ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಅವರನ್ನು ವರ್ಣಿಸಲಸಾಧ್ಯ"; ವಿರಾಟ್‌ ಕೊಹ್ಲಿ ಕುರಿತು ಆರ್‌ಸಿಬಿ ನಾಯಕ ಹೇಳಿದ್ದೇನು?

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಪಂದ್ಯದ ಬಳಿಕ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಮಾತನಾಡಿ ತಂಡದ ಉತ್ತಮ ಪ್ರದರ್ಶನದ ಕುರಿತು ಹರ್ಷ ವ್ಯಕ್ತಪಡಿಸಿದರು. ವಿರಾಟ್‌ ಕೊಹ್ಲಿ ಕುರಿತು ಮಾತನಾಡಿದ ಪಟಿದಾರ್‌, ಅವರನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ ಎಂದು ಅವರು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಕುರಿತು ಆರ್‌ಸಿಬಿ ನಾಯಕ ಹೇಳಿದ್ದೇನು?

ಆರ್‌ಸಿಬಿ ನಾಯಕ ರಜತ್‌ ಪಟಿದಾರ್‌ -

Vishakha Bhat Heggar
Vishakha Bhat Heggar Mar 29, 2026 11:19 AM

ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 201 (RCB captain Rajat Patidar) ರನ್ ಕಲೆ ಹಾಕಿತ್ತು. ಬಳಿಕ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದ ಬಳಿಕ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಮಾತನಾಡಿ ತಂಡದ ಉತ್ತಮ ಪ್ರದರ್ಶನದ ಕುರಿತು ಹರ್ಷ ವ್ಯಕ್ತಪಡಿಸಿದರು.

ವಿರಾಟ್‌ ಕೊಹ್ಲಿ ಕುರಿತು ಮಾತನಾಡಿದ ಪಟಿದಾರ್‌, ಅವರನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ. ಅವರು ಪ್ರತಿ ಬಾರಿ ಆಡುವಾಗ, ವಿಶೇಷವಾಗಿ ಚೇಸಿಂಗ್ ಮಾಡುವಾಗ ನಂಬರ್ ಒನ್ ಬ್ಯಾಟರ್ ಆಗಿ ಆಡುತ್ತಾರೆ. ಅಲ್ಲದೆ ಕೊಹ್ಲಿ ಕೊನೆಯವರೆಗೆ ನಿಂತು ಆಡಿದ ರೀತಿ ಅತ್ಯುತ್ತಮವಾಗಿತ್ತು ಎಂದು ಹೇಳಿದ್ದಾರೆ. ಅವರು ನನ್ನ ಆದರ್ಶ, ಮತ್ತು ನಾನು ನೆಟ್ಸ್‌ನಲ್ಲಿ ನೋಡಿದ್ದರಿಂದ, ಪ್ರದರ್ಶನ ನೀಡಲು ಮತ್ತು ಪ್ರಾಬಲ್ಯ ಸಾಧಿಸಲು ಅವರ ಶಕ್ತಿ ಮತ್ತು ಉತ್ಸಾಹ ಇನ್ನೂ ಒಂದೇ ಆಗಿರುತ್ತದೆ. ಅವರಿಂದ ನಾನು ಕಲಿಯುವುದು ಸಾಕಷ್ಟಿದೆ ಎಂದು ಪಟಿದಾರ್‌ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ ಆಡಿದ ರೀತಿ, ಇತರ ಬ್ಯಾಟ್ಸ್‌ಮನ್‌ಗಳಿಗೆ ಭದ್ರ ಬುನಾದಿ ಹಾಕಿತು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾವು ಇಂತಹ ಆಕ್ರಮಣಕಾರಿ ಬ್ಯಾಟಿಂಗ್​ ಅನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಫಿಲ್ ಸಾಲ್ಟ್ ಕುರಿತು ಹೊಗಳಿದ್ದಾರೆ.

RCB vs SRH: ಬೌಂಡರಿ ಲೈನ್‌ನಲ್ಲಿ ಇಶಾನ್‌ ಕಿಶನ್‌ರ ಸ್ಟನಿಂಗ್‌ ಕ್ಯಾಚ್‌ ಪಡೆದ ಫಿಲ್‌ ಸಾಲ್ಟ್‌! ವಿಡಿಯೊ

ಪಂದ್ಯದ ಬಳಿಕ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಾತನಾಡಿದ್ದು, ಇಲ್ಲಿಗೆ ಮರಳಿರುವುದು ಸಂತೋಷ ತಂದಿದೆ. ಕಳೆದ ವರ್ಷ ನಾನು ಆಡಿದ ಕೊನೆಯ ಪಂದ್ಯ ಐಪಿಎಲ್ ಫೈನಲ್ ಆಗಿತ್ತು, ಆದರೆ ಇತ್ತೀಚಿನ ಏಕದಿನ ಸರಣಿಯಲ್ಲಿ ನಾನು ಬ್ಯಾಟಿಂಗ್ ಮಾಡಿದ ರೀತಿ ನನ್ನ ಲಯವನ್ನು ಮರಳಿ ಪಡೆಯಲು ಸಹಾಯ ಮಾಡಿತು. ನಾನು ಸಾಮಾನ್ಯವಾಗಿ ಆಡದ ಹೊಡೆತಗಳನ್ನು ನಾನು ಆಡುತ್ತಿರಲಿಲ್ಲ. ನಾನು ಉತ್ತಮ ಲಯದಲ್ಲಿದ್ದೇನೆ ಎಂದು ನನಗೆ ತಿಳಿದಿದೆ ಮತ್ತು ನನ್ನ ಫಿಟ್ನೆಸ್ ಬಗ್ಗೆಯೂ ವ್ಯಾಪಕವಾಗಿ ಕೆಲಸ ಮಾಡಿದ್ದರಿಂದ, ನನ್ನ ಪ್ರದರ್ಶನವು ಬಲವಾಗಿರುತ್ತದೆ ಎಂದು ನನಗೆ ವಿಶ್ವಾಸವಿತ್ತು. ನಮಗೆ ಉತ್ತಮ ಆರಂಭವನ್ನು ಪಡೆಯಲು ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.