ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup ಭಾರತ ತಂಡದಲ್ಲಿ 14ರ ವಯಸ್ಸಿನ ಬಾಲಕನಿಗೆ ಅವಕಾಶ ನೀಡಬೇಕೆಂದ ಕೆ ಶ್ರೀಕಾಂತ್!

ಮುಂಬರುವ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ 14ರ ವಯಸ್ಸಿನ ವೈಭವ್‌ ಸೂರ್ಯವಂಶಿಗೆ ಅವಕಾಶ ನೀಡಬೇಕೆಂದು ಟೀಮ್‌ ಇಂಡಿಯಾ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌ ಆಗ್ರಹಿಸಿದ್ದಾರೆ. ಸೆಪ್ಟಂಬರ್‌ 9 ರಂದು ಯುಎಇ ಆತಿಥ್ಯದಲ್ಲಿ ಏಷ್ಯಾ ಕಪ್‌ ಟೂರ್ನಿ ಆರಂಭವಾಗಲಿದೆ.

‌ವೈಭವ್‌ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು: ಶ್ರೀಕಾಂತ್!

ಭಾರತ ತಂಡದಲ್ಲಿ ವೈಭವ್‌ ಸೂರ್ಯವಂಶಿಗೆ ಅವಕಾಶ ನೀಡಬೇಕೆಂದ ಕೆ ಶ್ರೀಕಾಂತ್‌.

Profile Ramesh Kote Aug 18, 2025 3:55 PM

ನವದೆಹಲಿ: ಸೆಪ್ಟಂಬರ್‌ 9 ರಂದು ಆರಂಭವಾಗಲಿರುವ 2025ರ ಏಷ್ಯಾ ಕಪ್‌ ಟೂರ್ನಿಯ (Asia Cup 2025) ಭಾರತ ತಂಡದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹೀರೋ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ (Vaibhav Suryavanshi) ಅವರಿಗೆ ಅವಕಾಶ ನೀಡಬೇಕೆಂದು ಟೀಮ್‌ ಇಂಡಿಯಾ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌ (Kris Srikkanth) ಆಗ್ರಹಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡಲು ಬಿಸಿಸಿಐ ತಡ ಮಾಡಬಾರದು ಅವರು ತಿಳಿಸಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ 1989ರಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್‌ ನಾಯಕತ್ವದಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೇವಲ 16ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ್ದರು.

ಆಗಸ್ಟ್‌ 19 ರಂದು ಬಿಸಿಸಿಐ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಿದೆ. ತಂಡದಲ್ಲಿ ಯಾರಿಗೆಲ್ಲಾ ಅವಕಾಶವನ್ನು ನೀಡಬೇಕೆಂದು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಚರ್ಚೆ ನಡೆಸುತ್ತಿದೆ. ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಲಾಗುವುದು ಎಂದು ಇನ್ನೂ ಗೊಂದಲವಿದೆ. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಅವರು ಪ್ರಸ್ತುತ ಭಾರತ ಟಿ20ಐ ತಂಡದ ಓಪನರ್ಸ್‌ ಹಾಗೂ ಇವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿದ್ದಾರೆ. ಹಾಗಾಗಿ ಯುಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಆದರೆ, ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌, ವೈಭವ್‌ ಸೂರ್ಯವಂಶಿ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

Asia Cup squad: ಏಷ್ಯಾಕಪ್‌ಗೆ ಭಾರತ ಪ್ಲೇಯಿಂಗ್ ಇಲೆವೆನ್ ಅಂತಿಮ; ಹೀಗಿದೆ ತಂಡ

2025ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ವೈಭವ್‌ ಸೂರ್ಯವಂಶಿ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಆಡಿದ್ದ ಏಳು ಪಂದ್ಯಗಳಿಂದ 200ರ ಸ್ಟ್ರೈಕ್‌ ರೇಟ್‌ನಲ್ಲಿ 252 ರನ್‌ಗಳನ್ನು ಸಿಡಿಸಿದ್ದರು. ಗುಜರಾತ್‌ ಟೈಟನ್ಸ್‌ ವಿರುದ್ಧ ಕೇವಲ 35 ಎಸೆತಗಳಲ್ಲಿ ವೈಭವ್‌ ಶತಕವನ್ನು ಬಾರಿಸಿದ್ದರು. ಆ ಮೂಲಕ ಕ್ರಿಸ್‌ ಗೇಲ್‌ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅವರು ಇದೇ ಲಯವನ್ನು ಭಾರತ ಅಂಡರ್‌ 19 ತಂಡದಲ್ಲಿಯೂ ಮುಂದುವರಿಸಿ ಏಕದಿನ ಹಾಗೂ ನಾಲ್ಕು ದಿನಗಳ ಪಂದ್ಯ ಸೇರಿ ಎರಡು ಶತಕಗಳನ್ನು ಬಾರಿಸಿದ್ದರು.

