ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Virat Kohli: ಒಂದು ಶತಕ, ಹಲವು ದಾಖಲೆ ಬರೆದ ವಿರಾಟ್‌ ಕೊಹ್ಲಿ

IPL 2026: ವಿರಾಟ್ ಕೊಹ್ಲಿ ಅತಿ ಕಡಿಮೆ ಟಿ20 ಮಾದರಿಯಲ್ಲಿ 14000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷ ವಯಸ್ಸಿನ ಅವರು ಈಗಾಗಲೇ 13000 ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಏಕೈಕ ಭಾರತೀಯರಾಗಿದ್ದರು. ಪಂದ್ಯದಲ್ಲಿ 78 ರನ್‌ ಪೂರ್ತಿಗೊಳಿಸುತ್ತಿದ್ದಂತೆ ಅವರು ಈ ಮೈಲುಗಲ್ಲು ನೆಟ್ಟರು.

ಒಂದು ಶತಕ, ಹಲವು ದಾಖಲೆ ಬರೆದ ವಿರಾಟ್‌ ಕೊಹ್ಲಿ

Virat Kohli -

Abhilash BC
Abhilash BC May 14, 2026 7:09 AM

ರಾಯ್ಪುರ, ಮೇ 14: ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಶೂನ್ಯ ಸುತ್ತಿದ್ದ ವಿರಾಟ್‌ ಕೊಹ್ಲಿ(Virat Kohli) ಬುಧವಾರ ನಡೆದಿದ್ದ ಕೋಲ್ಕತಾ ನೈಟ್‌ ರೈಡರ್ಸ್‌(KKR vs RCB) ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿ ಶತಕ ಸಂಭ್ರಮಿಸಿದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು.

ವಿರಾಟ್ ಕೊಹ್ಲಿ ಅತಿ ಕಡಿಮೆ ಟಿ20 ಮಾದರಿಯಲ್ಲಿ 14000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷ ವಯಸ್ಸಿನ ಅವರು ಈಗಾಗಲೇ 13000 ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಏಕೈಕ ಭಾರತೀಯರಾಗಿದ್ದರು. ಪಂದ್ಯದಲ್ಲಿ 78 ರನ್‌ ಪೂರ್ತಿಗೊಳಿಸುತ್ತಿದ್ದಂತೆ ಅವರು ಈ ಮೈಲುಗಲ್ಲು ನೆಟ್ಟರು.

ಟಿ20 ಕ್ರಿಕೆಟ್‌ನಲ್ಲಿ ಭಾರತೀಯರಿಂದ ಅತಿ ಹೆಚ್ಚು ರನ್‌ಗಳು

ವಿರಾಟ್ ಕೊಹ್ಲಿ: 409 ಇನ್ನಿಂಗ್ಸ್‌ಗಳಲ್ಲಿ 14000 ರನ್‌ಗಳು

ರೋಹಿತ್ ಶರ್ಮಾ: 456 ಇನ್ನಿಂಗ್ಸ್‌ಗಳಲ್ಲಿ 12491 ರನ್‌ಗಳು

ಶಿಖರ್ ಧವನ್: 331 ಇನ್ನಿಂಗ್ಸ್‌ಗಳಲ್ಲಿ 9797 ರನ್‌ಗಳು

ಸೂರ್ಯಕುಮಾರ್ ಯಾದವ್: 345 ಇನ್ನಿಂಗ್ಸ್‌ಗಳಲ್ಲಿ 9654 ರನ್‌ಗಳು

ಸಂಜು ಸ್ಯಾಮ್ಸನ್: 324 ಇನ್ನಿಂಗ್ಸ್‌ಗಳಲ್ಲಿ 8830 ರನ್‌ಗಳು

ಧೋನಿ ದಾಖಲೆ ಪತನ

ಇದಕ್ಕೂ ಮೊದಲು, ಕೊಹ್ಲಿ ಈ ಪಂದ್ಯದಲ್ಲಿ ಕಾಣಿಸಿಕೊಂಡು ಸಾರ್ವಕಾಲಿಕ ಆಟಗಾರ ಎಂಎಸ್ ಧೋನಿ ದಾಖಲೆಯನ್ನು ಮುರಿದರು. ಈ ಪಂದ್ಯವು ಕೊಹ್ಲಿ ಅವರ 279 ನೇ ಐಪಿಎಲ್‌ ಪಂದ್ಯವಾಗಿತ್ತು. ಈ ಮೂಲಕ ಅತ್ಯಧಿಕ ಐಪಿಎಲ್‌ ಪಂದ್ಯವಾಡಿದ ಆಟಗಾರ ಎನಿಸಿದರು. ರೋಹಿತ್‌ ಮತ್ತು ಧೋನಿ ನಂತರದ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರರು

ವಿರಾಟ್ ಕೊಹ್ಲಿ: 279 ಪಂದ್ಯಗಳು- ರಾಯಲ್ ಚಾಲೆಂಜರ್ಸ್ ಬೆಂಗಳೂರು

ಎಂಎಸ್ ಧೋನಿ: 278 ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ ಜಯಂಟ್ಸ್‌

ರೋಹಿತ್ ಶರ್ಮಾ: 278 ಪಂದ್ಯಗಳು- ಡೆಕನ್ ಚಾರ್ಜರ್ಸ್, ಮುಂಬೈ ಇಂಡಿಯನ್ಸ್‌

RCB vs KKR ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಎಂಎಸ್‌ ಧೋನಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ವಿಜೇತರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಸರಿಗಟ್ಟಿದರು. ಒಟ್ಟಾರೆಯಾಗಿ, ಈ ಜೋಡಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎಬಿ ಡಿವಿಲಿಯರ್ಸ್(25) ಅಗ್ರಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ (22) ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯರು

ವಿರಾಟ್ ಕೊಹ್ಲಿ-21

ರೋಹಿತ್ ಶರ್ಮಾ-21

ಎಂಎಸ್ ಧೋನಿ-18

ರವೀಂದ್ರ ಜಡೇಜಾ -17

ಕೆಎಲ್ ರಾಹುಲ್-17

ಯೂಸುಫ್ ಪಠಾಣ್ -16