ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs DC: ಕೈಗವಸು ಬದಲಾವಣೆಗೆ ನಿರಾಕರಣೆ; ಅಂಪೈರ್‌ ನಿರ್ಧಾರಕ್ಕೆ ಸ್ಟಬ್ಸ್ ಆಕ್ರೋಶ

Tristan Stubbs: ಅಂಪೈರ್‌ ನಿರ್ಧಾರದಿಂದ ಆಕ್ರೋಶಗೊಂಡ ಸ್ಟಬ್ಸ್‌ ವಿಕೆಟ್‌ ಪತನದ ಬಳಿಕ ಹಿಂತಿರುಗಿ ಹೋಗುವಾಗ, ಅವರು ಅಂಪೈರ್ ಜೊತೆ ವಾಗ್ವಾದ ನಡೆಸಿ ಸಿಟ್ಟಿನಿಂದ ಡ್ರೆಸ್ಸಿಂಗ್‌ ರೂಮ್‌ ಮೆಟ್ಟಿಲುಗಳ ಬಳಿ ತಮ್ಮ ಬ್ಯಾಟ್ ಅನ್ನು ಬೀಳಿಸಿ ಹತಾಶೆಯಿಂದ ಹೆಲ್ಮೆಟ್‌ ಅನ್ನು ಬಾಗಿಲಿಗೆ ಹೊಡೆದರು.

ಕೈಗವಸು ಬದಲಾವಣೆಗೆ ನಿರಾಕರಣೆ; ಅಂಪೈರ್‌ ನಿರ್ಧಾರಕ್ಕೆ ಸ್ಟಬ್ಸ್ ಆಕ್ರೋಶ

Tristan Stubbs was denied a change of gloves -

Abhilash BC
Abhilash BC Apr 12, 2026 9:06 AM

ಚೆನ್ನೈ, ಎ.12: ಶನಿವಾರ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಅಂಪೈರ್‌ ನಿರ್ಧಾರವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನ ತೇವಾಂಶವುಳ್ಳ ಪರಿಸ್ಥಿತಿಯಿಂದಾಗಿ ಆಟ ಮುಂದುವರಿಸಲು ಸಾಧ್ಯವಾಗದಷ್ಟು ಒದ್ದೆಯಾಗಿದ್ದರಿಂದ ಟ್ರಿಸ್ಟನ್‌ ಸ್ಟಬ್ಸ್ ಓವರ್‌ನ ಮಧ್ಯದಲ್ಲಿ ತನ್ನ ಗ್ಲೌಸ್‌ಗಳನ್ನು ಬದಲಾಯಿಸಲು ಪ್ರಯತ್ನಿಸಿದರು. ಆದಾಗ್ಯೂ, ಆಟದ ವಿಳಂಬದ ನಿಯಮಗಳನ್ನು ಉಲ್ಲೇಖಿಸಿ ಮೈದಾನದಲ್ಲಿರುವ ಅಂಪೈರ್‌ಗಳು ಬದಲಾವಣೆಗೆ ಅವಕಾಶ ನೀಡಲಿಲ್ಲ. ಅಂಪೈರ್‌ನ ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಅಂಪೈರ್‌ಗಳ ತೀರ್ಪುಗಳ ಕುರಿತು ಈಗಾಗಲೇ ಹಲವು ವಿವಾದಗಳು ನಡೆದಿವೆ. ಕೆಕೆಆರ್‌ ಮತ್ತು ಲಖನೌ ಪಂದ್ಯದ ವೇಳೆ ಫೀಲ್ಡರ್‌ ಬೌಂಡರಿ ಲೈನ್‌ ತುಳಿದು ಕ್ಯಾಚ್‌ ಪಡೆದರೂ ಔಟ್‌ ನೀಡಿದ್ದು ಹೀಗೆ ಹಲವು ವಿವಾದಾತ್ಮಕ ಘಟನೆಗಳು ಸಂಭವಿಸಿದೆ. ಇದೀಗ ಕೈಗವಸು ಬದಲಿಸಲು ಅವಕಾಶ ನೀಡದೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ನಿತೀಶ್ ರಾಣಾ ಮತ್ತು ಮುಖ್ಯ ತರಬೇತುದಾರ ಹೇಮಾಂಗ್ ಬದಾನಿ ನಾಲ್ಕನೇ ಅಂಪೈರ್ ಜೊತೆ ಮಾತನಾಡುತ್ತಾ, ನಿರ್ಧಾರದ ಬಗ್ಗೆ ಸ್ಪಷ್ಟತೆ ಕೇಳುತ್ತಿರುವುದು ಕಂಡುಬಂದಿದೆ. ಐಪಿಎಲ್ ಆಟದ ಪರಿಸ್ಥಿತಿಗಳ ಪ್ರಕಾರ, ಬೌಲರ್ ಎಸೆತವನ್ನು ಎಸೆಯಲು ಸಿದ್ಧವಾದಾಗ ಬ್ಯಾಟರ್ ಸಿದ್ಧನಾಗಿರುತ್ತಾನೆ ಮತ್ತು ಯಾವುದೇ ವಿಳಂಬಕ್ಕೆ ದಂಡ ವಿಧಿಸಬಹುದು. ಆಟ ವಿಳಂಬವಾದರೆ ಓವರ್‌ನ ಮಧ್ಯದಲ್ಲಿ ಬ್ಯಾಟರ್ ಉಪಕರಣಗಳನ್ನು ಬದಲಾಯಿಸಲು ಅನುಮತಿಸುವ ಯಾವುದೇ ನಿರ್ದಿಷ್ಟ ನಿಬಂಧನೆ ಇಲ್ಲ.

