ಉದ್ಘಾಟನಾ ಆರ್ಚರಿ ಪ್ರೀಮಿಯರ್ ಲೀಗ್; ಭಾರತದ ಅಗ್ರ ಬಿಲ್ಲುಗಾರರು ಕಣಕ್ಕೆ
Archery Premier League: ಉದ್ಘಾಟನಾ ಆವೃತ್ತಿಯಲ್ಲಿ ಹರಾಜಿನ ಬದಲು ಡ್ರಾಫ್ಟ್ ವ್ಯವಸ್ಥೆಯನ್ನು ಅನುಸರಿಸುವ ಸಾಧ್ಯತೆಯಿದೆ. ಪ್ರತಿ ತಂಡವು ಎಂಟು ಸದಸ್ಯರನ್ನು ಒಳಗೊಂಡಿರುತ್ತದೆ. ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು. ತಂಡಗಳು ಇಬ್ಬರು ವಿದೇಶಿ ಬಿಲ್ಲುಗಾರರನ್ನು ಸೇರಿಸಿಕೊಳ್ಳಬಹುದು. ಅವರಲ್ಲಿ ಕನಿಷ್ಠ ಒಬ್ಬರು ಆಡುವ ನಾಲ್ವರಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.


ನವದೆಹಲಿ: ದೀಪಿಕಾ ಕುಮಾರಿ(Deepika Kumari), ಧೀರಜ್ ಬೊಮ್ಮದೇವರ(Dhiraj), ಜ್ಯೋತಿ ಸುರೇಖಾ ವೆನ್ನಮ್ ಮತ್ತು ಅಭಿಷೇಕ್ ವರ್ಮಾ(Abhishek Verma) ಸೇರಿದಂತೆ ಭಾರತದ ಅಗ್ರ ಬಿಲ್ಲುಗಾರರು ಉದ್ಘಾಟನಾ ಆರ್ಚರಿ ಪ್ರೀಮಿಯರ್ ಲೀಗ್ (Archery Premier League) ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ರಾಷ್ಟ್ರೀಯ ಒಕ್ಕೂಟ ಸೋಮವಾರ ತಿಳಿಸಿದೆ. ಪಂದ್ಯಾವಳಿ ಅಕ್ಟೋಬರ್‌ನಲ್ಲಿ ದೆಹಲಿಯ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಆರು ಫ್ರಾಂಚೈಸಿ ಆಧಾರಿತ ಸ್ಪರ್ಧೆಯು 11 ದಿನಗಳ ಕಾಲ ನಡೆಯಲಿದೆ. ಹಲವು ದೇಶಗಳ ಪ್ರಮುಖ ರಿಕರ್ವ್ ಮತ್ತು ಕಾಂಪೌಂಡ್ ಬಿಲ್ಲುಗಾರರನ್ನು ಈ ಕೂಟ ಒಟ್ಟುಗೂಡಿಸಲಿದೆ. ಫ್ರಾಂಚೈಸಿಗಳ ಹೆಸರುಗಳನ್ನು ಇನ್ನೂ ಘೋಷಿಸಲಾಗಿಲ್ಲ.
ಉದ್ಘಾಟನಾ ಆವೃತ್ತಿಯಲ್ಲಿ ಹರಾಜಿನ ಬದಲು ಡ್ರಾಫ್ಟ್ ವ್ಯವಸ್ಥೆಯನ್ನು ಅನುಸರಿಸುವ ಸಾಧ್ಯತೆಯಿದೆ. ಪ್ರತಿ ತಂಡವು ಎಂಟು ಸದಸ್ಯರನ್ನು ಒಳಗೊಂಡಿರುತ್ತದೆ. ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು. ತಂಡಗಳು ಇಬ್ಬರು ವಿದೇಶಿ ಬಿಲ್ಲುಗಾರರನ್ನು ಸೇರಿಸಿಕೊಳ್ಳಬಹುದು. ಅವರಲ್ಲಿ ಕನಿಷ್ಠ ಒಬ್ಬರು ಆಡುವ ನಾಲ್ವರಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.
