ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ತಿಲಕ್ ವರ್ಮಾ
Tilak Verma: ತಿಲಕ್ ಈಗ 2026ರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಫೀಲ್ಡರ್ ಆಗಿ 26 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಮಾಡಲು ನಿರ್ಧರಿಸಿತು.
Tilak Verma -
ಕ್ರೈಸ್ಟ್ಚರ್ಚ್, ಅ.24: ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಫೀಲ್ಡರ್ ಆಗುವ ಮೂಲಕ ತಿಲಕ್ ವರ್ಮಾ ಇತಿಹಾಸ ನಿರ್ಮಿಸಿದರು.
ಶನಿವಾರ ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಿಮ್ ಸೈಫರ್ಟ್ ಮತ್ತು ಡೇರಿಲ್ ಮಿಚೆಲ್ ಅವರ ಕ್ಯಾಚ್ ಪಡೆದ ತಿಲಕ್ ವರ್ಮಾ, ಇಂಡೋನೇಷ್ಯಾದ ಡ್ಯಾನಿಲ್ಸನ್ ಹಾವೋ ಅವರನ್ನು ಹಿಂದಿಕ್ಕಿದರು. ಹಾವೋ ಅವರು 2025ರಲ್ಲಿ 25 ಕ್ಯಾಚ್ಗಳನ್ನು ಪಡೆಯುವ ಮೂಲಕ ಈ ಹಿಂದಿನ ದಾಖಲೆಯನ್ನು ಹೊಂದಿದ್ದರು.
ತಿಲಕ್ ಈಗ 2026ರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಫೀಲ್ಡರ್ ಆಗಿ 26 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಮಾಡಲು ನಿರ್ಧರಿಸಿತು.
ಪಾಕ್ ಆತಿಥ್ಯದಲ್ಲಿ 2028ರ ಮಹಿಳಾ ಟಿ20 ವಿಶ್ವಕಪ್; ದುಬೈನಲ್ಲಿ ಭಾರತ ಪಂದ್ಯ?
ಭಾರತ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿತು. ಗಾಯಗೊಂಡ ಇಶಾನ್ ಕಿಶನ್ ಅವರ ಬದಲಿಗೆ ವೈಭವ್ ಸೂರ್ಯವಂಶಿ ತಂಡವನ್ನು ಸೇರಿದರೆ, ಮಯಾಂಕ್ ಯಾದವ್ ಅವರ ಸ್ಥಾನಕ್ಕೆ ಪ್ರಿನ್ಸ್ ಯಾದವ್ ಬಂದರು. ನ್ಯೂಜಿಲೆಂಡ್ ತಂಡವೂ ಒಂದು ಬದಲಾವಣೆ ಮಾಡಿಕೊಂಡಿದ್ದು, ಆಡಮ್ ಮಿಲ್ನೆ ಅವರ ಬದಲಿಗೆ ಜೇಕಬ್ ಡಫಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.
ಕ್ಯಾಲೆಂಡರ್ ವರ್ಷದಲ್ಲಿ T20I ಪಂದ್ಯಗಳಲ್ಲಿ ಫೀಲ್ಡರ್ ಆಗಿ ಅತಿ ಹೆಚ್ಚು ಕ್ಯಾಚ್ಗಳು
ತಿಲಕ್ ವರ್ಮ-26 (2026)
ಡ್ಯಾನಿಲ್ಸನ್ ಹಾವೋ-25 (2025)
ಮುಹಮ್ಮದ್ ವಸೀಮ್- 24 (2024)
ಶರ್ವಿನ್ ಮುನಿಯಾಂಡಿ- 21 (2025)
ಬ್ರಿಯಾನ್ ಮಸಾಬಾ- 20 (2023)
ತನ್ಜಿದ್ ಹಸನ್- 20 (2025)
ಜೆರ್ಸಿ ನಂಬರ್ ಬದಲಿಸಿದ ಭುವನೇಶ್ವರ್
ನಾಲ್ಕು ವರ್ಷದ ಬಳಿಕ ಭಾರತ ತಂಡಕ್ಕೆ ಮರಳಿರುವ ಭುವನೇಶ್ವರ್ ಕುಮಾರ್ ಅವರು ತಮ್ಮ ಜೆರ್ಸಿ ಸಂಖ್ಯೆಯನ್ನು ಬದಲಿಸಿದ್ದಾರೆ. ಈ ಹಿಂದೆ 15 ನಂಬರ್ನ ಜೆರ್ಸಿ ಧರಿಸುತ್ತಿದ್ದ ಅವರು ಇದಾಗ ಈ ಸಂಖ್ಯೆಯನ್ನು ಬದಲಿಸಿ 78 ನಂ.ಜರ್ಸಿಯನ್ನು ಆಯ್ಕೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಅವರು ಈ ಬದಲಾವಣೆ ಮಾಡಿಕೊಂಡರು.