ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

National Sports Policy 2025: ರಾಷ್ಟ್ರೀಯ ಕ್ರೀಡಾ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Union Cabinet: ಖೇಲೋ ಭಾರತ್ ನೀತಿ 2025 ರ ಪ್ರಮುಖ ಲಕ್ಷಣವೆಂದರೆ ಬ್ಲಾಕ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವುದು. ಭಾರತೀಯ ಸಮಾಜದ ಚೌಕಟ್ಟಿನಲ್ಲಿ ಕ್ರೀಡೆಗಳನ್ನು ಆಳವಾಗಿ ಸಂಯೋಜಿಸುವುದು, ತಳಮಟ್ಟದಿಂದ ಪ್ರಾರಂಭಿಸಿ ಎಲ್ಲರಿಗೂ ಪ್ರವೇಶ ಮತ್ತು ಅವಕಾಶಗಳನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.

ರಾಷ್ಟ್ರೀಯ ಕ್ರೀಡಾ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Profile Abhilash BC Jul 1, 2025 10:45 PM

ನವದೆಹಲಿ: ಭಾರತೀಯ ಕ್ರೀಡಾ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಮತ್ತು ಕ್ರೀಡೆಯ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಉದ್ದೇಶದ ರಾಷ್ಟ್ರೀಯ ಕ್ರೀಡಾ ನೀತಿ 2025ಕ್ಕೆ(National Sports Policy 2025) ಕೇಂದ್ರ ಸಚಿವ ಸಂಪುಟ(Union Cabinet) ಮಂಗಳವಾರ ಅನುಮೋದನೆ ನೀಡಿದೆ. ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್(Union Minister Ashwini Vaishnaw) ಈ ವಿಷಯ ಪ್ರಕಟಿಸಿದರು.

2001 ರ ರಾಷ್ಟ್ರೀಯ ಕ್ರೀಡಾ ನೀತಿಯನ್ನು ರದ್ದುಗೊಳಿಸಿ, ಹೊಸ ನೀತಿಯು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಇರಿಸಲು ದೂರದೃಷ್ಟಿಯ ಮತ್ತು ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸುತ್ತದೆ. ಇದು 2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಮಹತ್ವಾಕಾಂಕ್ಷೆ ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಭಾರತದ ಪ್ರಯತ್ನವನ್ನು ಬಲಪಡಿಸುತ್ತದೆ.

ಖೇಲೋ ಭಾರತ್ ನೀತಿ 2025 ರ ಪ್ರಮುಖ ಲಕ್ಷಣವೆಂದರೆ ಬ್ಲಾಕ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವುದು. ಭಾರತೀಯ ಸಮಾಜದ ಚೌಕಟ್ಟಿನಲ್ಲಿ ಕ್ರೀಡೆಗಳನ್ನು ಆಳವಾಗಿ ಸಂಯೋಜಿಸುವುದು, ತಳಮಟ್ಟದಿಂದ ಪ್ರಾರಂಭಿಸಿ ಎಲ್ಲರಿಗೂ ಪ್ರವೇಶ ಮತ್ತು ಅವಕಾಶಗಳನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.

ಕೇಂದ್ರ ಸಚಿವಾಲಯಗಳು, ನೀತಿ ಆಯೋಗ, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು, ಕ್ರೀಡಾಪಟುಗಳು, ವಿಷಯತಜ್ಞರು ಮತ್ತು ಭಾಗೀದಾರರ ಜೊತೆ ಸಮಾಲೋಚಿಸಿದ ನಂತರ ಕ್ರೀಡಾನೀತಿಯನ್ನು ರೂಪಿಸಲಾಗಿದೆ.

"ಹಿಂದಿನ 10 ವರ್ಷಗಳ ಅನುಭವ ಬಳಸಿಕೊಂಡಿದ್ದು, ಹೊಸ ನೀತಿಯು ಕ್ರೀಡೆಗಳ ಸಬಲೀಕರಣದ ಗುರಿಹೊಂದಿದೆ. ಭಾರತವನ್ನು 2047ರ ಒಳಗೆ ಜಗತ್ತಿನ ಐದು ಅಗ್ರ ರಾಷ್ಟ್ರಗಳಲ್ಲಿ ಒಂದಾಗಿಸುವ ಉದ್ದೇಶವನ್ನು ಹೊಂದಿದೆ" ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.

‘ಈ ಮೈಲಿಗಲ್ಲು ಯೋಜನೆ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಲ್ಲಿ ಉತ್ತೇಜಿಸಲು, ಅಥ್ಲೀಟುಗಳ ಅಭಿವೃದ್ಧಿಗೆ ಬೆಂಬಲ ನೀಡಲು ಮತ್ತು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ದೇಶವನ್ನು ಪ್ರಬಲ ಶಕ್ತಿಯನ್ನಾಗಿ ರೂಪಿಸಲು ದೂರದೃಷ್ಟಿಯ ಕಾರ್ಯತಂತ್ರ ಹೊಂದಿದೆ’ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ತಿಳಿಸಿದಾರೆ.