Asia Cup 2025: ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದೆಂದ ಕೇದರ್ ಜಾಧವ್!
ಫೆಹಲ್ಗಾಮ್ ಸೇರಿದಂತೆ ಭಾರತದ ಗಡಿ ಭಾಗದಲ್ಲಿನ ಭಯೋತ್ಪಾದಕ ದಾಳಿಯ ಕಾರಣ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದೆಂದು ಮಾಜಿ ಕ್ರಿಕೆಟಿಗ ಕೇದರ್ ಜಾಧವ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಆಗ್ರಹಿಸಿದ್ದಾರೆ. ಸೆಪ್ಟಂಬರ್ 9 ರಂದು ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಬಾರದೆಂದ ಕೇದರ್ ಜಾಧವ್.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದು ಎಂದು ಟೀಮ್ ಇಂಡಿಯ ಮಾಜಿ ಕ್ರಿಕೆಟಿಗ ಕೇದರ್ ಜಾಧವ್ (Kedar Jadhav) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯನ್ನು ಆಗ್ರಹಿಸಿದ್ದಾರೆ. ಏಷ್ಯಾ ಕಪ್ ಟೂರ್ನಿಯು ಸೆಪ್ಟಂಬರ್ 9 ರಂದು ಆರಂಭವಾಗಲಿದೆ. ಆದರೆ, ಈ ಟೂರ್ನಿಯಲ್ಲಿ ಭಾರತ ತಂಡ, ಪಾಕಿಸ್ತಾನ ವಿರುದ್ಧ ಆಡಬಾರದು ಎಂದು ಹೇಳಿದ್ದಾರೆ. ಅಂದ ಹಾಗೆ ಸೆಪ್ಟಂಬರ್ 14 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.
ಫೆಹಲ್ಗಾಮ್, ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ದಾಳಿ ನಡೆಸಿತ್ತು. ಈ ಕಾರಣದಿಂದಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಕೇದರ್ ಜಾಧವ್ ಅವರು ಪಾಕ್ ವಿರುದ್ದ ಭಾರತ ತಂಡ ಆಡಬಾರದೆಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.
Asia Cup 2025: ಶುಭಮನ್ ಗಿಲ್ ಅಲ್ಲ! ಭಾರತ ತಂಡಕ್ಕೆ ನೇರವಾಗಿ ಆಯ್ಕೆಯಾಗಬಲ್ಲ ಆಟಗಾರರನ್ನು ಆರಿಸಿದ ಆರ್ ಅಶ್ವಿನ್
ಭಾರತ ತಂಡ ಏಷ್ಯಾ ಕಪ್ ಟೂರ್ನಿಯಿಂದ ಹೊರ ಬೀಳಬಹುದೆಂಬ ಊಹಾಪೋಹವಿದ್ದರೂ, ತಟಸ್ಥ ಸ್ಥಳವಾದ ಯುಎಇಯಲ್ಲಿ ಭಾಗವಹಿಸಲು ಬಿಸಿಸಿಐ ನಿರ್ಧರಿಸಿತು. ಆಗಸ್ಟ್ 14 ರಂದು ಭಾರತ ಮತ್ತು ಪಾಕಿಸ್ತಾನ ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ, ಎರಡೂ ತಂಡಗಳು ಫೈನಲ್ ತಲುಪಿದರೆ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
"ಭಾರತ ತಂಡ, ಪಾಕಿಸ್ತಾನ ವಿರುದ್ಧ ಆಡಬಾರದು ಅಂತ ನನಗನ್ನಿಸುತ್ತೆ. ಭಾರತ ಆಡುವುದಿಲ್ಲ ಎಂತಲೂ ನಾನು ನಂಬುತ್ತೇನೆ. ಭಾರತ (ಪಾಕಿಸ್ತಾನ) ಎಲ್ಲೇ ಎದುರಾದರೂ ಗೆಲ್ಲುತ್ತದೆ. ಆದರೆ ಈ ಪಂದ್ಯ ಖಂಡಿತಾ ನಡೆಯಬಾರದು. ಹಾಗಾಗುವುದಿಲ್ಲ ಅಂತ ನಾನು ವಿಶ್ವಾಸದಿಂದ ಹೇಳಬಲ್ಲೆ," ಎಂದು ಜಾಧವ್ ಎಎನ್‌ಐಗೆ ತಿಳಿಸಿದ್ದಾರೆ.
Asia Cup 2025: ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಬೇಕೆಂದ ಆಕಾಶ್ ಚೋಪ್ರಾ!
ಜುಲೈ-ಆಗಸ್ಟ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ಟಿ20 ಸ್ಪರ್ಧೆಯಾದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್ ತಂಡ, ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಿತ್ತು ಅದರಲ್ಲಿ ಸೆಮಿಫೈನಲ್ ಪಂದ್ಯ ಕೂಡ ಒಂದಾಗಿತ್ತು. ಆದಾಗ್ಯೂ, ಸರ್ಕಾರ ಅನುಮತಿ ನೀಡಿದರೆ ಏಷ್ಯಾಕಪ್ ಪಂದ್ಯ ನಡೆಯಲಿದೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದರು.
"ಭಾರತ-ಪಾಕಿಸ್ತಾನ ಕ್ರಿಕೆಟ್ ಯಾವಾಗಲೂ ಸರ್ಕಾರದ ಅನುಮೋದನೆಯ ಮೇಲೆ ಅವಲಂಬಿತವಾಗಿದೆ. ಸರ್ಕಾರ ಪಂದ್ಯಕ್ಕೆ ಅನುಮತಿಸಿದರೆ ಮಾತ್ರ ಪಾಕ್ ಎದುರು ಟೀಮ್ ಇಂಡಿಯಾ ಆಡಲಿದೆ. ಭಯೋತ್ಪಾದನೆ ನಿಲ್ಲಬೇಕು ಎಂದು ನಾನು ಮೊದಲೇ ಹೇಳಿದ್ದೇನೆ. ಆದರೆ ಸರ್ಕಾರ ಅನುಮತಿ ನೀಡಿದರೆ ಮಾತ್ರ ಪಂದ್ಯದಲ್ಲಿ ಮುಂದುವರಿಯಬೇಕು," ಎಂದು ಗಂಗೂಲಿ ಕಳೆದ ತಿಂಗಳು ಹೇಳಿದ್ದರು.