Sanju Samson: ಶತಕ ಬಾರಿಸಿ 'ಪಡೆಯಪ್ಪ' ಶೈಲಿಯಲ್ಲಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್‌

ಅಂಪೈರ್‌ ನಿರ್ಧಾರದಿಂದ ಆಕ್ರೋಶಗೊಂಡ ಸ್ಟಬ್ಸ್‌ ವಿಕೆಟ್‌ ಪತನದ ಬಳಿಕ ಹಿಂತಿರುಗಿ ಹೋಗುವಾಗ, ಅವರು ಅಂಪೈರ್ ಜೊತೆ ವಾಗ್ವಾದ ನಡೆಸಿ ಸಿಟ್ಟಿನಿಂದ ಡ್ರೆಸ್ಸಿಂಗ್‌ ರೂಮ್‌ ಮೆಟ್ಟಿಲುಗಳ ಬಳಿ ತಮ್ಮ ಬ್ಯಾಟ್ ಅನ್ನು ಬೀಳಿಸಿ ಹತಾಶೆಯಿಂದ ಹೆಲ್ಮೆಟ್‌ ಅನ್ನು ಬಾಗಿಲಿಗೆ ಹೊಡೆದರು. ಡೆಲ್ಲಿ ಪರ ಟ್ರಿಸ್ಟನ್‌ ಸ್ಟಬ್ಸ್‌ (60) ಏಕಾಂಗಿ ಹೋರಾಟ ನಡೆಸಿದರು. ಒಂದೊಮ್ಮೆ ಅವರಿಗೆ ಗ್ಲಾಸ್‌ ಬದಲಿಸಲು ಅವಕಾಶ ನೀಡುತ್ತಿದ್ದರೆ ಪಂದ್ಯವನ್ನು ಗೆಲ್ಲಿಸುವ ಸಾಧ್ಯತೆಯೂ ಇತ್ತು. ಕೈಗವಸು ಜಾರುತ್ತಿದ್ದ ಕಾರಣ ಸ್ಟಬ್ಸ್‌ ಬ್ಯಾಟಿಂಗ್‌ ನಡೆಸಲು ಹೆಣಗಾಡುತ್ತಿದ್ದರು.

ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 212 ರನ್ ಗಳಿಸಿತು.‌‌‌ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇಂಗ್ಲೆಂಡ್‌ನ ವೇಗಿ ಜೇಮಿ ಓವರ್ಟನ್‌ (18ಕ್ಕೆ 4) ಮತ್ತು ಅನ್ಶುಲ್‌ ಕಂಬೋಜ್‌ (35ಕ್ಕೆ 3) ಕಡಿವಾಣ ಹಾಕಿದರು. ಇದರಿಂದಾಗಿ ನಿಗದಿತ ಓವರ್‌ಗಳಲ್ಲಿ 189 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು.