IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ!
Virat Kohli-Anushka Sharma: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 6 ವಿಕೆಟ್‌ಗಳ ಗೆಲುವು ಪಡೆಯಿತು. ಈ ಗೆಲುವಿನ ಬೆನ್ನಲ್ಲೆ ವಿರಾಟ್ ಕೊಹ್ಲಿ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನಡುವೆ ಫ್ಲೈಯಿಂಗ್ ಕಿಸ್. -
ಬೆಂಗಳೂರು: ಜೇಕಬ್ ಡಫಿ ಮಾರಕ ಬೌಲಿಂಗ್ ಹಾಗೂ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿಯ (Virat Kohli) ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಆರ್‌ಸಿಬಿ ಶುಭಾರಂಭ ಕಂಡಿತು. ಅಂದ ಹಾಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ತಾನು ಅತ್ಯುತ್ತಮ ಚೇಸರ್‌ಗಳಲ್ಲಿ ಒಬ್ಬರೆಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಅರ್ಧಶತಕದ ಬಲದಿಂದ ಆರ್‌ಸಿಬಿ, 202 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು. ಆರ್‌ಸಿಬಿ ಪಂದ್ಯವನ್ನು ಗೆದ್ದ ಬೆನ್ನಲ್ಲೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ (Anushka Sharma ನಡುವೆ ಅಪರೂಪದ ಘಟನೆಯೊಂದು ನಡೆಯಿತು.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗನದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಎಸ್‌ಆರ್‌ಎಚ್ ನೀಡಿದ್ದ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕೊನೆಯವರೆಗೂ ಅಜೇಯರಾಗಿ ಬ್ಯಾಟ್ ಮಾಡಿದರು. ದೇವದತ್ ಪಡಿಕ್ಕಲ್ ಜೊತೆ ಶತಕದ ಜೊತೆಯಾಟವನ್ನು ಆಡಿದ ಬಳಿಕ ಕೊಹ್ಲಿ, ನಾಯಕ ರಜತ್ ಪಾಟಿದಾರ್ ಜೊತೆ 53 ರನ್ ಹಾಗೂ ಟಿಮ್ ಡೇವಿಡ್ ಜೊತೆ ಅಜೇಯ 40 ರನ್‌ಗಳ ಜೊತೆಯಾಟವನ್ನು ಆಡಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಕೊಹ್ಲಿ, 38 ಎಸೆತಗಳಲ್ಲಿ ಅಜೇಯ 69 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಆರ್‌ಸಿಬಿ ತಂಡದ ಯಶಸ್ವಿ ಚೇಸ್‌ನಲ್ಲಿ ಕೊಹ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
IPL 206: ಸನ್‌ರೈಸರ್ಸ್ ಹೈದರಾಬಾದ್ ಎದುರು ರಾಯಲ್ ಚಾಲೆಂಜರ್ಸ್‌ಗೆ ಅಧಿಕಾರಯುತ ಗೆಲುವು!
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಫ್ಲೈಯಿಂಗ್ ಕಿಸ್
ಹರ್ಷಲ್ ಪಟೇಲ್ ಎಸೆದಿದ್ದ 16ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಉಗ್ರ ಸ್ವರೂಪವನ್ನು ತೋರಿದರು. ಅವರು ಮೊದಲನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಹಾಗೂ ನಂತರ ಸತತ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಬೌಂಡರಿಯನ್ನು ಬಾರಿಸಿದರು. ಆ ಮೂಲಕ ಆರ್‌ಸಿಬಿ ಪರ ಕೊಹ್ಲಿ ವಿನ್ನಿಂಗ್ ಶಾಟ್ ಹೊಡೆದು ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪತ್ನಿ ಅನುಷ್ಕಾ ಶರ್ಮಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಕೂಡ ಫ್ಲೈಯಿಂಗ್ ಕಿಸ್ ಕೊಟ್ಟರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Picking up exactly where they left off! ❤️
— IndianPremierLeague (@IPL) March 28, 2026
Defending champions #RCB kick off their #TATAIPL 2026 campaign with a clinical, comprehensive victory over #SRH 👏
Updates ▶️ https://t.co/Eo5z0jh4K4 #KhelBindaas | #RCBvSRH | @RCBTweets pic.twitter.com/q3IAaMP3LK
ವಿರಾಟ್ ಕೊಹ್ಲಿ ಆರಂಭದಿಂದಲೇ ಅತ್ಯುತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಿಂದ ದೂರವಾದರೂ, ಅವರ ಆಟದಲ್ಲಿ ಯಾವುದೇ ಕುಂದು ಕಾಣಿಸಲಿಲ್ಲ. ಆರಂಭದಲ್ಲಿ ಸ್ಟ್ರೈಕ್ ರೋಟೇಟ್ ಮಾಡುತ್ತಾ, ಸೂಕ್ತ ಸಮಯದಲ್ಲಿ ವೇಗ ಹೆಚ್ಚಿಸಿ ಚೇಸ್ ಅನ್ನು ಸುಂದರವಾಗಿ ನಿರ್ವಹಿಸಿದ ಅವರು, ಮತ್ತೊಮ್ಮೆ ರನ್ ಚೇಸ್ ಮಾಸ್ಟರ್ ಎಂಬ ತಮ್ಮ ಖ್ಯಾತಿಯನ್ನು ಸಾಬೀತುಪಡಿಸಿದರು.