"ನಿಮ್ಮ ಕರೆ ಧೈರ್ಯದಿಂದ ಇರಬೇಕು. ಅವರನ್ನು ಕಾಯುವಂತೆ ಮಾಡಬೇಡಿ. ಅವರು ಇನ್ನೂ ಪರಿಪಕ್ವರಾಗಲಿ ಎಂದು ಹೇಳಬೇಡಿ. ಅವರು ಈಗಾಗಲೇ ತಮ್ಮ ಪರಿಕ್ವತೆಯಿಂದ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಅವರು ಶಾಟ್‌ ಹೊಡೆಯುವ ಹಾದಿ ಬೇರೆ ಹಂತದಲ್ಲಿದೆ. ಒಂದು ವೇಳೆ ನಾನು ಆಯ್ಕೆ ಸಮಿತಿಗೆ ಮುಖ್ಯಸ್ಥನಾಗಿದ್ದರೆ, ವೈಭವ್‌ ಸೂರ್ಯವಂಶಿಯನ್ನು ತಂಡದ 16ರಲ್ಲಿ ಆಡಿಸುತ್ತಿದ್ದೆ," ಎಂದು ಕೃಷ್ಣಮಾಚಾರಿ ಶ್ರೀಕಾಂತ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

Asia Cup 2025: ʻಭಾರತ ತಂಡವನ್ನು ಪಾಕಿಸ್ತಾನ ಸೋಲಿಸಲಿದೆʼ-ಅಕಿಬ್‌ ಜಾವೇದ್‌ ಭವಿಷ್ಯ!

ಸಂಜು ಸ್ಯಾಮ್ಸನ್‌ಗೆ ಸ್ಥಾನ ಅನುಮಾನ: ಶ್ರೀಕಾಂತ್

ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವಲ್ಲಿ ಶ್ರೀಕಾಂತ್‌ ಆಸಕ್ತಿ ತೋರುತ್ತಿಲ್ಲ. ಅಭಿಷೇಕ್‌ ಶರ್ಮಾ ಅವರ ಜೊತೆಗೆ ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌ ಹಾಗೂ ಸಾಯಿ ಸುದರ್ಶನ್‌ ಅವರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕೆಂದು ಕೆ ಶ್ರೀಕಾಂತ್‌ ಸಲಹೆ ನೀಡಿದ್ದಾರೆ.

"ನನ್ನ ಪ್ರಕಾರ ಸಂಜು ಏಷ್ಯಾ ಕಪ್‌ಗೆ ಆಯ್ಕೆಯಾಗುವುದು ಅನುಮಾನ. ನನ್ನ ಮೊದಲ ಆಯ್ಕೆಯ ಆರಂಭಿಕ ಅಭಿಷೇಕ್‌ ಶರ್ಮಾ, ಇದರಲ್ಲಿ ಅನುಮಾನವೇ ಇಲ್ಲ. ನನ್ನ ಬಳಿ ಇನ್ನೂ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ವೈಭವ್‌ ಸೂರ್ಯವಂಶಿ ಅಥವಾ ಸಾಯಿ ಸುದರ್ಶನ್‌ ಅಥವಾ ಶುಭಮನ್‌ ಗಿಲ್‌ ಕೂಡ ಆಯ್ಕೆಯಲ್ಲಿದ್ದಾರೆ. ಒಂದು ವೇಳೆ ನಾನು ಸೆಲೆಕ್ಟರ್‌ ಆಗಿದ್ದರೆ, ವೈಭವ್‌ ಸೂರ್ಯವಂಶಿ ಅವರನ್ನು ಟಿ20 ವಿಶ್ವಕಪ್‌ ಭಾರತ ತಂಡದ ಅಂತಿಮ 15ಕ್ಕೆ ಆಯ್ಕೆ ಮಾಡುತ್ತಿದ್ದೆ. ಅವರು ಅಸಾಧಾರಣ ಪ್ರತಿಭೆ," ಎಂದು ಮಾಜಿ ಕ್ರಿಕೆಟಿಗ ಶ್ಲಾಘಿಸಿದ್ದಾರೆ.