IPL 2026: ಸಿಕ್ಸರ್ ಮೂಲಕ ಐಪಿಎಲ್‌ನಲ್ಲಿ ಭಾರತೀಯ ದಾಖಲೆ ನಿರ್ಮಿಸಿದ ಸೂರ್ಯವಂಶಿ
Vaibhav Sooryavanshi: ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಆರಂಭಿಕ ಹಂತದಲ್ಲಿ ಎಚ್ಚರಿಕೆಯಿಂದ ಆಟ ಆರಂಭಿಸಿದರು. ಮೊದಲ 10 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿದರು. ಆದರೆ ಆ ಬಳಿಕ ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು.
Vaibhav Sooryavanshi -
ಜೈಪುರ, ಮೇ 20: ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಋತುವಿನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂತರ ವೈಭವ್ ಸೂರ್ಯವಂಶಿ(Vaibhav Sooryavanshi) ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಮೇ 19, ಮಂಗಳವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್(RR vs LSG) ನಡುವಿನ ಪಂದ್ಯದ ವೇಳೆ 15 ವರ್ಷದ ವೈಭವ್ ಸೂರ್ಯವಂಶಿ ಈ ಮೈಲಿಗಲ್ಲು ಸಾಧಿಸಿದರು.
ಸೂರ್ಯವಂಶಿ 38 ಎಸೆತಗಳಲ್ಲಿ 93 ರನ್ ಗಳಿಸಿದರು, ಏಳು ಬೌಂಡರಿಗಳು ಮತ್ತು 10 ಸಿಕ್ಸರ್‌ಗಳ ಮೂಲಕ ಪ್ರಬಲ ಹೊಡೆತವನ್ನು ಪ್ರದರ್ಶಿಸಿದರು. ಎಡಗೈ ಬೌಲರ್ ಕ್ರಿಸ್ ಗೇಲ್ (2012, 2013) ಮತ್ತು ಆಂಡ್ರೆ ರಸೆಲ್ (2019) ನಂತರ ಐಪಿಎಲ್ ಇತಿಹಾಸದಲ್ಲಿ ಒಂದೇ ಐಪಿಎಲ್ ಋತುವಿನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೂರ್ಯವಂಶಿ ಈಗ ನಡೆಯುತ್ತಿರುವ ಆವೃತ್ತಿಯಲ್ಲಿ 13 ಪಂದ್ಯಗಳಿಂದ 53 ಸಿಕ್ಸರ್‌ಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದಾರೆ.
2012 ರಲ್ಲಿ ಗೇಲ್ 59 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ರಾಯಲ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೂ, ಸೂರ್ಯವಂಶಿ ಇನ್ನೂ ಕನಿಷ್ಠ ಒಂದು ಪಂದ್ಯವನ್ನು ಬಾಕಿ ಉಳಿಸಿಕೊಂಡಿದ್ದಾರೆ, ಆ ಪಂದ್ಯದಲ್ಲಿ ಅವರು 7 ಸಿಕ್ಸರ್ ಬಾರಿಸಿದರೆ ಕ್ರಿಸ್ ಗೇಲ್(59) ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲಿದ್ದಾರೆ.
ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
ಕ್ರಿಸ್ ಗೇಲ್ (2012) - 59 ಸಿಕ್ಸರ್‌ಗಳು
ವೈಭವ್ ಸೂರ್ಯವಂಶಿ (2026) - 53 ಸಿಕ್ಸರ್‌ಗಳು
ಆಂಡ್ರೆ ರಸೆಲ್ (2019) - 52 ಸಿಕ್ಸರ್‌ಗಳು
ಕ್ರಿಸ್ ಗೇಲ್ (2013) - 51 ಸಿಕ್ಸರ್‌ಗಳು
ಜೋಸ್ ಬಟ್ಲರ್ (2022) - 45 ಸಿಕ್ಸರ್‌ಗಳು
ಕ್ರಿಸ್ ಗೇಲ್ (2011) - 44 ಸಿಕ್ಸರ್‌ಗಳು
'ನಮ್ಮದು F*** ಉತ್ತಮ ತಂಡ'; ಸೋಲಿನ ಬೆನ್ನಲ್ಲೇ ಪಂತ್ ವಿವಾದಾತ್ಮಕ ಹೇಳಿಕೆ
ಲಖನೌ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಆರಂಭಿಕ ಹಂತದಲ್ಲಿ ಎಚ್ಚರಿಕೆಯಿಂದ ಆಟ ಆರಂಭಿಸಿದರು. ಮೊದಲ 10 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿದರು. ಆದರೆ ಆ ಬಳಿಕ ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಮಿಚೆಲ್ ಮಾರ್ಷ್ (96) ಮತ್ತು ಜೋಶ್ ಇಂಗ್ಲಿಸ್ (60) ಅವರ ಬ್ಯಾಟಿಂಗ್ ಬಲದಿಂದ 5 ವಿಕೆಟ್‌ಗಳಿಗೆ 220 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಐದು ಎಸೆತಗಳು ಬಾಕಿ ಇರುವಂತೆ 3 ವಿಕೆಟ್‌ಗೆ 225 ರನ್ ಗಳಿಸಿ ಸಂಭ್ರಮಿಸಿತು.