ರಿಕರ್ವ್ ಮತ್ತು ಕಾಂಪೌಂಡ್ ಬಿಲ್ಲುಗಾರರು ಕ್ರಮವಾಗಿ 70 ಮೀ ಮತ್ತು 50 ಮೀ ದೂರವನ್ನು ಫ್ಲಡ್‌ಲೈಟ್‌ಗಳ ಅಡಿಯಲ್ಲಿ ವಿಶಿಷ್ಟ ತಂಡ ಸ್ವರೂಪದಲ್ಲಿ ಶೂಟ್ ಮಾಡುತ್ತಾರೆ. ವಿಶ್ವ ಶ್ರೇಯಾಂಕಗಳು ಹಾಗೂ ಭಾರತೀಯ ಆರ್ಚರಿ ಸಂಘ (ಎಎಐ) ಇತ್ತೀಚಿನ ಆಯ್ಕೆ ಪ್ರಯೋಗಗಳ ಆಧಾರದ ಮೇಲೆ ಭಾರತೀಯ ಬಿಲ್ಲುಗಾರರನ್ನು ಆಯ್ಕೆ ಮಾಡಲಾಗಿದೆ.
ರಿಕರ್ವ್‌ನಲ್ಲಿ, ವಿಶ್ವದ ನಂ. 3 ದೀಪಿಕಾ ಮತ್ತು ವಿಶ್ವದ ನಂ. 14 ಧೀರಾಜ್ ಅನುಭವಿಗಳಾದ ತರುಣ್‌ದೀಪ್ ರೈ ಮತ್ತು ಅತಾನು ದಾಸ್ ಅವರೊಂದಿಗೆ ಕ್ಷೇತ್ರವನ್ನು ಮುನ್ನಡೆಸುತ್ತಾರೆ. ಇತರ ಮಹಿಳಾ ರಿಕರ್ವ್ ಬಿಲ್ಲುಗಾರರಲ್ಲಿ ಅಂಕಿತಾ ಭಕತ್ ಮತ್ತು ಭಜನ್ ಕೌರ್ ಸೇರಿದ್ದಾರೆ. ಆದರೆ ಪುರುಷರ ಸಾಲಿನಲ್ಲಿ ನೀರಜ್ ಚೌಹಾಣ್, ರಾಹುಲ್, ರೋಹಿತ್ ಕುಮಾರ್, ಮೃಣಾಲ್ ಚೌಹಾಣ್, ಸಚಿನ್ ಗುಪ್ತಾ ಮತ್ತು ಕ್ರಿಶ್ ಕುಮಾರ್ ಇದ್ದಾರೆ.
ಇದನ್ನೂ ಓದಿ Buchi Babu 2025: ಮುಂಬೈ ತೊರೆದು ಮಹಾರಾಷ್ಟ್ರ ಪರ ಆಡಲು ಸಜ್ಜಾದ ಪೃಥ್ವಿ ಶಾ!
ಕಾಂಪೌಂಡ್ ವಿಭಾಗದಲ್ಲಿ ವಿಶ್ವದಾಖಲೆಯ ಜ್ಯೋತಿ ಸುರೇಖಾ ಮತ್ತು ವಿಶ್ವದ ನಂ. 9 ರಿಷಬ್ ಯಾದವ್ ನಾಯಕತ್ವದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇವರೊಂದಿಗೆ ಅನುಭವಿ ಅಭಿಷೇಕ್, ಪ್ರಥಮೇಶ್ ಬಾಲಚಂದ್ರ, ಪ್ರಿಯಾಂಶ್ಮ ತ್ತು ಪರ್ನೀತ್ ಕೌರ್ ಸೇರಿದ್ದಾರೆ.