ಅವರಿಗೆ ದೇವದತ್ ಪಡಿಕ್ಕಲ್ ಉತ್ತಮ ಬೆಂಬಲ ನೀಡಿದರು. ಅವರು ಕೇವಲ 26 ಚೆಂಡುಗಳಲ್ಲಿ 61 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಪಡಿಕ್ಕಲ್ ಅವರ ಆಕ್ರಮಣಕಾರಿ ಆಟದಿಂದ ಆರ್‌ಸಿಬಿ ಅಗತ್ಯ ರನ್‌ರೇಟ್ ಅನ್ನು ಸಂಪಾದಿಸಿತು. ಇದೇ ವೇಳೆ ನಾಯಕ ರಜತ್ ಪಾಟಿದಾರ್ ಕೂಡ 12 ಎಸೆತಗಳಲ್ಲಿ ವೇಗದ 31 ರನ್‌ಗಳನ್ನು ಸೇರಿಸಿ ತಂಡದ ಗತಿಯನ್ನೇ ಮುಂದುವರಿಸಿದರು.
RCB vs SRH: ಬೌಂಡರಿ ಲೈನ್‌ನಲ್ಲಿ ಇಶಾನ್ ಕಿಶನ್‌ರ ಸ್ಟನಿಂಗ್ ಕ್ಯಾಚ್ ಪಡೆದ ಫಿಲ್ ಸಾಲ್ಟ್! ವಿಡಿಯೊ
ಇದಕ್ಕೂ ಮೊದಲು, ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಹಿನ್ನಡೆಯಿಂದ ಹೊರಬಂದು 9 ವಿಕೆಟ್ ನಷ್ಟಕ್ಕೆ 201 ರನ್‌ಗಳನ್ನು ಗಳಿಸಿತ್ತು. ಆದರೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಪ್ರಭಾವಿ ಪ್ರದರ್ಶನದ ಎದುರು ಆ ಮೊತ್ತ ಸಾಕಾಗಲಿಲ್ಲ. ಪಂದ್ಯವನ್ನು ವೀಕ್ಷಿಸಲು ಸ್ಟ್ಯಾಂಡ್‌ಗಳಲ್ಲಿ ಸ್ಮೃತಿ ಮಾಂಧನಾ, ಶ್ರೇಯಾಂಕ ಪಾಟೀಲ್ ಮತ್ತು ಜೆಮೀಮಾ ರೊಡ್ರಿಗಸ್ ಸೇರಿದಂತೆ ಹಲವರು ಹಾಜರಿದ್ದು, ಸೀಸನ್ ಆರಂಭದ ಉತ್ಸಾಹವನ್ನು ಹೆಚ್ಚಿಸಿದರು.
ಇದರ ನಡುವೆ, ಆರ್‌ಸಿಬಿ ಬೌಲರ್‌ಗಳು ಮೊದಲೇ ಉತ್ತಮ ವೇದಿಕೆ ಸೃಷ್ಟಿಸಿದ್ದರು. ಡೆಬ್ಯೂ ಮಾಡಿದ ಜೇಕಬ್ ಡಫಿ ತಮ್ಮ ನಾಲ್ಕು ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಪಂದ್ಯ ಅ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.