ಏಷ್ಯಾಕಪ್: ಭಾರತ-ಪಾಕ್ ಪಂದ್ಯದ 10 ಸೆಕೆಂಡ್ ಜಾಹೀರಾತಿಗೆ 16 ಲಕ್ಷ ರೂ.
Asia Cup 2025: ಭಾರತದ ಪಂದ್ಯಗಳ ನಡುವಿನ ಜಾಹೀರಾತು ದರವನ್ನು ನಿಗದಿಪಡಿಸಿದೆ. 10 ಸೆಕೆಂಡ್ನ ಜಾಹೀರಾತುಗಾಗಿ 14 ರಿಂದ 16 ಲಕ್ಷದವರೆಗೆ ಬೆಲೆ ನಿಗದಿ ಪಡಿಸಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದ 10 ಸೆಕೆಂಡುಗಳ ಜಾಹೀರಾತಿನ ಬೆಲೆ 16 ಲಕ್ಷ ರೂ. ನಿಗದಿಯಾಗಿದೆ.


ದುಬೈ: ಸೆಪ್ಟೆಂಬರ್ 14 ರಂದು ನಡೆಯಲಿರುವ ಏಷ್ಯಾ ಕಪ್ 2025ರ(Asia Cup 2025) ಗ್ರೂಪ್ ಎ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು(India vs Pakistan) ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದಲ್ಲಿ, ಏಷ್ಯಾ ಕಪ್ 2025 ರ ನೇರ ಪ್ರಸಾರ ಮತ್ತು ಸ್ಟ್ರೀಮಿಂಗ್ ಹಕ್ಕುಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಹೊಂದಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (SPNI) ಏಷ್ಯಾಕಪ್ನಲ್ಲಿ ಭಾರತದ ಪಂದ್ಯಗಳ ನಡುವಿನ ಜಾಹೀರಾತು ದರವನ್ನು ನಿಗದಿಪಡಿಸಿದೆ. 10 ಸೆಕೆಂಡ್ನ ಜಾಹೀರಾತುಗಾಗಿ 14 ರಿಂದ 16 ಲಕ್ಷದವರೆಗೆ ಬೆಲೆ ನಿಗದಿ ಪಡಿಸಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದ 10 ಸೆಕೆಂಡುಗಳ ಜಾಹೀರಾತಿನ ಬೆಲೆ 16 ಲಕ್ಷ ರೂ. ನಿಗದಿಯಾಗಿದೆ.
ಟಿವಿಯಲ್ಲಿ ಜಾಹೀರಾತು ಪ್ಯಾಕೇಜ್‌ಗಳು
ಸಹ-ಪ್ರಸ್ತುತಿ ಪ್ರಾಯೋಜಕತ್ವ: ₹18 ಕೋಟಿ
ಅಸೋಸಿಯೇಟ್ ಪ್ರಾಯೋಜಕತ್ವ: ₹13 ಕೋಟಿ
ಸ್ಪಾಟ್-ಬೈ ಪ್ಯಾಕೇಜ್ (ಭಾರತ ಮತ್ತು ಭಾರತೇತರ ಆಟಗಳು): 10 ಸೆಕೆಂಡ್‌ಗಳಿಗೆ ₹16 ಲಕ್ಷ, ಅಥವಾ ₹4.48 ಕೋಟಿ
ಸೋನಿ LIV ನಲ್ಲಿ ಡಿಜಿಟಲ್ ಡೀಲ್‌ಗಳು
ಸಹ-ಪ್ರಸ್ತುತಿ ಮತ್ತು ಮುಖ್ಯಾಂಶಗಳ ಪಾಲುದಾರ: ತಲಾ ₹30 ಕೋಟಿ
ಸಹ-ಚಾಲಿತ ಪ್ಯಾಕೇಜ್: ₹18 ಕೋಟಿ
ಎಲ್ಲಾ ಡಿಜಿಟಲ್ ಜಾಹೀರಾತುಗಳಲ್ಲಿ 30% ಭಾರತದ ಪಂದ್ಯಗಳಿಗೆ ಕಾಯ್ದಿರಿಸಲಾಗಿದೆ
ಇದನ್ನೂ ಓದಿ Asia Cup 2025: ʻಭಾರತ ತಂಡವನ್ನು ಪಾಕಿಸ್ತಾನ ಸೋಲಿಸಲಿದೆʼ-ಅಕಿಬ್ ಜಾವೇದ್ ಭವಿಷ್ಯ!
ಜಾಹೀರಾತು ಸ್ವರೂಪದ ದರಗಳು
ಪ್ರೀ-ರೋಲ್‌ಗಳು: ಪ್ರತಿ 10 ಸೆಕೆಂಡ್‌ಗಳಿಗೆ ₹275 (ಭಾರತದ ಪಂದ್ಯಗಳಿಗೆ ₹500; ಭಾರತ-ಪಾಕಿಸ್ತಾನಕ್ಕೆ ₹750)
ಮಿಡ್-ರೋಲ್‌ಗಳು: ₹225 (ಭಾರತದ ಪಂದ್ಯಗಳಿಗೆ ₹400; ಭಾರತ-ಪಾಕಿಸ್ತಾನಕ್ಕೆ ₹600)
ಸಂಪರ್ಕಿತ ಟಿವಿ ಜಾಹೀರಾತುಗಳು: ₹450 (ಭಾರತದ ಪಂದ್ಯಗಳಿಗೆ ₹800; ಭಾರತ-ಪಾಕಿಸ್ತಾನಕ್ಕೆ ₹1,200)