ್ರಿ 7ಕ್ಕೆ.
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್.