ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಸ್ಫೋಟಕ ಬ್ಯಾಟಿಂಗ್‌; 36 ಎಸೆತಗಳಲ್ಲಿ ಶತಕ ಬಾರಿಸಿದ ಸೂರ್ಯವಂಶಿ

Vijay Hazare Trophy: ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್‌ನಲ್ಲಿ 16 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಒಟ್ಟು 84 ಎಸೆತಗಳಿಂದ 190 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ನೆರವಿನಿಂದ ತಂಡ 500 ರನ್‌ ಗಡಿ ದಾಟಿದೆ.

ವಿಜಯ್‌ ಹಜಾರೆ ಟ್ರೋಫಿ; 36 ಎಸೆತಗಳಲ್ಲಿ ಶತಕ ಬಾರಿಸಿದ ಸೂರ್ಯವಂಶಿ

ವೈಭವ್‌ ಸೂರ್ಯವಂಶಿ -

Abhilash BC
Abhilash BC Dec 24, 2025 12:21 PM

ರಾಂಚಿ, ಡಿ.24: ಬಿರುಸಿನ ಬ್ಯಾಟಿಂಗ್‌ ಮೂಲಕ ಈಗಾಗಲೇ ಹಲವು ಶತಕ ಬಾರಿಸಿ ಮಿಂಚಿರುವ 14 ವರ್ಷದ ವೈಭವ್‌ ಸೂರ್ಯವಂಶಿ(Vaibhav Suryavanshi) ಇದೀಗ ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 36 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಬುಧವಾರ ಆರಂಭಗೊಂಡ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಸೂರ್ಯವಂಶಿ ಅಮೋಘ ಶತಕ ಬಾರಿಸಿ ಮಿಂಚಿದರು. ಶತಕದ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್‌ ಎನಿಸಿದರು. ದಾಖಲೆ ಅನ್ಮೋಲ್‌ಪ್ರೀತ್ ಸಿಂಗ್ ಹೆಸರಿನಲ್ಲಿದೆ. ಅವರು 35 ಎಸೆತದಿಂದ ಈ ಮೈಲುಗಲ್ಲು ನಿರ್ಮಿಸಿದ್ದರು. 2024 ರಲ್ಲಿ ಪಂಜಾಬ್ ಪರ 35 ಎಸೆತಗಳಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ ಶತಕ ಬಾರಿಸಿದ್ದರು.

ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್‌ನಲ್ಲಿ 16 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಒಟ್ಟು 84 ಎಸೆತಗಳಿಂದ 190 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ನೆರವಿನಿಂದ ತಂಡ 500 ರನ್‌ ಗಡಿ ದಾಟಿದೆ.

ಲಿಸ್ಟ್ ಎ ನಲ್ಲಿ ಭಾರತೀಯನೊಬ್ಬ ಗಳಿಸಿದ ವೇಗದ ಶತಕಗಳು

35 ಎಸೆತಗಳು: ಅನ್ಮೋಲ್‌ಪ್ರೀತ್ ಸಿಂಗ್ (ಪಂಜಾಬ್)

36 ಎಸೆತಗಳು: ವೈಭವ್ ಸೂರ್ಯವಂಶಿ (ಬಿಹಾರ)

40 ಎಸೆತಗಳು: ಯೂಸುಫ್ ಪಠಾಣ್ (ಬರೋಡಾ)

41 ಎಸೆತಗಳು: ಉರ್ವಿಲ್ ಪಟೇಲ್ (ಗುಜರಾತ್)

42 ಎಸೆತಗಳು: ಅಭಿಷೇಕ್ ಶರ್ಮಾ (ಪಂಜಾಬ್)

ಇತ್ತೀಚೆಗೆ ಮಹಾರಾಷ್ಟ್ರ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯವಂಶಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದರು. ಏಳು ಸಿಕ್ಸರ್‌ಗಳು ಮತ್ತು ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಬಾರಿಸಿದ್ದರು.

U19 ಏಷ್ಯಾ ಕಪ್‌ನಲ್ಲಿ ದಾಖಲೆಯ ಶತಕ ಬಾರಿಸಿದ ವೈಭವ್ ಸೂರ್ಯವಂಶಿ

ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಯುಎಇ ವಿರುದ್ಧವೇ ಕೇವಲ 32 ಎಸೆತಗಳಲ್ಲಿ ಸಿಕ್ಸರ್‌ಗಳ ಸುರಿಮಳೆಯೊಂದಿಗೆ ಶತಕವನ್ನು ಪೂರ್ಣಗೊಳಿಸಿದ್ದರು. 42 ಎಸೆತಗಳ ಇನಿಂಗ್ಸ್‌ 15 ಸಿಕ್ಸರ್‌ಗಳು ಮತ್ತು 13 ಬೌಂಡರಿಗಳನ್ನು ಒಳಗೊಂಡಂತೆ 144 ರನ್‌ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಬರೆದಿದ್ದರು.